ತಲೆನೋವಾದ ತಬ್ಲಿಘಿಗಳ ಪತ್ತೆ ಕಾರ್ಯ- ರಾಜಧಾನಿಯ 10 ಮಸೀದಿಗಳಿಗೆ ಭೇಟಿ | 2-3ನೇ ಸಂಪರ್ಕ ಹೊಂದಿರುವ ಭೀತಿ

Tablighi
Published on

ಬೆಂಗಳೂರು: ಕರೊನಾ ಸೋಂಕು ನಿಯಂತ್ರಿಸುವಲ್ಲಿ ಹೋರಾಟ ನಡೆಸುತ್ತಿ ರುವ ಸರ್ಕಾರಕ್ಕೆ ತಬ್ಲಿಘಿ ಸಭೆಯಲ್ಲಿ ಭಾಗವಹಿಸಿದ್ದವರನ್ನು ಪತ್ತೆ ಹಚ್ಚುವುದೇ ದೊಡ್ಡ ತಲೆನೋವಾಗಿದೆ.

ದೆಹಲಿಯ ನಿಜಾಮುದ್ದೀನ್​ನಲ್ಲಿ ತಬ್ಲಿಘಿ ಜಮಾತ್ ಸಭೆಯಲ್ಲಿ ಭಾಗವಹಿ ಸಿದ್ದ 57 ವಿದೇಶಿಯರು ಮತ್ತು 1,300 ತಬ್ಲಿಘಿಗಳು ಬೆಂಗಳೂರು ಸೇರಿ ರಾಜ್ಯದ ವಿವಿಧ ಮಸೀದಿಗಳಿಗೆ ಭೇಟಿ ನೀಡಿದ್ದಾರೆ. ಬೆಂಗಳೂರಿನ ಪಾದರಾಯನಪುರ, ಬನ್ನೇರುಘಟ್ಟ ರಸ್ತೆಯ ಮಸೀದಿ, ಕುಮಾರಸ್ವಾಮಿ ಲೇಔಟ್​ನ ಇಲಿಯಾಸ್​ನಗರ, ಶಿವಾಜಿನಗರ ಸೇರಿ ವಿವಿಧೆಡೆಯ 10 ಮಸೀದಿಗಳಿಗೆ ವಿದೇಶಿ ತಬ್ಲಿಘಿಗಳು ಭೇಟಿ ನೀಡಿ ಪ್ರವಚನ ನೀಡಿದ್ದರು. ದೆಹಲಿಯಲ್ಲಿ ತಬ್ಲಿಘಿಗಳಿಗೆ ಸೋಂಕು ಕಂಡುಬಂದ ನಂತರ ಪರಿಸ್ಥಿತಿ ಗಂಭೀರತೆ ಪಡೆದಿದೆ.

ವಿದೇಶಿ ಮತ್ತು ಸ್ಥಳೀಯ ತಬ್ಲಿಘಿಗಳು ಗೊತ್ತೋ ಗೊತ್ತಿಲ್ಲದೆಯೋ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಹೋದಾಗ ಕರೊನಾ ಸೋಂಕು ಹರಡಿರುವ ಅನುಮಾನಗಳು ಹೆಚ್ಚಾಗಿದೆ. ಇದೇ ಕಾರಣಕ್ಕೆ ಬಾಪೂಜಿನಗರ ಮತ್ತು ಪಾದರಾಯನಪುರ ವಾರ್ಡ್ ಗಳನ್ನು ಸೀಲ್​ಡೌನ್ ಮಾಡಲಾಗಿದೆ. ಇದೀಗ ಶಿವಾಜಿನಗರ, ಇಲಿಯಾಸ್​ನಗರ, ಬನ್ನೇರುಘಟ್ಟ ರಸ್ತೆಯ ಮಸೀದಿ ಸೇರಿ ಹಲವೆಡೆ ಭೀತಿ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ಹಲವೆಡೆ ಬಹುತೇಕ ರಸ್ತೆಗಳನ್ನು ಸಂಪೂರ್ಣ ಬಂದ್ ಮಾಡಿದ್ದಾರೆ. ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ನಿಗಾ ವಹಿಸಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಆದರೂ ಆತಂಕ ಕಡಿಮೆಯಾಗಿಲ್ಲ.

