

ಮುಂಬೈ: ಆಹಾರ ಸಿಕ್ಕಾಗ ಅಥವಾ ಕಾಗೆಯೊಂದು ಅಪಾಯಕ್ಕೀಡಾಗಿ ಕಿರುಚಿದಾಗ ದೂರದಿಂದ ಹಾರಿಬಂದು ಕಾಗೆಗಳು ಗುಂಪುಗೂಡುವುದನ್ನು ಕಾಣಬಹುದು. ಆದರೆ ಚಲಿಸುವ ಬಸ್ ಟಾಪ್ ಮೇಲೆ ಕುಳಿತು ಪ್ರಯಾಣ ಬೆಳೆಸುವುದನ್ನು ಎಂದಾದರೂ ನೋಡಿದ್ದೀರಾ? ಹೌದು, ಮುಂಬೈ ಮಹಾನಗರದಲ್ಲಿ 10-15 ಕಾಗೆಗಳು ಬಸ್ ಟಾಪ್ ಪ್ರಯಾಣ ಬೆಳೆಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೋ ವೈರಲ್ ಆಗಿದೆ.
ಇತ್ತೀಚೆಗೆ 'X' ನಲ್ಲಿ ಕಾಗೆಗಳ ಬಸ್ಟಾಪ್ ಪ್ರಯಾಣದ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಇದು ಈಗಾಗಲೇ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ವೈರಲ್ ಆಗಿದೆ.
ಈ ಅಸಾಧಾರಣ ದೃಶ್ಯಕ್ಕೆ ಪ್ರತಿಕ್ರಿಯಿಸಿದ ನೆಟಿಜನ್ಗಳು ನಗುವಿನ ಎಮೋಜಿಗಳನ್ನು ಹಾಕಿದ್ದಾರೆ. ಇನ್ನೂ ಕೆಲವರು ಕಾಗೆಗಳು ಟಿಕೆಟ್ ಪಾವತಿಸುವುದರಿಂದ ತಪ್ಪಿಸಿಕೊಳ್ಳಲು ಬಸ್ ಟಾಪ್ ಏರಿವೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಬಸ್ ಭರ್ತಿಯಾಗಿದ್ದರಿಂದ ನ್ಯಾಚುರಲ್ ಏರ್ಕಂಡಿಷನ್ ಅನುಭವ ಪಡೆಯಲು ಟಾಪ್ಪ್ರಯಾಣ ಮಾಡುತ್ತಿರಬಹುದು ಎಂದು ಕಾಮೆಂಟ್ ಮಾಡಿದ್ದಾರೆ. ಇದೀಗ ಈ ವೀಡಿಯೋ 2 ಮಿಲಿಯನ್ ವೀಕ್ಷಣೆಗಳನ್ನು ಆಕರ್ಷಿಸಿದೆ.