ಸುಳ್ಳು ವದಂತಿಗಳಿಗೆ ನಾನು ಪ್ರತಿಕ್ರಿಯೆ ನೀಡಲ್ಲ ಆದ್ರೆ…: ನಟ ವಿಶಾಲ್

Untitled design - 2023-08-11T200153.565
Published on

ತಮಿಳುನಾಡು: ಕಾಲಿವುಡ್​ ನಟ ವಿಶಾಲ್​ ಮದುವೆ ಸುದ್ದಿ ಕುರಿತು ಕಳೆದ ಹಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಭಾರೀ ವದಂತಿಗಳು ಹರಿದಾಡುತ್ತಿತ್ತು. ಸುದ್ದಿಗಳು ವ್ಯಾಪಕವಾಗುತ್ತಿದ್ದಂತೆ ಈ ಕುರಿತು ಸ್ವತಃ ವಿಶಾಲ್​ ತಮ್ಮ ಟ್ವಿಟರ್​ ಖಾತೆಯ ಮೂಲಕ ಇದೀಗ ಸ್ಪಷ್ಟನೆ ನೀಡಿದ್ದಾರೆ.

ತಮಿಳಿನ 'ಪಾಂಡಿಯ ನಾಡು' ಚಿತ್ರದಲ್ಲಿ ವಿಶಾಲ್​ ಮತ್ತು ನಟಿ ಲಕ್ಷ್ಮಿ ಮೆನನ್ ಜೋಡಿ ಸಿನಿಪ್ರೇಕ್ಷಕರನ್ನು ಮೋಡಿ ಮಾಡುವ ಮೂಲಕ ಬಾಕ್ಸ್​ ಆಫೀಸ್​​ನಲ್ಲಿ ಭರ್ಜರಿ ಮೊತ್ತದ ಕಲೆಕ್ಷನ್​ ಮಾಡಿತ್ತು. ಈ ಸಿನಿಮಾ ಇಬ್ಬರ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿತು. ಸದ್ಯ ಈ ಜೋಡಿ ಶೀಘ್ರವೇ ವಿವಾಹವಾಗಲಿದೆ, ವಿಶಾಲ್​-ಲಕ್ಷ್ಮಿ ಹಸಮಣೆ ಏರಲಿದ್ದಾರೆ ಎಂಬ ವದಂತಿಗಳು ವ್ಯಾಪಕವಾಗಿ ಹರಿದಾಡುತ್ತಿತ್ತು. ಇದರ ಬೆನ್ನಲ್ಲೇ ಇದೀಗ ನಟ ಪ್ರತಿಕ್ರಿಯಿಸುವ ಮುಖೇನ ವದಂತಿಗಳಿಗೆ ತೆರೆ ಎಳೆದಿದ್ದಾರೆ.

"ಸಾಮಾನ್ಯವಾಗಿ ನಾನು ನನ್ನ ಬಗ್ಗೆ ಯಾವುದೇ ಸುಳ್ಳು ಸುದ್ದಿ ಅಥವಾ ವದಂತಿಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಏಕೆಂದರೆ ಅದು ನಿಷ್ಪ್ರಯೋಜಕವಾಗಿದೆ ಎಂದು ನಾನು ಭಾವಿಸುತ್ತೇನೆ. ಆದ್ರೆ, ಈಗ ಲಕ್ಷ್ಮಿ ಮೆನನ್ ಜೊತೆಗಿನ ನನ್ನ ಮದುವೆಯ ಬಗ್ಗೆ ವದಂತಿಗಳು ಹರಿದಾಡುತ್ತಿವೆ. ನಾನು ಇದನ್ನು ಸಂಪೂರ್ಣವಾಗಿ ಕಡೆಗಣಿಸುತ್ತೇನೆ. ಇದು ನಿಜವಲ್ಲ, ಆಧಾರರಹಿತ. ನಾನು ಪ್ರತಿಕ್ರಿಯೆ ನೀಡಲು ಮುಖ್ಯ ಕಾರಣ, ನಟಿ ಎನ್ನುವುದಕ್ಕಿಂತ ಹೆಚ್ಚಾಗಿ ಒಬ್ಬ ಹೆಣ್ಣು ಮಗಳ ಹೆಸರು ಬಂದಿರುವುದಕ್ಕೆ ಮಾತ್ರ ಉತ್ತರ ಕೊಡುತ್ತಿದ್ದೇನೆ" ಎಂದು ಹೇಳಿದರು.

"ಈ ರೀತಿ ಸುಳ್ಳು ವದಂತಿ ಹಬ್ಬಿಸುವುದರಿಂದ ಒಂದು ಹುಡುಗಿಯ ಖಾಸಗಿ ಜೀವನವನ್ನು ಹಾಳು ಮಾಡುತ್ತಿದ್ದೀರಿ ಮತ್ತು ಅವಳ ಇಮೇಜ್ ಅನ್ನು ಹಾಳು ಮಾಡುತ್ತಿದ್ದೀರಿ. ಇದೇನು ಬರ್ಮುಡಾ ಟ್ರೈಂಗಲ್​​ ಅಲ್ಲ ವರ್ಷ, ದಿನಾಂಕ, ಸಮಯ ಮತ್ತು ಭವಿಷ್ಯದಲ್ಲಿ ನಾನು ಯಾರನ್ನು ಮದುವೆಯಾಗುತ್ತಿದ್ದೇನೆ ಎಂಬುದನ್ನು ಡಿಕೋಡ್ ಮಾಡಲು. ಸಮಯ ಬಂದಾಗ ನನ್ನ ಮದುವೆಯ ಬಗ್ಗೆ ಅಧಿಕೃತವಾಗಿ ಘೋಷಿಸುತ್ತೇನೆ. ದೇವರು ಆಶಿರ್ವದಿಸಲಿ" ಎಂದು ಟ್ವೀಟ್​ ಮಾಡುವ ಮೂಲಕ ವದಂತಿಗಳಿಗೆ ಬ್ರೇಕ್​ ಹಾಕಿದ್ದಾರೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net