ಟಿ-20 ವಿಶ್ವಕಪ್​: ಟಾಸ್​ ಗೆದ್ದ ಬಾಂಗ್ಲಾ ಫೀಲ್ಡಿಂಗ್​​ ಆಯ್ಕೆ, ಅರ್ಧ ಶತಕ ಬಾರಿಸಿದ ರಾಹುಲ್​

kl rahul
Published on

ಅಡಿಲೇಡ್​: ಐಸಿಸಿ ಟಿ-20 ವಿಶ್ವಕಪ್​ನ 4ನೇ ಲೀಗ್​ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ಇಂದು(ಬುಧವಾರ)ಮುಖಾಮುಖಿಯಾಗಿವೆ. ಟಾಸ್​ ಗೆದ್ದ ಬಾಂಗ್ಲಾದೇಶ ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡಿದ್ದು, ಭಾರತ ತಂಡ ಆರಂಭಿಕ 10 ಓವರ್​ನಲ್ಲಿ 86 ರನ್​ ಪೇರಿಸಿದ್ದು, 2 ವಿಕೆಟ್​ ನಷ್ಟ ಅನುಭವಿಸಿದೆ.

ಇನ್ನು ಟಿ20 ವಿಶ್ವಕಪ್​ನ ಟೂರ್ನಿಯ ಮೊದಲ ಮೂರು ಪಂದ್ಯದಲ್ಲಿ ಕೇವಲ 22 ರನ್​ ಗಳಿಸಿ ವೈಫಲ್ಯ ಕಂಡಿದ್ದ ಉಪನಾಯಕ ಕೆ.ಎಲ್​ ರಾಹುಲ್​, ಇಂದಿನ ಪಂದ್ಯದಲ್ಲಿ ಈಗಾಗಲೇ ಅರ್ಧ ಶತಕ ಬಾರಿಸಿದ್ದಾರೆ. 9.2ನೇ ಓವರ್​ನಲ್ಲಿ ಅಂದರೆ 32 ಬಾಲ್​ಗೆ 50 ರನ್​ ಪಡೆದರು.

ಸತತ 2 ಗೆಲುವಿನ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ಮುಗ್ಗರಿಸಿರುವ ಭಾರತ ತಂಡ, ಇಂದು ನಡೆಯುತ್ತಿರುವ 4ನೇ ಲೀಗ್​ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ ಗೆಲ್ಲಲೇಬೇಕು. ಇಲ್ಲವಾದಲ್ಲಿ ಸೆಮಿಫೈನಲ್​ಗೆ ತುಳಿಯವು ಅವಕಾಶ ಭಾರತ ತಂಡದ ಕೈತಪ್ಪಲಿದೆ. ಭಾರತ ತಂಟವು ಈ ಪಂದ್ಯ ಗೆದ್ದರೆ 6 ಅಂಕಗಳೊಂದಿಗೆ ಗ್ರೂಪ್​-2ರ ಅಗ್ರಸ್ಥಾನಕ್ಕೇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net