ತೈಲೂರು ಅಮ್ಮನವರ ವೀರಹಬ್ಬ

18M.D.R.7
ಮದ್ದೂರು ತಾಲೂಕಿನ ತೈಲೂರು ಅಮ್ಮನವರ ವೀರಹಬ್ಬದ (ಈರಬ್ಬ) ಅಂಗವಾಗಿ ನೂರಾರು ಮಹಿಳೆಯರು ತಂಬಿಟ್ಟಿನಾರತಿ ಮಾಡಿ ಗಮನ ಸೆಳೆದರು.
Published on

ಮದ್ದೂರು: ತಾಲೂಕಿನ ತೈಲೂರು ಅಮ್ಮನವರ ವೀರಹಬ್ಬದ (ಈರಬ್ಬ) ಶುಕ್ರವಾರ ಸಡಗರ ಸಂಭ್ರಮದಿಂದ ಆರಂಭಗೊಂಡಿತು.

ಶುಕ್ರವಾರ ಮತ್ತು ಶನಿವಾರ ಎರಡು ದಿನಗಳು ನಡೆಯುವ ಹಬ್ಬಕ್ಕೆ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಸುತ್ತಮುತ್ತಲ ಗ್ರಾಮಗಳ ಸಾವಿರಾರು ಭಕ್ತಾದಿಗಳು ಹಬ್ಬಕ್ಕೆ ಆಗಮಿಸಲಿದ್ದಾರೆ.

ಶುಕ್ರವಾರ ಈರಬ್ಬ ಅಂಗವಾಗಿ ಬೆಳಗ್ಗೆ 9 ಗಂಟೆಗೆ ಅಭಿಷೇಕ, ಅರ್ಚನೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಮಾಡಲಾಯಿತು. ಮಧ್ಯಾಹ್ನ 2 ಗಂಟೆಗೆ ತೈಲೂರು ಮತ್ತು ಸುತ್ತಮುತ್ತಲಿನ ಗ್ರಾಮದವರಿಂದ ಮೀಸಲು, ತಂಬಿಟ್ಟಿನ ಆರತಿ ಶ್ರೀ ತೈಲೂರಮ್ಮ, ಅವೇರಹಳ್ಳಿ, ಶ್ರೀ ಪಟ್ಟಲದಮ್ಮ, ಹುಣಸೇಮರದದೊಡ್ಡಿ ಶ್ರೀ ಮಾರಮ್ಮನವರಿಗೆ ಹೂ ಹೊಂಬಾಳೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

ಶನಿವಾರ ಅರ್ಚನೆ, ನೈವೇದ್ಯ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಮಧ್ಯಾಹ್ನ 1 ಗಂಟೆಗೆ ಸಹಸ್ರಾರು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. ಸಾಯಂಕಾಲ ಶ್ರೀ ತೈಲೂರಮ್ಮ, ಅವೇರಹಳ್ಳಿ ಶ್ರೀ ಪಟ್ಟಲದಮ್ಮ, ಹುಣಸೇಮರದದೊಡ್ಡಿ ಶ್ರೀ ಮಾರಮ್ಮನವರ ಉತ್ಸವ ತೈಲೂರು ಗ್ರಾಮದಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಶ್ರೀ ತೈಲೂರಮ್ಮ (ಪಟ್ಟಲದಮ್ಮ) ಸೇವಾ ಟ್ರಸ್ಟ್ ಅಧ್ಯಕ್ಷ ಡಾ.ಟಿ.ಚಂದ್ರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net