Actress: ವನಿತಾ ವಿಜಯ್​ಕುಮಾರ್ ಆ ನೃತ್ಯ ನಿರ್ದೇಶಕನೊಂದಿಗೆ 4ನೇ ಮದುವೆಯಾಗ್ತಾರಾ? ಇದು ನಿಜಾನಾ?

Actress
Published on

ಚೆನ್ನೈ: ನಟಿ(Actress) ವನಿತಾ ವಿಜಯಕುಮಾರ್ ನೃತ್ಯ ಸಂಯೋಜಕ ರಾಬರ್ಟ್ ಜೊತೆ 4ನೇ ಮದುವೆಯಾಗ್ತಾರೆ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದು, ಇದಕ್ಕೆ ನಟಿ ಸ್ಪಷ್ಟನೆ ನೀಡಿದ್ದಾರೆ.

ಇಷ್ಟಕ್ಕೂ ನಡೆದಿದ್ದಾದರೂ ಏನು ಎಂಬ ಬಗ್ಗೆ ನೋಡುವುದಾದರೆ, ನಟಿ ತಮ್ಮ ಮುಂಬರುವ ಚಿತ್ರ ಮಿಸ್ಟರ್ಸ್​ ಮತ್ತು ಮಿಸ್ಟರ್​ ಗಾಗಿ ಪ್ರೋಮೋವನ್ನು ಹಂಚಿಕೊಂಡಿದ್ದರು. ಅಲ್ಲಿ ಅವರು ನೃತ್ಯ ಸಂಯೋಜಕ ರಾಬರ್ಟ್ ರಾಜ್ ಅವರಿಗೆ ಪ್ರಪೋಸ್​ ಮಾಡುವ ರೀತಿಯ ಚಿತ್ರ ಅದಾಗಿತ್ತು.

ಆದರೆ ಅವರು ತಮ್ಮ ಮುಂಬರುವ ಚಿತ್ರದ ಪ್ರೋಮೋ ಎಂದು ಹೇಳಿಕೊಂಡಿರಲಿಲ್ಲ. ವನಿತಾ ವಿಜಯಕುಮಾರ್ ಅವರು ರಾಬರ್ಟ್‌ ಅವರಿಗೆ ಮದುವೆಗೆ ಪ್ರಸ್ತಾಪಿಸುತ್ತಿರುವ ಎರಡು ಚಿತ್ರಗಳನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗ ಅವರ ಮದುವೆಯ ಬಗ್ಗೆ ಊಹಾಪೋಹಗಳು ಪ್ರಾರಂಭವಾದವು.

ಚಿತ್ರಗಳ ಮೇಲಿನ ಟ್ಯಾಗ್​ ನಲ್ಲಿ “ಅಕ್ಟೋಬರ್ 5, 2024 ರ ದಿನಾಂಕವನ್ನು ಹಾಕಲಾಗಿದೆ. ವನಿತಾ ವಿಜಯಕುಮಾರ್ , ರಾಬರ್ಟ್.” ಅವರು ಚಿತ್ರಗಳನ್ನು ಹಂಚಿಕೊಂಡ ತಕ್ಷಣ, ಅಭಿಮಾನಿಗಳು ಹುಚ್ಚೆದ್ದು, ಜೀವನದಲ್ಲಿ ಹೊಸ ಆರಂಭಕ್ಕಾಗಿ ಅವರನ್ನು ಅಭಿನಂದಿಸಲು ಶುರು ಮಾಡಿದರು.

ವನಿತಾ ತಮಿಳಿನ ಹಿರಿಯ ನಟ ವಿಜಯಕುಮಾರ್ ಪುತ್ರಿಯಾಗಿದ್ದು, ಅವರು ಮೊದಲು 2000 ರಲ್ಲಿ ನಟ ಆಕಾಶ್ ಅವರೊಂದಿಗೆ ಏಳುಹೆಜ್ಜೆ ಹಾಕಿದರು. ಅವರಿಗೆ ಇಬ್ಬರು ಮಕ್ಕಳಾದರು. ಆದರೆ ದಂಪತಿ 2005 ರಲ್ಲಿ ತಮ್ಮ ಮದುವೆಯನ್ನು ಕೊನೆಗೊಳಿಸಿದರು. ನಂತರ, 2007 ರಲ್ಲಿ ಉದ್ಯಮಿ ಆನಂದ್ ಜಯ್ ರಾಜನ್ ರೊಂದಿಗೆ ವನಿತಾ ಮರು ವಿವಾಹವಾದರು. ಅವರಿಗೆ ಒಬ್ಬ ಮಗಳಿದ್ದಾಳೆ. ಆದರೆ ಮತ್ತೊಮ್ಮೆ ಆಕೆಯ ಮದುವೆಯು 2012 ರಲ್ಲಿ ವಿಚ್ಛೇದನದಲ್ಲಿ ಕೊನೆಗೊಂಡಿತು.

ತನ್ನ ಎರಡನೇ ವಿಚ್ಛೇದನದ ನಂತರ, ನಟಿ ಛಾಯಾಗ್ರಾಹಕ ಪೀಟರ್ ಪಾಲ್ ಅವರೊಂದಿಗೆ ಡೇಟಿಂಗ್ ನಡೆಸಿದರು. ಕೆಲವು ವರ್ಷಗಳ ನಂತರ ಅವರು ಮದುವೆಯಾದರು, ಇದು ಪೀಟರ್ ಅವರ ಪತ್ನಿ ಎಲಿಜಬೆತ್ ಮತ್ತೆ ಮದುವೆಯಾಗುವ ಮೊದಲು ಅಧಿಕೃತ ವಿಚ್ಛೇದನವನ್ನು ಪಡೆಯದಿದ್ದಕ್ಕಾಗಿ ದಂಪತಿಗಳ ವಿರುದ್ಧ ಪೊಲೀಸ್ ಪ್ರಕರಣವನ್ನು ದಾಖಲಿಸಲು ಕಾರಣವಾಯಿತು. ಆದಾಗ್ಯೂ, ವನಿತಾ ಅವರ ವಿವಾಹವು ಪೀಟರ್ ಅವರೊಂದಿಗಿನ ಪರಸ್ಪರ ಒಪ್ಪಿಗೆಯ ಮೇರೆಗೆ 2020 ರಲ್ಲಿ ಕೊನೆಗೊಂಡಿತು.

ಬಳಿಕ ವನಿತಾ ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದು, 10 ವರ್ಷಗಳಿಗೂ ಹೆಚ್ಚು ಕಾಲ ಖಿನ್ನತೆಯಿಂದ ಬಳಲುತ್ತಿದ್ದಳು ಈಗ ಮತ್ತೊಮ್ಮೆ ಮದುವೆ ಬಗ್ಗೆ ಊಹಾಪೋಹ ಗರಿಗೆದರಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net