ತಮಿಳು ನಟ ರವಿ ಮೋಹನ್ ಮತ್ತು ಗಾಯಕಿ ಕೆನಿಷಾ ಫ್ರಾನ್ಸಿಸ್ ನಡುವಿನ ಲಿಂಕಪ್ ಕಳೆದ ವರ್ಷ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ತಮ್ಮ ಬಳಿ ಒಮ್ಮೆಯೂ ಚರ್ಚಿಸದೇ ರವಿ ಮನೆಯ ಜತೆಗೆ ಸಂಸಾರವನ್ನೂ ತೊರೆದಿದ್ದಾರೆ ಎಂದು ನಟನ ವಿರುದ್ಧ ಅವರ ಪತ್ನಿ ಆರತಿ ಆಕ್ರೋಶ ವ್ಯಕ್ತಪಡಿಸಿದ್ದರು. ಸದ್ಯ ರವಿ ಮೋಹನ್ ಮತ್ತು ಆರತಿ ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿದ್ದು, ಇತ್ತೀಚೆಗಷ್ಟೆ ಈ ಕಥೆಗೆ ಹೊಸ ಟ್ವಿಸ್ಟ್ ದೊರೆತಿದೆ. ಹೌದು, ಗಾಯಕಿ ಕೆನಿಷಾ, ರವಿ ಮೋಹನ್ ಜತೆಗಿನ ಸಂಬಂಧದಿಂದ ಹೊರನಡೆಯಲು ನಿರ್ಧರಿಸಿದ್ದಾರೆ. ಈ ಬಗ್ಗೆ, "ನಾನು ಈ ಕಥೆಗೆ ಪ್ರೀತಿಯನ್ನು ಹೊತ್ತು ಬಂದಿದ್ದೆ. ಆದರೆ, ಈಗ ಮೌನವಾಗಿ ಹೊರನಡೆಯುತ್ತಿದ್ದೇನೆ. ಕೆಲ ಜಾಗಗಳಲ್ಲಿ ಒಳ್ಳೆತನಕ್ಕಿಂತ ಹೆಚ್ಚಾಗಿ ಜೋರು ಶಬ್ದಕ್ಕೆ ಅವಕಾಶವಿರುತ್ತದೆ. ಅಂತಹ ಜಾಗಗಳಲ್ಲಿ ಪ್ರೀತಿಗೂ ಉಸಿರುಗಟ್ಟುವ ವಾತಾವರಣ ಉಂಟಾಗುತ್ತದೆ. ನಾನು ಒಬ್ಬ ವ್ಯಕ್ತಿಯನ್ನು ರಸಲು ತುಂಬ ಪ್ರಯತ್ನಿಸಿದೆ. ಆದರೆ, ಇನ್ನುಮುಂದೆ ಹಾಗೆ ಮಾಡಲಾರೆ. ಆತ ಇನ್ನು ನಿಮಗೆ ಸೇರಿದವ. ಆತನನ್ನು ಪ್ರೀತಿ, ಗೌರವಗಳಿಂದ ಬಿಟ್ಟುಕೊಡುತ್ತಿದ್ದೇನೆ. ಆತನ ಬಗ್ಗೆ ನಾನು ಹೊತ್ತಿದ್ದ ಎಲ್ಲ ಜವಾಬ್ದಾರಿಗಳಿಂದಲೂ ಹೊರಬರುತ್ತಿದ್ದೇನೆ. ನನ್ನದಲ್ಲದ ಯುದ್ಧದಲ್ಲಿ ನಾನು ನಿಂತು ಹೋರಾಡಲಾರೆ. ಒಳ್ಳೆಯವರಿಗೆ ಇಲ್ಲಿ ಜಾಗವಿಲ್ಲ. ಮೋಸಗಾರರು, ಸುಳ್ಳುಗಾರರು, ನಯವಂಚಕರಿಗಷ್ಟೇ ಇಲ್ಲಿ ಜಾಗ. ನನಗಿನ್ನು ಪ್ರೂವ್ ಮಾಡಿಕೊಳ್ಳಲು ಏನೂ ಇಲ್ಲ. ಇನ್ನು ನನ್ನಿಂದ ಸಾಧ್ಯವಿಲ್ಲ. ನಾನು ಚೆನ್ನೆ$ ತೊರೆದಿದ್ದೇನೆ. ನನ್ನ ಜೀವನ ಎಂದುಕೊಂಡಿದ್ದ ಸಂಗೀತ, ಥೆರಪಿ ಎಲ್ಲವನ್ನೂ ತ್ಯಜಿಸಿದ್ದೇನೆ. ದೇವರು ಸೃಷ್ಟಿಸುವುದನ್ನು, ಮನುಷ್ಯ ಹಾಳು ಮಾಡುತ್ತಾನೆ. ಆನ್ಲೈನ್ ದೌರ್ಜನ್ಯ, ವಾಮಾಚಾರ, ನಯವಂಚನೆಗಳಿಂದಾಗಿ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. ದೇವರು ಗೆಲ್ಲುವವರೆಗೂ ನಾನು ಜಾಲತಾಣದಿಂದಲೂ ದೂರ ಇರಲಿದ್ದೇನೆ. ಸ್ತ್ರೀವಾದ ಗೆದ್ದಿದೆ, ಸಂತೋಷ ಸೋತಿದೆ' ಎಂದು ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ ಕನಿಷಾ.