

Property Dispute : ಆಸ್ತಿ ವಿಚಾರವಾಗಿ ಅಣ್ಣ ತಮ್ಮಂದಿರ ನಡುವೆ ಕಲಹ ಉಂಟಾಗಿ, ಕಿರಿಯ ಸಹೋದರನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಮುಂಬೈನ ಚೆಂಬೂರಿನಲ್ಲಿ ನಡೆದಿದೆ.
ಗಾಯಾಳು ಸೂರಜ್ ಮುಹಮ್ಮದ್ ರಾಮಕಿಶೋರ್ ಠಾಕೂರ್ (26) ಅವರನ್ನು ಸಿಯಾನ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಕೊಲೆ ಆರೋಪದ ಮೇರೆಗೆ ಅಣ್ಣನಾದ ಚಂದ್ರಮೋಹನ್ ರಾಮಕಿಶೋರ್ ಠಾಕೂರ್ನನ್ನು ಆರ್ಸಿಎಫ್ ಪೊಲೀಸರು ಬಂಧಿಸಿದ್ದಾರೆ.
ಪೋಲಿಸರ ಮಾಹಿತಿ ಪ್ರಕಾರ, ವಾಶಿನಕ ಮಾಧ (MADHA) ಕಾಲೋನಿಯಲ್ಲಿ ದೂರುದಾರರಾದ ಲಗೀನ ರಾಮಕಿಶೋರ್ ಠಾಕೂರ್ ದಂಪತಿ, ಕಿರಿಯ ಮಗ ಸೂರಜ್ನೊಂದಿಗೆ ವಾಸಿಸುತ್ತಿದ್ದರು. ಹಿರಿಯ ಮಗ ಅವನ ಕುಟುಂಬದೊಂದಿಗೆ ಬೇರೆ ಮನೆಯಲ್ಲಿ ವಾಸಿಸುತ್ತಿದ್ದ. ಲಗೀನ ಹಾಗೂ ಆಕೆಯ ಪತಿ ಮುಂಬೈಯಿಂದ ತಮ್ಮ ಊರಿಗೆ ವಾಪಾಸ್ಸಾಗುವಾಗ ಮಗನಾದನ ಚಂದ್ರಮೋಹನ್ ಅವರ ಮೊಬೈಲ್ ಕದ್ದು, ಬ್ಯಾಂಕ್ ಖಾತೆಗಳನ್ನು ವಿಚಾರಣೆ ನಡೆಸಿದ್ದರಿಂದ ಅವರ ಖಾತೆಗಳನ್ನು ಬ್ಲಾಕ್ ಮಾಡಿಸಿದರು ಎಂದು ತಿಳಿಸಿದ್ದಾರೆ.
ಸೂರಜ್ ಹಾಗೂ ಚಂದ್ರಮೋಹನ್ ನಡುವೆ ಆಸ್ತಿಯ ವಿಚಾರವಾಗಿ ಅನೇಕ ಬಾರಿ ಗಲಭೆಗಳು ನಡೆಯುತ್ತಿದ್ದವು. ಹಾಗೆ ಚಂದ್ರಮೋಹನ್ ಉದ್ದೇಶಪೂರ್ವಕವಾಗಿ ಆಸ್ತಿಯನ್ನು ವಶಪಡಿಸಿಕೊಳ್ಳಲು ಪಯತ್ನಿಸುತ್ತಿದ್ದಾನೆ ಎಂದು ಇವರು ನಂಬಿದ್ದರು. ಶುಕ್ರವಾರ (ಜುಲೈ 25) ರಂದು ಸಂಜೆ 6:15 ಕ್ಕೆ ಚಂದ್ರಮೋಹನ್ ಚಾಕುವಿನಿಂದ ತರಕಾರಿ ಕತ್ತರಿಸುತ್ತಿರುವಾಗ, ಸೂರಜ್ ಆತನಿಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದಾನೆ. ಈ ವೇಳೆ ಕೋಪಗೊಂಡ ಚಂದ್ರಮೋಹನ್ ನಿನಗೆ ಎಷ್ಟು ಆಸ್ತಿ ಬೇಕು? ಎಂದು ಪ್ರಶ್ನಿಸಿ, ತಾನು ಹಿಡಿದಿದ್ದ ಚಾಕುವಿನಿಂದ ಸೂರಜ್ನ ಹೊಟ್ಟೆಗೆ ಬರ್ಬರವಾಗಿ ಹಲ್ಲೆ ಮಾಡಿದ್ದಾನೆ. ಇನ್ನು ಸೂರಜ್ ಗಂಭೀರ ಗಾಯಗೊಂಡು ಅಲ್ಲಿಯೇ ಬಿದ್ದಿದ್ದಾನೆ.
ನಂತರ ಸೂರಜ್ನನ್ನು ಕುಟುಂಬಸ್ಥರು ಸಿಯಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ತನಿಖೆಗೆ ಸಂಬಂಧಪಟ್ಟಂತೆ ಆರ್ಸಿಎಫ್ ಪೊಲೀಸರು ಭಾರತೀಯ ನ್ಯಾಯ ಸಂಹಿತಾ (BNS) ಕಾಯ್ದೆ ಅಡಿ ಸೆಕ್ಷನ್ 109 ಪ್ರಕರಣ ದಾಖಲಿಸಿದ್ದಾರೆ. (ಏಜೆನ್ಸೀಸ್)