ಸಾಲ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ

21-HHR-P-07
ಆನವೇರಿಯ ಪಿಎಸಿಎಸ್ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಸಂಘದ ಅಧ್ಯಕ್ಷ ಪಿ.ಮಹೇಶ್ವರಪ್ಪ ಉದ್ಘಾಟಿಸಿದರು. ಜಯನಂದ ಶೆಟ್ಟಿ, ನಟರಾಜಪ್ಪ ಗೌಡ, ಎ.ಜಿ.ರಮೇಶ್ ಇತರರಿದ್ದರು.
Published on

ಹೊಳೆಹೊನ್ನೂರು: ಆನವೇರಿ ಸಹಕಾರ ಸಂಘವು ಸದಸ್ಯರ ಸಹಕಾರದಿಂದ 45.90 ಲಕ್ಷ ರೂ. ಲಾಭ ಗಳಿಸಿ ಮುನ್ನಡೆಯುತ್ತಿದೆ ಎಂದು ಸಂಘದ ಅಧ್ಯಕ್ಷ ಪಿ.ಮಹೇಶ್ವರಪ್ಪ ಹೇಳಿದರು.

ಆನವೇರಿ ಪಿಎಸಿಎಸ್ ಆವರಣದಲ್ಲಿ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, 1,505 ಸದಸ್ಯರನ್ನು ಹೊಂದಿರುವ ಸಂಘವು 1.50 ಕೋಟಿ ರೂ. ಷೇರು ಬಂಡವಾಳ ಹೊಂದಿದೆ. ಸದಸ್ಯರು ಸಕಲದಲ್ಲಿ ಸಾಲ ಮರುಪಾವತಿ ಮಾಡಿ ಸಂಘದ ಏಳಿಗೆಗೆ ಕೈ ಜೋಡಿಸಬೇಕು ಎಂದು ತಿಳಿಸಿದರು.

ಸಂಘದಲ್ಲಿ ದೊರೆಯುವ ಕಡಿಮೆ ಬಡ್ಡಿ ದರದ ಸಾಲ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು. ಕ್ಯಾಂಪ್ಕೋ ಸಹಯೋಗದೊಂದಿಗೆ ನಡೆಯುತ್ತಿರುವ ಅಡಕೆ ಖರೀದಿ ಕೇಂದ್ರಕ್ಕೆ ನಿರೀಕ್ಷೆಗೂ ಮಿರಿ ಸ್ಪಂದನೆ ಸಿಗುತ್ತಿದೆ. ರಸಗೊಬ್ಬರ ಮಾರಾಟ ಮಳಿಗೆ ಸೇರಿ ಪಡಿತರ ವಿತರಣೆ ಕಾರ್ಯ ನಿರ್ವಹಣೆ ಉತ್ತಮವಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚುವರಿ ಬೆಳೆಸಾಲ ನೀಡುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದರು.

ಉಪಾಧ್ಯಕ್ಷ ಜಯನಂದ ಶೆಟ್ಟಿ, ಜಿ.ಎಚ್.ನಟರಾಜಗೌಡ, ಎ.ಜಿ.ರಮೇಶ್, ಎ.ಜಿ.ಮಹೇಂದ್ರಗೌಡ, ಎಂ.ಜಿ.ನಾಗರಾಜ್, ಇ.ಬಿ.ರಾಜಪ್ಪ, ಟಿ.ಚಂದ್ರಪ್ಪ, ಲಕ್ಷ್ಮಪ್ಪ, ಲಲಿತಮ್ಮ, ಸುಶೀಲಮ್ಮ, ಕವಿತಾ, ಎಚ್.ವಿ.ಗಜೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net