ಡಿಸೆಂಬರ್​ನಲ್ಲಿ 'ಕಣ್ಣಪ್ಪ' ರಿಲೀಸ್: ಮಂಚು ವಿಷ್ಣು ತಂತ್ರ ಇದೇ ನೋಡಿ..

kannappa
Published on

ಹೈದರಾಬಾದ್​: ಅದ್ಧೂರಿ ತಾರಾಗಣ ಮತ್ತು ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮಂಚು ವಿಷ್ಣು ಅಭಿನಯದ ‘ಕಣ್ಣಪ್ಪ’ ಸಿನಿಮಾ ಡಿಸೆಂಬರ್‌ನಲ್ಲಿ ತೆರೆಕಾಣಲಿದೆ. ಇದೇ ತಿಂಗಳಿನಲ್ಲಿ ಬಿಡುಗಡೆ ಮಾಡುತ್ತಿರುವುದರ ಹಿಂದೆ ಚಿತ್ರೆ ಯಶಸ್ಸಿಗೆ ತಂತ್ರ ಅಡಗಿದೆ. ಈ ಬಗ್ಗೆ ಇಂಡಸ್ಟ್ರಿಯಲ್ಲಿ ಚರ್ಚೆ ಶುರುವಾಗಿದೆ.

ಡಿಸೆಂಬರ್ ಬಳಿಕ ಸಂಕ್ರಾಂತಿ, ಶಿವರಾತ್ರಿ, ಯುಗಾದಿ ಹಬ್ಬಗಳು ಹಾಗೂ ಬೇಸಿಗೆ ರಜೆಗಳು ಬರುತ್ತವೆ. ಚಿತ್ರಗಳ ಬಿಡುಗಡೆಗೆ ಇದು ಪ್ರಮುಖ ಸೀಸನ್ ಎಂದು ಪರಿಗಣಿಸಲಾಗಿದೆ. ಈ ಹಿನ್ನಲೆಯಲ್ಲಿ ಮಂಚು ವಿಷ್ಣು ತಮ್ಮ ಚಿತ್ರವನ್ನು ಡಿಸೆಂಬರ್​ಗೆ ಬಿಡುಗಡೆ ಮಾಡಲು ಘೋಷಿಸಿದ್ದಾರೆ ಎನ್ನಲಾಗುತ್ತಿದೆ.

ಚಿತ್ರ ಬಿಡುಗಡೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ.ಏಕೆಂದರೆ ಡಿಸೆಂಬರ್‌ನಲ್ಲಿ ಅಲ್ಲು ಅರ್ಜುನ್ ಮತ್ತು ಸುಕುಮಾರ್ ಅಭಿನಯದ 'ಪುಷ್ಪ' ಡಿಸೆಂಬರ್ 6 ರಂದು ಬಿಡುಗಡೆಯಾಗುತ್ತಿದೆ. ಹೀಗಾಗಿ ಅದನ್ನು ನೋಡಿಕೊಂಡು ಕಣ್ಣಪ್ಪಗೆ ದಿನಾಂಕ ನಿಗದಿಪಡಿಸಬಹುದು ಎಂಬ ವರದಿಗಳಿವೆ.

ಇನ್ನು ಪುಷ್ಪ 2 ಬಿಡುಗಡೆ ದಿನಾಂಕ ಮುಂದೂಡಿದರೆ, ಡಿ.6ಕ್ಕೇ ಕಣ್ಣಪ್ಪ ಬಿಡುಗಡೆ ಮಾಡಲು ಉದ್ದೇಶಿಸಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಪುಷ್ಪ 2 ನಿಗದಿತ ಸಮಯಕ್ಕೆ ಬಂದರೆ, ಡಿಸೆಂಬರ್ 20 ರಂದು ಕಣ್ಣಪ್ಪ ಬಿಡುಗಡೆ ಮಾಡಲು ಯೋಜಿಸಲಾಗಿದೆ.

ಈಗಾಗಲೇ ರಿಲೀಸ್ ಆಗಿರುವ ಕಣ್ಣಪ್ಪ ಸಿನಿಮಾದ ಟೀಸರ್​ನಿಂದ ನಿರೀಕ್ಷೆ ಹೆಚ್ಚಿಸಿದೆ. ಟೀಸರ್ ನೋಡಿದರೆ ಬಾಹುಬಲಿಯಂತೆ ಅದ್ಧೂರಿಯಾಗಿ ಚಿತ್ರ ಮಾಡುತ್ತಿರುವುದು ಸ್ಪಷ್ಟವಾಗಿದೆ. ಈ ಸಿನಿಮಾದಲ್ಲಿ ಮಂಚು ವಿಷ್ಣು ಜೊತೆ ರೆಬೆಲ್ ಸ್ಟಾರ್ ಪ್ರಭಾಸ್ ನಟಿಸುತ್ತಿರುವುದು ಈ ಸಿನಿಮಾಗೆ ಪ್ಲಸ್ ಆಗಲಿದೆ.

ಈ ಚಿತ್ರದಲ್ಲಿ ಪ್ರಭಾಸ್ ಜೊತೆಗೆ ಅಕ್ಷಯ್ ಕುಮಾರ್, ಮೋಹನ್ ಬಾಬು, ಮೋಹನ್ ಲಾಲ್, ಶರತ್ ಕುಮಾರ್, ಕಾಜಲ್ ಅಗರ್ವಾಲ್, ಪ್ರೀತಿ ಮುಕುಂದನ್, ಬ್ರಹ್ಮಾನಂದಂ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net