ಟಿ.ಪಿ.ರಾಜು ಅವಿರೋಧ ಆಯ್ಕೆ

3hgr10
ತೊರೆ ಕಾಡನಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ ಟಿ.ಪಿ.ರಾಜು ಅವರನ್ನು ಅಭಿನಂದಿಸಲಾಯಿತು.ಪ್ರಸಾದ್, ಮಾಜಿ ಅಧ್ಯಕ್ಷ ಕೆ.ಸಿ.ಗೌಡ, ಹೊಂಬಾಳೆಯ ಎಂ.ಪಿ., ನಾಗೇಂದ್ರ, ಅನಿತಾ, ಪದ್ಮ್ಮಾ, ರಕ್ಷಿತಾ, ಸುಮಲತಾ, ರವಿ ಇದ್ದರು.
Published on

ಹಲಗೂರು: ತೊರೆಕಾಡನಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಟಿ.ಪಿ. ರಾಜು ಅವಿರೋಧವಾಗಿ ಆಯ್ಕೆಯಾದರು.

ಕೆ.ಸಿ.ಗೌಡ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಟಿ.ಪಿ. ರಾಜು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು. ಚುನಾವಣೆ ಅಧಿಕಾರಿಯಾಗಿ ಕೃಷಿ ಇಲಾಖೆಯ ಅಧಿಕಾರಿ ದೀಪಕ್ ಕಾರ್ಯ ನಿರ್ವಹಿಸಿದರು. ನಂತರ ಸದಸ್ಯರು ಹಾಗೂ ಅಧ್ಯಕ್ಷರ ಅಭಿಮಾನಿಗಳು ಮೈಸೂರು ಪೇಟ ತೊಡಿಸಿ ಅಭಿನಂದಿಸಿದರು.

ಸನ್ಮಾನ ಸ್ಪೀಕರಿಸಿ ಮಾತನಾಡಿದ ರಾಜು, ನನ್ನ ಮೇಲೆ ವಿಶ್ವಾಸವಿಟ್ಟು ನನ್ನನ್ನು ಗೆಲ್ಲಿಸಲು ಕಾರಣಕರ್ತರಾದ ಸದಸ್ಯರುಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರ ಪಡೆದು ಪಂಚಾಯಿತಿ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಸಾದ್, ಮಾಜಿ ಅಧ್ಯಕ್ಷ ಕೆ.ಸಿ.ಗೌಡ, ಹೊಂಬಾಳೆಯ ಎಂ.ಪಿ., ನಾಗೇಂದ್ರ, ಅನಿತಾ, ಪದ್ಮ್ಮಾ, ರಕ್ಷಿತಾ, ಸುಮಲತಾ, ರವಿ, ಮುಖಂಡರಾದ ಶಿವರಾಜು, ನಾಗರಾಜು, ಬಿ.ಡಿ.ರಾಜು, ಕಾಂತರಾಜು, ಡಿ. ಪುಟ್ಟದಾಸೇಗೌಡ, ರಾಜೇಶ , ಪ್ರಕಾಶ್, ರಾಮಚಂದ್ರ, ಟಿ.ಆರ್. ವಾಣಿಶ್ರೀ, ಟಿ.ಆರ್.ಚಂದ್ರುಶ್ರೀ, ಸಿದ್ದಾಚಾರಿ, ಕೃಷ್ಣ, ಸುರೇಶ್, ಮೂರ್ತಿ, ತಮ್ಮಣ್ಣೇಗೌಡ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net