

ಚೆನ್ನೈ: ಹಾಲ್ಗಡಲಲ್ಲಿ ಮಿಂದೆದ್ದು ಬಂದ ಚೆಲುವೆಯಂತೆ ಕಂಗೊಳಿಸುವ ಮಿಲ್ಕಿ ಬ್ಯೂಟಿ ಬಹುಭಾಷಾ ತಾರೆ ತಮನ್ನಾ ಯಾರಿಗೆ ತಾನೆ ತಿಳಿದಿಲ್ಲ. ಮೊದಲಿನಿಂದಲೂ ಗ್ಲಾಮರ್ ಪಾತ್ರಗಳಿಗೆ ಪ್ರಾಧಾನ್ಯತೆ ಕೊಡುತ್ತಿರುವ ತಮನ್ನಾ ಇತ್ತೀಚೆಗೆ ರಜನಿಕಾಂತ್ ನಾಯಕನಾಗಿ ನಟಿಸಿರುವ "ಜೈಲರ್" ಚಿತ್ರದಲ್ಲಿ "ನುವ್ವು ಕಾವಾಲಯ್ಯ" ಹಾಡಿಗೆ ಹಾಕಿದ ಸ್ಟೆಪ್ಸ್ ಯುವಜನರ ನಾಡಿಬಡಿತ ಹೆಚ್ಚುವಂತೆ ಮಾಡಿದೆ.
ಇದೇ ಹಾಡು ಈಗ ಕೆಲವರ ಕಣ್ಣು ಕುಕ್ಕುವಂತೆ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ತಮನ್ನ ವಿಮರ್ಶೆ, ಪ್ರಶ್ನೆಗಳನ್ನು ಎದುರಿಸುತ್ತಿದ್ದಾರೆ. ಇದೇ ನಿಟ್ಟಿನಲ್ಲಿ ಅಭಿಮಾನಿಯಪಬ್ಬ "ತಮಗೆ ಅವಕಾಶ ತಗ್ಗಿದ್ದಕ್ಕೆ ನಿಮ್ಮ ಅಂದ-ಚೆಂದವನ್ನು ಬಟ್ಟೆ ಕಡಿಮೆ ಹಾಕಿಕೊಂಡು ಪ್ರದರ್ಶಿಸಬೇಕಾಯಿತೇ?" ಎಂದು ಪ್ರಶ್ನಿಸಿದ್ದಾನೆ.
"ನನಗೆ ಅವಕಾಶಗಳು ಇಲ್ಲವೆಂದು ನಿನಗೆ ಹೇಳಿದವರಾರು? ನಾನು ಈಗಲೂ ದಿನದ 18ಗಂಟೆ ಕರ್ತವ್ಯ ನಿರ್ಹಹಿಸುತ್ತಿದ್ದೇನೆ. ಅಷ್ಟು ಬ್ಯುಸಿಯಾಗಿ ಈ ಹಿಂದೆ ಎಂದೂ ಇರಲಿಲ್ಲ" ಎಂದು ಉತ್ತರಿಸಿದ್ದಾರೆ. ಅಷ್ಟೇ ಅಲ್ಲ, ಅಭಿಮಾನಿಗಳು ಇಂತಹ ಕಲ್ಪಿತ ಪ್ರಶ್ನೆಗಳನ್ನು ಕೇಳಬಾರದು. ಅನವಶ್ಯಕವಾಗಿ ಅವಕಾಶಗಳಿಲ್ಲವೆಂದು ಕಲ್ಪಿಸಿಕೊಳ್ಳಬಾರದು. ಇಂತಹ ಪ್ರಶ್ನೆಗಳನ್ನು ಕೇಳಬೇಡಿ ಎಂದು ಸಲಹೆ ನೀಡಿದ್ದಾರೆ.