'ಸಂಗೀತವು ನೈತಿಕ ಭ್ರಷ್ಟಾಚಾರಕ್ಕೆ ಕಾರಣ': ಗಿಟಾರ್, ತಬಲಾ ಸೇರಿದಂತೆ ಹಲವು ಉಪಕರಣಗಳಿಗೆ ಬೆಂಕಿ

smoke
ಸಾಂದರ್ಭಿಕ ಚಿತ್ರ
Published on

ಹೆರಾತ್: ಸಂಗೀತವು ನೈತಿಕ ಭ್ರಷ್ಟಾಚಾರಕ್ಕೆ ಕಾರಣವೆಂದು ಮುಟ್ಟುಗೋಲು ಹಾಕಿಕೊಂಡ ಗಿಟಾರ್, ತಬಲಾ ಮುಂತಾದ ಸಂಗೀತ ಉಪಕರಣಗಳನ್ನು ಸುಟ್ಟಿರುವ ವಿಚಿತ್ರ ಘಟನೆ ಅಫ್ಘಾನಿಸ್ತಾನದ ಹೆರಾತ್ ಪ್ರಾಂತ್ಯದಲ್ಲಿ ನಡೆದಿದೆ.

ಇದನ್ನೂ ಓದಿ: ಪ್ರಯಾಣಿಕನ ಬ್ಯಾಗ್​​ನಲ್ಲಿ 47 ಜೀವಂತ ಹಾವು, 2 ಹಲ್ಲಿ ಪತ್ತೆ..!

ಅಫ್ಘಾನಿಸ್ತಾನದ ಉಪ ಸಚಿವಾಲಯದ ಅಧಿಕಾರಿಗಳು ವಾರಾಂತ್ಯದಲ್ಲಿ ಸಂಗೀತವನ್ನು ಅನೈತಿಕವೆಂದು ಪರಿಗಣಿಸಿದ್ದು, ಸಂಗೀತ ಹಾಗೂ ಅವುಗಳ ಸಲಕರಣೆಗಳ ಪ್ರಚಾರ ಮಾಡುವುದು ನೈತಿಕ ಭ್ರಷ್ಟಾಚಾರಕ್ಕೆ ಕಾರಣವಾಗುತ್ತದೆ. ಇದನ್ನು ನುಡಿಸುವುದರಿಂದ ಯುವಕರು ದಾರಿ ತಪ್ಪುತ್ತಾರೆ ಸಚಿವಾಲಯದ ಹೆರಾತ್ ವಿಭಾಗದ ಮುಖ್ಯಸ್ಥ ಅಜೀಜ್ ಅಲ್-ರಹಮಾನ್ ಅಲ್-ಮುಹಾಜಿರ್ ಹೇಳಿದ್ದಾರೆ.

ಆಗಸ್ಟ್ 2021ರಲ್ಲಿ ಅಧಿಕಾರಕ್ಕೆ ಬಂದಾಂಗಿನಿಂದ ತಾಲಿಬಾನಿಗಳು, ಸಾರ್ವಜನಿಕವಾಗಿ ಸಂಗೀತ ನುಡಿಸುವುದನ್ನು ನಿಷೇಧಿಸುವುದು ಸೇರಿದಂತೆ. ತಮ್ಮ ಇಸ್ಲಾಂ ಧರ್ಮದ ಕಠಿಣ ದೃಷ್ಟಿಯನ್ನು ಪ್ರತಿಬಿಂಬಿಸುವ ಕಾನೂನುಗಳು ಮತ್ತು ನಿಬಂಧನೆಗಳನ್ನು ಇಡೀ ರಾಷ್ಟ್ರಾದ್ಯಂತ ಜಾರಿಗೆ ತಂದಿದ್ದಾರೆ.

ಈ ಹಿಂದೆ ಮಹಿಳೆ ಮತ್ತು ಹದಿಹರೆಯದ ಹುಡುಗಿಯರ ಶಿಕ್ಷಣಕ್ಕೆ ನಿರ್ಬಂಧದ ಜತೆಗೆ ಉದ್ಯಾನವನ, ಆಟದ ಮೈದಾನಗಳು ಮತ್ತು ಜಿಮ್‌ಗಳಿಗೆ ಪ್ರವೇಶಿಸುವುದನ್ನು ಸಹ ನಿಷೇಧಿಸಿದ್ದಾರೆ. ಇತ್ತೀಚಿಗಷ್ಟೇ ದೇಶಾದ್ಯಂತ ಸಾವಿರಾರು ಬ್ಯೂಟಿ ಪಾರ್ಲರ್​, ಸಲೂನ್​ಗಳನ್ನು ಮುಚ್ಚಲಾಗಿತ್ತು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net