ಜನಿವಾರ ಕತ್ತರಿಸಿದವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

20-RNR-07
Published on

ಹಾವೇರಿ: ಶಿವಮೊಗ್ಗ ಹಾಗೂ ಬೀದರ್​ ನಗರದಲ್ಲಿ ಸಿಇಟಿ ಪರೀಕ್ಷೆ ಬರೆಯಲು ತೆರಳಿದ್ದ ಬ್ರಾಹ್ಮಣ ವಿದ್ಯಾಥಿರ್ಗಳ ಕೊರಳಲ್ಲಿದ್ದ ಜನಿವಾರ ತೆಗೆಸಿರುವುದನ್ನು ಖಂಡಿಸಿ ಹಾಗೂ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕದ ಪದಾಧಿಕಾರಿಗಳು ಶನಿವಾರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಶಿವಮೊಗ್ಗ ಹಾಗೂ ಬೀದರ್​ ನಗರಗಳಲ್ಲಿ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಬ್ರಾಹ್ಮಣ ವಿದ್ಯಾಥಿರ್ಗಳ ಜನಿವಾರ ಹಾಗೂ ಇನ್ನುಳಿದ ಇತರ ಸಮಾಜದ ಕೆಲ ವಿದ್ಯಾಥಿರ್ಗಳು ಧರಿಸಿದ ಜನಿವಾರ ಹಾಗೂ ಕೈಗೆ ಕಟ್ಟಿಕೊಂಡಿದ್ದ ಕಾಶಿದಾರ, ಶಿವದಾರವನ್ನು ತೆಗೆಸಿರುವುದು ಖಂಡನೀಯ. ಪರೀಕ್ಷಾ ಕೇಂದ್ರಕ್ಕೆ ನಿಯೋಜನೆಗೊಂಡ ಸಿಬ್ಬಂದಿ ಸ್ವಂತ ಕಾನೂನಿನನ್ವಯ ಪರೀಕ್ಷೆ ಬರೆಯಲು ಬಿಟ್ಟಿಲ್ಲ.

ವಿದ್ಯಾಥಿರ್ಗಳು ವರ್ಷರ್ಪೂತಿ ಕಷ್ಟಪಟ್ಟು ಅಧ್ಯಯನ ಮಾಡಿ ಉತ್ತಮ ಭವಿಷ್ಯದ ಕನಸು ಕಂಡಿದ್ದರು. ಇದರಿಂದ ಪ್ರತಿಭಾವಂತ ವಿದ್ಯಾಥಿರ್ಗಳಿಗೆ ಅನ್ಯಾಯವಾಗಿದ್ದು, ಸಿಬ್ಬಂದಿಯ ಈ ಕೃತ್ಯ ವಿದ್ಯಾಥಿರ್ಗಳು ಹಾಗೂ ಪಾಲಕರ ಮನೋಸ್ಥೆರ್ಯವನ್ನು ಕುಗ್ಗಿಸುತ್ತಿದೆ. ಇದನ್ನು ಬ್ರಾಹ್ಮಣ ಸಮಾಜ ತೀವ್ರವಾಗಿ ಖಂಡಿಸುತ್ತಿದೆ.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇಂತಹ ಮಾನಸಿಕ ಅಸ್ವಸ್ಥತೆಯ ವ್ಯಕ್ತಿಗಳನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಮಹಾಸಭಾದ ಜಿಲ್ಲಾಧ್ಯಕ್ಷ ವಸಂತ ಮೋಕ್ತಾಲಿ, ಪ್ರಮುಖರಾದ ಪ್ರಭಾಕರರಾವ ಮಂಗಳೂರ, ದತ್ತಾತ್ರೇಯ ನಾಡಗೇರ, ಸಂಜಯ ನಾಯಕ, ರಮೇಶ ಕಡಕೋಳ, ದೀಪಾ ಪಾಟೀಲ, ಉಮೇಶ ರಟ್ಟಿಹಳ್ಳಿ, ವಿನಾಯಕ ಹುದ್ದಾರ, ಗುರುರಾಜ ಶಿರಹಟ್ಟಿ, ನಾಗರಾಜ ಗಡಗಿ, ರಾಜು ಪುಣ್ಯವಂತ್ರ, ಸುಬ್ರಹ್ಮಣ್ಯ ಬುದಗಟ್ಟಿ, ಉದಯ ಕುಲಕಣಿರ್ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net