

ಕೊಳ್ಳೇಗಾಲ: ರಾಷ್ಟ್ರಧ್ವಜ ಕಂಬಕ್ಕೆ ಅವಮಾನ ವ್ಯಸಗಿರುವ ಕೊಳ್ಳೇ ಗಾಲ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿ ಕಾರಿ ಗುರುಶಾಂತಪ್ಪ ಬೆಳ್ಳಂಗಡಿ ಅವರನ್ನು ಅಮಾನತು ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇ ದಿಕೆ (ನಾರಾಯಣ ಗೌಡ ಬಣ ) ಪದಾಧಿಕಾರಿಗಳು ಬುಧವಾರ ಅಪರ ಜಿಲ್ಲಾಧಿಕಾರಿ ಜವರೇಗೌಡ ಅವರಿಗೆ ಲಿಖಿತ ಪತ್ರ ನೀಡಿ ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಕೊಳ್ಳೇಗಾಲ ತಾಲೂಕು ಪಂಚಾಯಿತಿ ಆವರಣದಲ್ಲಿರುವ ರಾಷ್ಟ್ರಧ್ವಜದ ಕಂಬದ ಮೆಟ್ಟಿಲುಗಳ ಮೇಲೆ ಪಾದರಕ್ಷೆಗಳನ್ನು ಬಿಟ್ಟು ಅವಮಾನ ಮಾಡಿದ್ದಾರೆ. ಈ ಹಿನ್ನಲೆ ಗುರುಶಾಂತಪ್ಪ ಬೆಳ್ಳುಂಗಡಿ ಅವ ರನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿದರು.
ಕೊಳ್ಳೇಗಾಲ ಕರವೇ ತಾಲೂಕು ಘಟಕದ ಅಧ್ಯಕ್ಷ ಅಯಾಸ್ ಕನ್ನಡಿಗ, ಗೌರವಾಧ್ಯಕ್ಷ ನಿಸಾರ್ ಅಹಮ್ಮದ್, ಮಹದೇವ ಪ್ರಸಾದ್, ಲಿಂಗರಾಜು, ರೈತ ಮುಖಂಡ ರಾಮಕೃಷ್ಣ ಮತ್ತಿತರಿದ್ದರು.