ಪ್ರತಿಭಾವಂತ ಮಕ್ಕಳಿಂದ ಪ್ರತಿಭಾ ಪುರಸ್ಕಾರಕ್ಕೆ ಅಜಿರ್ ಆಹ್ವಾನ

je721538035802367-abc
Published on

ರಾಣೆಬೆನ್ನೂರ: ನಗರದ ಸಿದ್ದೇಶ್ವರ ಕೋ&ಆಪರೇಟಿವ್​ ಬ್ಯಾಂಕ್​ ವತಿಯಿಂದ ವೀರಶೈವ ಲಿಂಗಾಯತ ಸಮಾಜದ ಪ್ರತಿಭಾವಂತ ವಿದ್ಯಾಥಿರ್ಗಳಿಗೆ ಧನ ಸಹಾಯ ರೂಪದಲ್ಲಿ ಪ್ರತಿಭಾ ಪುರಸ್ಕಾರ ನೀಡಲು ಅಜಿರ್ ಆಹ್ವಾನಿಸಲಾಗಿದೆ.
ಎಸ್ಸೆಸ್ಸೆಲ್ಸಿ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಹೆಚ್ಚು ಅಂಕ ಪಡೆದ, ದ್ವೀತಿಯ ಪಿಯುಸಿ ಕಲಾ, ವಿಜ್ಞಾನ, ವಾಣಿಜ್ಯ ವಿಭಾಗಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾಥಿರ್ಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಅರ್ಹ ವಿದ್ಯಾಥಿರ್ಗಳು ಸೆ. 14ರ ಒಳಗಾಗಿ ಅಂಕಪಟ್ಟಿ ಮತ್ತು ವರ್ಗಾವಣಾ ಪ್ರಮಾಣ ಪತ್ರದ ಝರಾಕ್ಸ್​ ಪ್ರತಿಗಳೊಂದಿಗೆ ಆರ್​.ವಿ. ಸುರಗೊಂಡ ಮುಖ್ಯಶಿಕ್ಷಕ, ಲಯನ್ಸ್​ ಕನ್ನಡ ಮಾಧ್ಯಮ ಶಾಲೆ, ಮೇಡ್ಲೇರಿ ರಸ್ತೆ, ರಾಣೆಬೆನ್ನೂರ ಇವರಿಗೆ ಸಲ್ಲಿಸಬೇಕು ಎಂದು ಬ್ಯಾಂಕ್​ನ ಅಧ್ಯ ಎಂ.ಎಸ್​. ಅರಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net