ಮೆಗಾ ಸ್ಟಾರ್​​ ಕುರಿತು ಮನದಾಳದ ಮಾತನ್ನು ಹಂಚಿಕೊಂಡ 'ಮಿಲ್ಕಿ ಬ್ಯೂಟಿ'; ನಟಿ ತಮನ್ನಾ ಹೇಳಿದ್ದೇನು?

Untitled design - 2023-07-30T193058.598
Published on

ಆಂಧ್ರಪ್ರದೇಶ: ಟಾಲಿವುಡ್​ನ ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ 'ಭೋಲಾ ಶಂಕರ್' ಚಿತ್ರ ಇದೇ ಆಗಸ್ಟ್ 11 ರಂದು ಅದ್ಧೂರಿ ಬಿಡುಗಡೆ ಕಾಣಲು ಸಜ್ಜಾಗಿದೆ. ಈ ಮಧ್ಯೆ ಸಿನಿಮಾದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ನಟಿ ತಮನ್ನಾ ಭಾಟಿಯಾ, ಚಿರಂಜೀವಿ ಬಗ್ಗೆ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

"ಚಿರಂಜೀವಿ ಅವರು ಶ್ರಮಜೀವಿ. ಯಾಕಂದರೆ ನಾವು ಹಾಡೊಂದರ ಚಿತ್ರೀಕರಣ ಮಾಡುವಾಗ ಅವರಿಗೆ ಮೊಣಕಾಲು ನೋವು ಕಾಣಿಸಿಕೊಂಡಿತ್ತು. ಇದರಿಂದ ಅವರು ತೀವ್ರವಾಗಿ ಬಳಲುತ್ತಿದ್ದರು. ಹೀಗಿದ್ದರೂ ಸಹ ನೋವಿನ ನಡುವೆಯೇ ಚಿತ್ರೀಕರಣವನ್ನು ಮುಂದುವರೆಸಿದರು. ಪರಿಪೂರ್ಣತೆ ಹೊಂದಲು ಏನು ಮಾಡಬೇಕೋ ಅದನ್ನು ಚಿರು ಗಾರು ಮಾಡುತ್ತಲೇ ಇರುತ್ತಾರೆ" ಎಂದು ಹೇಳಿದರು.

"ಈಗ ತಾನೇ ಹೆಜ್ಜೆಯಿಟ್ಟವರಂತೆ ಮೆಗಾ ಸ್ಟಾರ್​ ಸದಾ ಉತ್ಸಾಹ, ಬದ್ಧತೆಯನ್ನು ಹೊಂದಿರುತ್ತಾರೆ. ಅವರ ಪಯಣವನ್ನು ನೋಡಿ ನಾನು ಸ್ಫೂರ್ತಿ ಪಡೆದಿದ್ದೇನೆ" ಎಂದು ತಮನ್ನಾ ಹೇಳಿದ್ದಾರೆ. ಸೈರಾ ನರಸಿಂಹ ರೆಡ್ಡಿ ಚಿತ್ರದ ನಂತರ ಚಿರಂಜೀವಿ ಜತೆ ತಮನ್ನಾಗೆ ಇದು ಎರಡನೇ ಸಿನಿಮಾವಾಗಿದೆ. ಭೋಲಾ ಶಂಕರ್ ಚಿತ್ರದಲ್ಲಿ ಕೀರ್ತಿ ಸುರೇಶ್ ಮತ್ತು ತಮನ್ನಾ ಭಾಟಿಯಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net