ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ

2 bannur 1
Published on

ಬನ್ನೂರು: ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದರೆ ಸಮಾಜದಲ್ಲಿ ಉತ್ತಮರಾಗಿ ಬದುಕಲು ಸಾಧ್ಯ ಎಂದು ಬೋಧಿದತ್ತ ಬಂತೇಜಿ ಹೇಳಿದರು.

ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಸೋಮವಾರ ಪರಿಶಿಷ್ಟ ಜಾತಿ ನೌಕರರ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರಸ್ತುತ ನಮ್ಮ ಸಮಾಜದ ಬಂಧುಗಳು ಉತ್ತಮ ಹುದ್ದೆಯಲ್ಲಿರುವುದು ಅಂಬೇಡ್ಕರ್ ಹಾಕಿಕೊಟ್ಟ ಮಾರ್ಗದಿಂದ. ದಿನದ 18 ಗಂಟೆಯನ್ನು ಓದಿಗಾಗಿ ಮೀಸಲಿಟ್ಟಿದ್ದ ಅವರು, ತುಳಿತಕ್ಕೆ ಒಳಗಾಗಿದ್ದ ವರ್ಗವನ್ನು ಸಮಾಜದ ಮುಖ್ಯವಾಹಿನಿಗೆ ತಂದರು. ಶಿಕ್ಷಣ ನಮ್ಮ ಆರ್ಥಿಕ ಹಾಗೂ ಸಾಮಾಜಿಕ ಪರಿವರ್ತನಾ ಮಾರ್ಗವಾಗಿದ್ದು, ಇದು ನಮ್ಮನ್ನು ಎಲ್ಲ ಸಂಕೋಲೆಯಿಂದ ಬಂಧಮುಕ್ತಗೊಳಿಸುತ್ತದೆ ಎಂದರು.
ಅತಿ ಹೆಚ್ಚು ಅಂಕ ಪಡೆದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು, ಜಾನಪದ ಕಲಾವಿದರು, ಪದೋನ್ನತಿ ಪಡೆದ ಹಾಗೂ ನಿವೃತ್ತಿ ಹೊಂದಿದ ಸಮಾಜದ ನೌಕರರು, ಹಿರಿಯ ಸದಸ್ಯರು, ಪುರಸಭಾ ಸದಸ್ಯರನ್ನು ಸನ್ಮಾನಿಸಲಾಯಿತು.

ಜ್ಞಾನಪ್ರಕಾಶ್ ಸ್ವಾಮೀಜಿ, ಪುರುಷೋತ್ತಮ, ಜಗನ್ನಾಥ್, ಬಿ.ಜಿ.ದಯಾನಂದಮೂರ್ತಿ, ಜಿ.ರಂಗರಾಜು, ಸಿ.ಮಹೇಂದ್ರಕುಮಾರ್, ಬಿ.ವಿ.ಸ್ವಾಮಿ, ಬಿ.ಡಿ.ಶಿವಕುಮಾರ್, ಸಿದ್ದೇಶ್, ಗಿರೀಶ್, ಜಯಶೀಲಾ, ರಾಜಶೇಖರಮೂರ್ತಿ, ಬಸವಣ್ಣ, ರವಿಕುಮಾರ್, ರವೀಂದ್ರ, ಶಿವಣ್ಣ, ಮಹದೇವ, ಪೋಸ್ಟ್‌ಕುಮಾರ್, ಶ್ರೀನಿವಾಸಮೂರ್ತಿ ಹಲವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net