

ಮುಂಬೈ: 'ಏಜೆಂಟ್' ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಸಾಕ್ಷಿ ವೈದ್ಯ, ಚಿತ್ರದಲ್ಲಿ ನಟ ಅಖಿಲ್ ಅಕ್ಕಿನೇನಿ ಅವರೊಂದಿಗೆ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಈ ಚಿತ್ರ ಸಿನಿಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲಗೊಂಡಿತು. ತದನಂತರ ಇತ್ತೀಚೆಗಷ್ಟೇ ಬಿಡುಗಡೆಗೊಂಡ 'ಗಂಡೀವಾಧಾರಿ ಅರ್ಜುನ' ಚಿತ್ರವು ಕೂಡ ನಿರೀಕ್ಷಿಸಿದಂತೆ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿಲ್ಲ.
ಇದನ್ನೂ ಓದಿ: ದೇವಾಂಗ ಸಮಾಜದಿಂದ ಪ್ರತಿಭಾ ಪುರಸ್ಕಾರ, ಸಾಧಕರ ಸನ್ಮಾನ
ದುರದೃಷ್ಟವಶಾತ್ ಸಾಕ್ಷಿ ವೈದ್ಯ ನಟಿಸಿದ ಎರಡು ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಸೋಲನ್ನು ಕಂಡಿದೆ. ಎರಡು ಚಿತ್ರಗಳಲ್ಲಿಯೂ ಕೂಡ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ನಟಿಗೆ ತಮ್ಮ ಅಭಿಮಾನಿಗಳು ಮತ್ತು ಪ್ರೀತಿ ಪಾತ್ರರಿಂದ ಮೆಚ್ಚುಗೆಗಳು ವ್ಯಕ್ತವಾಗಿದೆ. 'ಗಂಡೀವಾಧಾರಿ ಅರ್ಜುನ' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ ಸಾಕ್ಷಿ, ಸಿನಿಮಾ ಪೂರ ಹೆಚ್ಚಿನ ಅವಧಿ ಕಾಣಿಸಿಕೊಳ್ಳುವುದಿಲ್ಲ. ಈ ಸಂಗತಿ ಅವರ ಫ್ಯಾನ್ಸ್ಗೆ ತೀವ್ರ ಬೇಸರ ಮೂಡಿಸಿದೆ.
ಆಕರ್ಷಕ ನೋಟ ಮತ್ತು ಪ್ರತಿಭೆಯಿದ್ದರೂ ಕೂಡ ನಟಿ ಇಲ್ಲಿಯವರೆಗೂ ಚಿತ್ರರಂಗದಲ್ಲಿ ತಮ್ಮ ಛಾಪನ್ನು ಮೂಡಿಸಲು ಸಾಧ್ಯವಾಗಿಲ್ಲ. ಬ್ಯಾಕ್ ಟು ಬ್ಯಾಕ್ ಸೋಲಿನ ಬೆನ್ನಲ್ಲೇ ಸಾಕ್ಷಿ ಅವರಿಗೆ ಹಿತೈಷಿಗಳು ಮತ್ತು ಅವರ ಅಭಿಮಾನಿಗಳು ಮುಂದಿನ ಚಿತ್ರಗಳಲ್ಲಿ ಪಾತ್ರಗಳ ಆಯ್ಕೆಯತ್ತ ಹೆಚ್ಚು ಗಮನಹರಿಸುವಂತೆ ಸಲಹೆಗಳನ್ನು ನೀಡಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವದಂತಿಯ ಪ್ರಕಾರ, ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ 'ಉಸ್ತಾದ್ ಭಗತ್ ಸಿಂಗ್' ಚಿತ್ರದಲ್ಲಿ ಸಾಕ್ಷಿ ವೈದ್ಯ ಅವರಿಗೆ ಸ್ಟಾರ್ ನಟನೊಂದಿಗೆ ತೆರೆ ಹಂಚಿಕೊಳ್ಳಲು ಅವಕಾಶವಿದೆ ಎಂದು ಹೇಳಲಾಗಿದೆ. ಆದ್ರೆ, ಈ ಬಗ್ಗೆ ಚಿತ್ರತಂಡ ಏನು ಹೇಳಲಿದೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).