ನಲವತ್ತರ ನಂತರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ

ನಲವತ್ತರ ನಂತರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
Published on

ಹುಣಸೂರು: ಹುಣಸೂರಿನ ಮಾರಿಗುಡಿ ಬೀದಿಯ ಸಂಗೊಳ್ಳಿ ರಾಯಣ್ಣ ಕ್ಷೇಮಾಭಿವೃದ್ಧಿ ಸಂಘದಿಂದ ವೆಂಕಟೇಶ್ವರ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ 130ಕ್ಕೂ ಹೆಚ್ಚು ಜನರು ತಪಾಸಣೆಗೊಳಗಾದರು.

ಶಿಬಿರ ಉದ್ಘಾಟಿಸಿದ ಕರ್ನಾಟಕ ವೈದ್ಯಕೀಯ ಪರಿಷತ್‌ನ ಸದಸ್ಯ ಹಾಗೂ ವೆಂಕಟೇಶ್ವರ ಆಸ್ಪತ್ರೆ ಮುಖ್ಯಸ್ಥ ಡಾ.ಭರತ್‌ಕುಮಾರ್ ಮಾತನಾಡಿ, 40 ವರ್ಷದ ನಂತರ ಪ್ರತಿಯೊಬ್ಬರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಸಕ್ಕರೆ, ಬಿ.ಪಿ. ಕಾಯಿಲೆಗೆ ನಿಯಮಿತವಾಗಿ ಔಷಧ ಸೇವಿಸಬೇಕು. ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳದಿದ್ದಲ್ಲಿ ಕಿಡ್ನಿ, ಹೃದಯ ಸಮಸ್ಯೆಯಂತಹ ಮಾರಣಾಂತಿಕ ಕಾಯಿಲೆಗೆ ತುತ್ತಾಗುವಿರಿ. ಹೀಗಾಗಿ ಕಡ್ಡಾಯವಾಗಿ ತಪಾಸಣೆಮಾಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಸಂಘದ ಅಧ್ಯಕ್ಷ ಅಶೋಕ್ ರಾಜಲಿಂಗಯ್ಯ ಮಾತನಾಡಿ, ಪ್ರಥಮ ಬಾರಿಗೆ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದು, ಮುಂದೆ ಹೋಬಳಿ ಮಟ್ಟದಲ್ಲಿ ಶಿಬಿರ ಆಯೋಜಿಸುವ ಮೂಲಕ ಹಳ್ಳಿ ಜನರ ಆರೋಗ್ಯಕ್ಕೆ ಆದ್ಯತೆ ನೀಡಲಾಗುವುದೆಂದರು.

ಶಿಬಿರದಲ್ಲಿ 130ಕ್ಕೂ ಹೆಚ್ಚು ಮಂದಿ ಸಕ್ಕರೆ, ಬಿ.ಪಿ, ಕಿಡ್ನಿ ಮತ್ತಿತರ ಸಮಸ್ಯೆ ಉಳ್ಳುವರಿಗೆ ತಪಾಸಣೆ ನಡೆಸಿ, ಉಚಿತವಾಗಿ ಔಷಧ ವಿತರಿಸಲಾಯಿತು. ಈ ವೇಳೆ ಸಂಘದ ಗೌರವಾಧ್ಯಕ್ಷ ರಾಜಣ್ಣ, ಈಶ್ವರಯ್ಯ, ಉಪಾಧ್ಯಕ್ಷ ಜಯಣ್ಣ, ಪ್ರಕಾಶ್, ಕಾರ್ಯದರ್ಶಿ ಕುಮಾರ್, ನಗರಸಭೆ ಸದಸ್ಯ ರಮೇಶ್, ಡಾ.ನವ್ಯ, ಸಂಜಯ್, ಗಗನ್, ಶ್ರೀನಿವಾಸ್ ಸೇರಿದಂತೆ ಅನೇಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net