ಸಮುದಾಯದವರಿಗೆ ಆಹ್ವಾನ ನೀಡದ ತಾಲೂಕು ಆಡಳಿತ

27 KRN-1
Published on

ಕೆ.ಆರ್.ನಗರ: ಕೆರೆಗಳ ನಿರ್ಮಾತೃ ಕೆಂಪೇಗೌಡರ ಜಯಂತಿಗೆ ಸಮುದಾಯದ ಮುಖಂಡರನ್ನು ಆಹ್ವಾನಿಸದೆ ತಾಲೂಕು ಆಡಳಿತ ಅವಮಾನ ಮಾಡಿದೆ ಎಂದು ಒಕ್ಕಲಿಗ ಸಂಘದ ಜಿಲ್ಲಾ ನಿರ್ದೇಶಕ ಮಿರ್ಲೆ ಶ್ರೀನಿವಾಸ್‌ಗೌಡ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ ಸಮಾರಂಭದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಈವರೆಗೆ ಕಾರ್ಯಕ್ರಮಕ್ಕೆ ಅಧಿಕಾರಿಗಳು ಹಾಜರಾಗುತ್ತಿರಲಿಲ್ಲ. ಇದೀಗ ಸರಳವಾಗಿ ಜಯಂತಿ ಆಚರಿಸುತ್ತಿದ್ದರೂ ಅಧಿಕಾರಿಗಳು ಬಂದಿಲ್ಲ ಎಂದು ಕಿಡಿಕಾರಿದರು.

ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಅಣ್ಣೇಗೌಡ ಮಾತನಾಡಿ, ಕೆಂಪೇಗೌಡರನ್ನು ಒಂದು ಜಾತಿಗೆ ಸೀಮಿತಗೊಳಿಸದೆ ಅವರ ಸಾಧನೆಗಳನ್ನು ಯುವ ಜನತೆಗೆ ತಿಳಿಸಬೇಕು ಎಂದು ಹೇಳಿದರು.

ತಹಸೀಲ್ದಾರ್ ಎಂ.ಮಂಜುಳಾ, ಒಕ್ಕಲಿಗರ ಸಂಘದ ತಾಲೂಕು ಕಾರ್ಯದರ್ಶಿ ಅಣ್ಣಾಜಿಗೌಡ, ಖಜಾಂಚಿ ಎಚ್.ಪಿ.ಶಿವಣ್ಣ, ನಿರ್ದೇಶಕರಾದ ರಾಜೇಗೌಡ, ಎಂ.ಕೆ.ಮಹದೇವ್, ಒಕ್ಕಲಿಗ ನೌಕರರ ಸಂಘದ ಅಧ್ಯಕ್ಷ ಸಿ.ಜೆ.ಅರುಣ್, ಪಿಡಬ್ಲ್ಯೂಡಿ ಎಇಇ ಅರುಣ್‌ಕುಮಾರ್, ಎಎಸ್‌ಐ ಮೂರ್ತಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net