Rape Case: ಪತ್ನಿಗೆ ನಶೆ ಏರಿಸಿ 72 ಜನರಿಂದ ರೇಪ್​ ಮಾಡಿಸಿದ ಪತಿ! ವೀಡಿಯೋ ವೀಕ್ಷಣೆಗೆ ಸಾರ್ವಜನಿಕರಿಗೆ ಅನುಮತಿಸಿದ ಕೋರ್ಟ್​!!

rape
ಸಾಂದರ್ಭಿಕ ಚಿತ್ರ
Published on

Rape Case, french court, public

ಲಂಡನ್​: ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಮಾದಕ ದ್ರವ್ಯ ನೀಡಿ 72 ಜನರೊಂದಿಗೆ ಅತ್ಯಾಚಾರವೆಸಗಲು ಬಿಟ್ಟ ಅಮಾನವೀಯ ಘಟನೆ ಫ್ರಾನ್ಸ್‌ನಲ್ಲಿ ಇದೀಗ ಸಂಚಲನ ಮೂಡಿಸಿದೆ. ಈ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಧೀಶರು ಅಚ್ಚರಿ ಹೇಳಿಕೆ ನೀಡಿದ್ದಾರೆ. ವಿಡಿಯೋ ಸಾಕ್ಷ್ಯವನ್ನು ಪ್ರಸ್ತುತಪಡಿಸುವಾಗ ನ್ಯಾಯಾಲಯದಲ್ಲಿ ಸಾರ್ವಜನಿಕರೂ ವೀಕ್ಷಿಸಬಹುದು ಎಂದು ಹೇಳಿದ್ದಾರೆ. (Rape Case)

ಆದರೆ ಆ ಸಮಯದಲ್ಲಿ ಸೂಕ್ಷ್ಮ ಮನಸ್ಸಿನವರು ಮತ್ತು ಅಪ್ರಾಪ್ತರು ನ್ಯಾಯಾಲಯದ ಆಸುಪಾಸಿನಲ್ಲಿ ಉಳಿಯದಂತೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆದೇಶಿಸಲಾಗಿದೆ. ಸತ್ಯ ಬಹಿರಂಗಪಡಿಸುವ ಸಲುವಾಗಿ ಅಗತ್ಯವಿದ್ದರೆ ಸಂಪೂರ್ಣ ವೀಡಿಯೋ ಪ್ರಸ್ತುತಪಡಿಸಲಾಗುತ್ತದೆ ಎಂದು ತಿಳಸಿದ್ದಾರೆ.

ಏನಿದು ಪ್ರಕರಣ? Rape Case

ಫ್ರಾನ್ಸ್‌ನ ಸಾರ್ವಜನಿಕ ವಲಯದ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿರುವ 71 ವರ್ಷದ ಆರೋಪಿ ಹಲವಾರು ವರ್ಷಗಳಿಂದ ತನ್ನ ಪತ್ನಿಯೊಂದಿಗೆ ಅತ್ಯಂತ ಕ್ರೂರವಾಗಿ ವರ್ತಿಸಿದ್ದಾನೆ. ರಾತ್ರಿ ವೇಳೆ ಆಕೆಗೆ ಆಹಾರದಲ್ಲಿ ರಹಸ್ಯವಾಗಿ ಮಾದಕ ದ್ರವ್ಯ ಸೇರಿಸುತ್ತಿದ್ದ. ಆಕೆಗೆ ನಶೆ ಏರಿದ ಕೂಡಲೇ ಆತ ಹಲವರನ್ನು ಮನೆಗೆ ಕರೆತಂದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ವೆಸಗಲು ಬಿಡುತ್ತಿದ್ದ. ಗುಪ್ತ ಕ್ಯಾಮೆರಾಗಳಲ್ಲಿ ಅವುಗಳನ್ನು ರೆಕಾರ್ಡ್ ಮಾಡಿದ ವ್ಯಕ್ತಿ ಸುಮಾರು ಹತ್ತು ವರ್ಷದಿಂದ ಆಕೆಯನ್ನು ಶೋಷಿಸುತ್ತಲೇ ಇದ್ದ ಎನ್ನಲಾಗಿದೆ.

2011ರಿಂದ 2020ರ ನಡುವೆ ಆಕೆಯನ್ನು ವ್ಯಭಿಚಾರಕ್ಕೆ ದೂಡಿದ್ದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. 2020 ರಲ್ಲಿ ಶಾಪಿಂಗ್ ಸೆಂಟರ್‌ನಲ್ಲಿ ಕೆಲವು ಮಹಿಳೆಯರನ್ನು ರಹಸ್ಯವಾಗಿ ಚಿತ್ರೀಕರಿಸುತ್ತಿದ್ದ ಆರೋಪಿಯನ್ನು ಭದ್ರತಾ ಸಿಬ್ಬಂದಿ ಸೆರೆ ಹಿಡಿದಿದ್ದರು. ನಂತರ ಪೊಲೀಸರು ಆತನ ಫೋನ್ ಮತ್ತು ಕಂಪ್ಯೂಟರ್ ಪರಿಶೀಲಿಸಿದಾಗ ಪತ್ನಿಯ ಮೇಲೆ ಈತ ಮಾಡಿರುವ ದುಷ್ಕೃತ್ಯ ಬೆಳಕಿಗೆ ಬಂದಿದೆ.

ಅಪರಿಚಿತರಿಂದ ಆಕೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ನೂರಾರು ಫೋಟೋಗಳು ಮತ್ತು ವೀಡಿಯೊಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಇವು ಪ್ರಕರಣಕ್ಕೆ ಪ್ರಮುಖ ಸಾಕ್ಷಿಯಾಗಿವೆ.

ಒಟ್ಟು 72 ಜನರಿಂದ 92 ಬಾರಿ ಆಕೆಯ ಮೇಲೆ ಅತ್ಯಾಚಾರ ಎಸಗಿರುವುದು ತನಿಖೆಯಿಂದ ತಿಳಿದುಬಂದಿದೆ. ಈ ದುಷ್ಕೃತ್ಯ ಎಸಗಿದವರ ವಯಸ್ಸು 26 ರಿಂದ 73 ವರ್ಷ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಅವರಲ್ಲಿ 51 ಮಂದಿಯನ್ನು ಗುರುತಿಸಲಾಗಿದ್ದು, ಉಳಿದವರು ಎಲ್ಲಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net