ವಿಲನ್ ತಬು: ನಾಗಾರ್ಜುನ್ 100ನೇ ಚಿತ್ರದಲ್ಲಿ ಖಳನಾಯಕಿಯಾದ ನಾಯಕಿ

ತಬು
ತಬು
Published on

ಪ್ರಮುಖ ಮುಖ್ಯಾಂಶಗಳು

  • ನಾಗಾರ್ಜುನಗೆ ವಿಲನ್ ಆದ ತಬು
  • ತಂದೆ-ಮಗಳ ಬಾಂಧವ್ಯ ಸಾರುವ ಸಿನಿಮಾ
  • ಕನ್ನಡದ ಸುಶ್ಮಿತಾ ಭಟ್ ಕಲಾಬಳಗದಲ್ಲಿ ಎಂಬ ಮಾಹಿತಿ
ಟಾಲಿವುಡ್ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ್ ಸದ್ಯ ತಮ್ಮ ವೃತ್ತಿ ಜೀವನದ 100ನೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಾರ್ತಿಕ್ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಇನ್ನು ‘ಕಿಂಗ್ 100’ ಚಿತ್ರದಲ್ಲಿ ಬಹುಭಾಷಾ ತಾರೆ ತಬು ನಟಿಸುತ್ತಿರುವುದು ಈಗಾಗಲೇ ಖಚಿತವಾಗಿದೆ. ಆ ಮೂಲಕ 28 ವರ್ಷಗಳ ಬಳಿಕ ನಾಗಾರ್ಜುನ್ ಮತ್ತು ತಬು ಬೆಳ್ಳಿತೆರೆಯಲ್ಲಿ ಒಂದಾಗುತ್ತಿದ್ದಾರೆ. ಈ ಹಿಂದೆ ತೆಲುಗಿನ ‘ನಿನ್ನೆ ಪೆಳ್ಳಡತಾ’ (1996), ‘ಆವಿಡಾ ಮಾ ಆವಿಡೆ’ (1998) ಚಿತ್ರಗಳಲ್ಲಿ ನಟಿಸಿದ್ದ ಈ ಜೋಡಿ ಬಹುವರ್ಷಗಳ ಬಳಿಕ ಬೆಳ್ಳಿತೆರೆಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ನೆಚ್ಚಿನ ಜೋಡಿಯು ಒಂದಾಗುತ್ತಿರುವುದು ಅಭಿಮಾನಿಗಳ ಖುಷಿಗೆ ಕಾರಣವಾಗಿತ್ತು. ಆದರೆ, ‘ಕಿಂಗ್ 100’ ಚಿತ್ರದಲ್ಲಿ ತಬು, ನಾಗಾರ್ಜುನ್ ಜೋಡಿಯಾಗಿ ನಟಿಸುತ್ತಿಲ್ಲವಂತೆ, ಬದಲಾಗಿ ಅವರು ವಿಲನ್ ಪಾತ್ರದಲ್ಲಿದ್ದಾರೆ ಎಂದು ವರದಿಯಾಗಿದೆ. ‘ಕಿಂಗ್ 100’ ತಂದೆ-ಮಗಳ ಬಾಂಧವ್ಯ ಸಾರುವ ಜತೆಗೆ ಸಾಮಾನ್ಯ ಮನುಷ್ಯ ದೊಡ್ಡ ಉದ್ಯಮಿ ಆಗುವ ಕಥೆ ಎನ್ನಲಾಗುತ್ತಿದೆ. ಅದರಲ್ಲಿ ನಾಗಾರ್ಜುನಗೆ ತಬು ವಿರುದ್ಧ ಇರಲಿದ್ದಾರಂತೆ. ಇನ್ನು ಕನ್ನಡದ ಸುಶ್ಮಿತಾ ಭಟ್ ಇಲ್ಲಿ ಮಗಳಾಗಿ ಅಭಿನಯಿಸುತ್ತಿದ್ದಾರೆ. ಇದೇ ಜುಲೈ 10ಕ್ಕೆ ಚಿತ್ರದ ಟೀಸರ್ ಮೂಲಕ ಟೈಟಲ್ ಘೋಷಣೆಯಾಗಲಿದೆ ಎಂದು ವರದಿಯಾಗಿದೆ. ಇನ್ನು ಬಹುಭಾಷಾ ತಾರೆ ತಬು ಖಳನಾಯಕಿಯಾಗಿ ಅಭಿನಯಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ‘ಮಖ್ಬೂಲ್’, ‘ಫಿತೂರ್’, ‘ಹೈದರ್’, ‘ಅಂಧಾಧುನ್’ ಚಿತ್ರಗಳಲ್ಲಿ ಅವರು ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. -ಏಜೆನ್ಸೀಸ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net