ಸೂರ್ಯಕಾಂತಿಯ ಪ್ರೇಮ ಗೀತೆ; ಟಗರು ಪಲ್ಯ ಚಿತ್ರದ ಎರಡನೇ ಹಾಡು ರಿಲೀಸ್

tagaru palya
Published on

ಬೆಂಗಳೂರು: ನಾಗಭೂಷಣ್ ನಾಯಕನಾಗಿ ಅಭಿನಯಿಸುತ್ತಿರುವ ಹಾಗೂ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಡೆಬ್ಯೂ ಮಾಡುತ್ತಿರುವ ಚಿತ್ರ ‘ಟಗರು ಪಲ್ಯ’. ಈ ಚಿತ್ರಕ್ಕೆ ಉಮೇಶ್ ಕೆ. ಕೃಪಾ ಆ್ಯಕ್ಷನ್-ಕಟ್ ಹೇಳಿದ್ದು, ಡಾಲಿ ಧನಂಜಯ ನಿರ್ಮಿಸಿದ್ದಾರೆ.

ಈಗಾಗಲೇ ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆಯಾಗಿ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿದೆ. ಇದೀಗ ಚಿತ್ರದ ಮತ್ತೊಂದು ಗೀತೆಯನ್ನು ಬಿಡುಗಡೆ ಮಾಡಲಾಗಿದೆ. ‘ಸೂರ್ಯಕಾಂತಿ ನಾನು..’ ಎಂದು ಸಾಗುವ ವಿಭಿನ್ನ ಪ್ರೇಮ ಗೀತೆಗೆ ಡಾಲಿ ಧನಂಜಯ ಸಾಹಿತ್ಯ ಬರೆದಿದ್ದು, ವಾಸುಕಿ ವೈಭವ್ ಸಂಗೀತ ಸಂಯೋಜನೆಯಲ್ಲಿ ಮಾಧುರಿ ಶೇಷಾದ್ರಿ ಹಾಡಿದ್ದಾರೆ. ಹಳ್ಳಿಯ ಸೊಗಡನ್ನು ಹೊಂದಿರುವ ಮಧುರ ಗೀತೆಗೆ ನಾಯಕಿ ಅಮೃತಾ ಪ್ರೇಮ್ ಕುಣಿದು ಕುಪ್ಪಳಿಸಿದ್ದಾರೆ.

ಇನ್ನು ‘ಟಗರು ಪಲ್ಯ’ ಚಿತ್ರದಲ್ಲಿ ನಾಗಭೂಷಣ್ ಹಾಗೂ ಅಮೃತಾ ಜತೆಗೆ ರಂಗಾಯಣ ರಘು, ಶರತ್ ಲೋಹಿತಾಶ್ವ, ತಾರಾ ಮುಖ್ಯ ತಾರಾಗಣದಲ್ಲಿದ್ದಾರೆ. ಉಳಿದಂತೆ ವಾಸುಕಿ ವೈಭವ್ ಸಂಗೀತ ಹಾಗೂ ಎಸ್. ಕೆ. ರಾವ್ ಛಾಯಾಗ್ರಹಣ ಚಿತ್ರಕ್ಕೆ ಇರಲಿದೆ. ಇದೇ ವರ್ಷದ ಕನ್ನಡ ರಾಜ್ಯೋತ್ಸವದಂದು ಚಿತ್ರ ರಿಲೀಸ್ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net