ತಮನ್ನಾ ಇದ್ರೆ ಸಾಕು..ಎಂದ ಹಿರಿಯ ನಟ ಕೊನೆಗೆ ಕ್ಷಮೆ ಕೇಳಿದ!

tamanna
Published on

ಚೆನ್ನೈ: ಸಿನಿಮಾದಲ್ಲಿ ಕಥೆ ಇಲ್ಲದಿದ್ದರೂ ತಮನ್ನಾ ಡ್ಯಾನ್ಸ್ ಮಾಡಿದರೆ ಓಡುತ್ತೆ ಎನ್ನುವ ಪರಿಸ್ಥಿತಿ ಈಗ ಬದಲಾಗಿದೆ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ಕಾಮೆಂಟ್ ಮಾಡಿದ್ದ ರಾಧಾಕೃಷ್ಣನ್ ಪಾರ್ಥಿಬನ್ ಕಡೆಗೆ ನಟಿಯ ಕ್ಷಮೆ ಕೇಳಿದ್ದಾರೆ.

ಪಾರ್ಥಿಬನ್ ಹೇಳಿಕೆ ವೈರಲ್​ ಆಗುತ್ತಿದ್ದಂತೆ ಹಲವರು ಟೀಕಿಸಿದ್ದಾರೆ. ಅವರು ಯಾವ ಚಿತ್ರದ ಬಗ್ಗೆ ಈ ರೀತಿ ಕಾಮೆಂಟ್ ಮಾಡಿದ್ದಾರೆ ಎಂಬ ಚರ್ಚೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಪಾರ್ಥಿಬನ್ ಕ್ಷಮೆ ಯಾಚಿಸಿದ್ದಾರೆ.

ಚಿತ್ರರಂಗಕ್ಕೆ ಸೇರಿದ ಎಲ್ಲರ ಬಗ್ಗೆಯೂ ಗೌರವವಿದೆ. ಕಲಾವಿದರನ್ನು ಕೀಳಾಗಿ ಕಾಣುವ ಉದ್ದೇಶ ಇಲ್ಲ. ನನ್ನ ಮಾತುಗಳು ಯಾರಿಗಾದರೂ ನೋವುಂಟು ಮಾಡಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.

ಕಾಲಿವುಡ್‌ನ ಅನೇಕ ಚಿತ್ರಗಳಲ್ಲಿ ಪಾರ್ತಿಬನ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆದರೆ ತಮನ್ನಾ ರ ಇತ್ತೀಚಿನ ಅಡ್ವೆಂಚರ್ ಥ್ರಿಲ್ಲರ್ ಚಿತ್ರವಾಗಿ ಬಂದ 'ಟಿಂಜ್'. ಜುಲೈ 12 ರಂದು ಬಿಡುಗಡೆಯಾಗಿ ಉತ್ತಮ ಯಶಸ್ಸನ್ನು ಪಡೆಯಿತು. ಈ ಚಿತ್ರದ ಯಶಸ್ಸಿನಿಂದಾಗಿ ಅವರು ತಮನ್ನಾ ಬಗ್ಗೆ ಕಾಮೆಂಟ್ ಮಾಡುವಾಗ, ಈಗಿನ ಕಾಲದಲ್ಲಿ ಸಿನಿಮಾದಲ್ಲಿ ಕಥೆ ಇದೆಯೋ ಇಲ್ಲವೋ ಎಂದು ಪ್ರೇಕ್ಷಕರು ನೋಡುತ್ತಿಲ್ಲ, ನಾಯಕಿಯ ಡ್ಯಾನ್ಸ್‌ಗಾಗಿ ಮಾತ್ರ ನೋಡುತ್ತಿದ್ದಾರೆ, ತಮನ್ನಾ ಇದ್ದರೆ ಸಾಕು, ಕಥೆ ಇಲ್ಲದಿದ್ದರೂ ಸಿನಿಮಾ ಹಿಟ್ ಆಗುತ್ತೆ. ಎಂದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net