57 ಎಫ್​ಐಆರ್: ಭಾರತೀಯರು ಹೊರತುಪಡಿಸಿ, 57 ವಿದೇಶಿ ತಬ್ಲಿಘಿಗಳು ಇದ್ದಾರೆ. ಬೆಂಗಳೂರಿನಲ್ಲಿ 31, ಬೆಳಗಾವಿ 10, ಬೀದರ್ 8, ತುಮಕೂರಿನಲ್ಲಿ 8 ಜನರನ್ನು ಗುರುತಿಸಿ ನಿಗಾಬಂಧನದಲ್ಲಿ ಇರಿಸಲಾಗಿದೆ. ವೀಸಾ ಪ್ರಕ್ರಿಯೆಯಡಿ ಪ್ರತಿಯೊಬ್ಬರ ವಿರುದ್ಧ ಎಫ್​ಐಆರ್ ದಾಖಲಿಸಿ ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಇಂಡೋನೇಷ್ಯಾದ 20, ಇಂಗ್ಲೆಂಡ್​ನ 1, ದಕ್ಷಿಣ ಆಫ್ರಿಕಾದ 4, ಜಾಂಬಿಯಾದ 3, ರ್ಕಿಗಿಸ್ತಾನದ 19, ಅಮೆರಿಕದ 1, ಫ್ರಾನ್ಸ್ನ 1, ಕೀನ್ಯಾದ 1 ಮತ್ತು 7 ಮಂದಿ ಬಾಂಗ್ಲಾ ಪ್ರಜೆಗಳನ್ನು ಪತ್ತೆಹಚ್ಚಲಾಗಿದೆ.

ಕರೆ ಸ್ವೀಕರಿಸುವರೇ ಇಲ್ಲ: ತಬ್ಲಿಘಿ ಧರ್ಮ ಪ್ರಚಾರಕ್ಕೆ ಹೋಗಿದ್ದ ತಬ್ಲಿಘಿಗಳು ಕರೆ ಮಾಡಿ ಕ್ವಾರಂಟೈನ್ ಆಗುವಂತೆ ರಾಜ್ಯ ಆರೋಗ್ಯ ಇಲಾಖೆ 080- 2971 1171 ದೂರವಾಣಿ ಸಂಖ್ಯೆ ನೀಡಿದೆ. ಆದರೆ, ಇದಕ್ಕೆ ‘ವಿಜಯವಾಣಿ’ ಕರೆ ಮಾಡಿದಾಗ ಸ್ವೀಕಾರ ಮಾಡಲಿಲ್ಲ. ಇನ್ನೂ ತಬ್ಲಿಘಿಗಳೇ ಕರೆ ಮಾಡಿದ್ದಾಗ ಕರೆ ಸ್ವೀಕರಿಸದೆ ಇದ್ದರೆ ಸರ್ಕಾರದ ಯೋಜನೆ ಪ್ರಯೋಜನ ಏನೆಂಬುದೇ ಪ್ರಶ್ನೆಯಾಗಿದೆ.

ಶೋಧ ಕಾರ್ಯ ಮುಂದುವರಿಕೆ: ಬೆಂಗಳೂರಿನಲ್ಲಿ ತಬ್ಲಿಘಿ ಜತೆ ಗುರುತಿಸಿಕೊಂಡ ವರು ಮತ್ತು ದೆಹಲಿ, ಇನ್ನಿತರ ಪ್ರದೇಶಕ್ಕೆ ಧರ್ಮ ಪ್ರಚಾರ, ಬೋಧನೆಗೆ ಹೋಗಿದ್ದವರ ಹೆಸರು, ವಿಳಾಸ ಪಡೆದು ನಿರಂತರವಾಗಿ ಶೋಧ ಕಾರ್ಯ ನಡೆಸುತ್ತಿದ್ದೇವೆ. ಕೆಲವರು ಹೋ ಕ್ವಾರಂಟೈನ್ ಆಗಿದ್ದರೆ, ಕೆಲವರು ಭಯದಿಂದ ದೂರ ಉಳಿದಿ ದ್ದಾರೆ. ಅಂಥವರವನ್ನು ಪತ್ತೆ ಹಚ್ಚಿ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net