

ಮುದ್ದೇಬಿಹಾಳ: ಪಟ್ಟಣದ ವಿಬಿಸಿ ಪ್ರೌಢಶಾಲೆ ಮೈದಾನದಲ್ಲಿ ಐದನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದ್ದು, ಸಮ್ಮೇಳನ ಯಶಸ್ಸಿಗೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಕಸಾಪ ತಾಲೂಕು ಅಧ್ಯ ಕಾಮರಾಜ ಬಿರಾದಾರ ತಿಳಿಸಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಸ್ಥಳಿಯ ಸಾಹಿತಿಗಳು, ಸಂಟನೆಗಳ ಮುಖಂಡರು ಸೇರಿ ಹಲವರೊಂದಿಗೆ ಹಲವು ಸುತ್ತಿನ ಚರ್ಚೆ ನಡೆಸಿ ಸಲಹೆ ಸೂಚನೆ ಪಡೆದುಕೊಳ್ಳಲಾಗಿದೆ. ಒಂದು ದಿನದ ಸಮ್ಮೇಳನ ಇದಾಗಿದ್ದು, ಸಮ್ಮೇಳನ ಸರ್ವಾಧ್ಯರ ಆಯ್ಕೆ ಕುರಿತು ಚರ್ಚೆ ನಡೆದಿದೆ. ಸಮ್ಮೇಳನದಲ್ಲಿ ಏನೇನು ಇರಬೇಕು ಎನ್ನುವುದನ್ನು ಕೆಲವೇ ದಿನಗಳಲ್ಲಿ ಅಂತಿಮಗೊಳಿಸಲಾಗುತ್ತದೆ. ಸಾಹಿತಿಗಳು, ಕವಿಗಳಿಗೆ ಹೆಚ್ಚಿನ ಅವಕಾಶ ಇರಲಿದೆ. ಐದಾರು ಸಾವಿರ ಜನ ಸೇರುವ ನಿರೀೆ ಇದ್ದು, ಉಪಾಹಾರ, ಊಟ ಮತ್ತಿತರ ವ್ಯವಸ್ಥೆಗೆ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದರು.
ಕಸಾಪ ಗೌರವ ಕಾರ್ಯದರ್ಶಿ ವೈ.ಎಚ್.ವಿಜಯಕರ ಮಾತನಾಡಿ, ಈ ಸಮ್ಮೇಳನ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ. ಈಗಾಗಲೇ ಚಟುವಟಿಕೆಗೆ ಚಾಲನೆ ನೀಡಿದ್ದು, ಕ್ರಿಯಾಶೀಲತೆಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ ಎಂದರು.
ಗೌರವ ಕಾರ್ಯದರ್ಶಿ, ಮಕ್ಕಳ ಸಾಹಿತಿ ಸಿದ್ದನಗೌಡ ಬಿಜ್ಜೂರ ಮಾತನಾಡಿ, ಎರಡು ಜಿಲ್ಲಾ, ನಾಲ್ಕು ತಾಲೂಕು ಸಮ್ಮೇಳನ ಯಶಸ್ವಿಯಾಗಿ ನಡೆಸಿಕೊಟ್ಟಿರುವ ಹೆಗ್ಗಳಿಕೆ ಮುದ್ದೇಬಿಹಾಳದ ಸಾಹಿತ್ಯ ಪ್ರೇಮಿಗಳದ್ದಾಗಿದೆ. ಸಮ್ಮೇಳನಕ್ಕೆ ಹಬ್ಬದ ಮೆರುಗು ಕೊಡಲು ಶ್ರಮಿಸುತ್ತಿದ್ದೇವೆ. ಸಮಿತಿಗಳ ರಚನೆ, ಕವಿಗೋಷ್ಠಿ, ಸ್ಮರಣ ಸಂಚಿಕೆ, ಲಾಂಛನ ಮುಂತಾದವುಗಳ ತಯಾರಿ ಭರದಿಂದ ಸಾಗಿದೆ. ಸಮ್ಮೇಳನದಲ್ಲಿ ಧ್ವಜಾರೋಹಣ, ಸರ್ವಾಧ್ಯರ ಮೆರವಣಿಗೆ, ಪುಸ್ತಕಗಳ ಬಿಡುಗಡೆ, ಹಿರಿಯ ಸಾಹಿತಿಗಳಿಗೆ ಸನ್ಮಾನ, ಗೋಷ್ಠಿ ಆಯೋಜನೆ ಕುರಿತು ಚರ್ಚೆ ನಡೆಯುತ್ತಿದೆ ಎಂದರು.
ಕಸಾಪ ಸಂಟನಾ ಕಾರ್ಯದರ್ಶಿ ಹುಸೇನ ಮುಲ್ಲಾ ಕಾಳಗಿ ಮಾತನಾಡಿದರು.