

Bashar Assad: ಬಂಡುಕೋರರ ಪಡೆಗಳು (Syrian Rebels) ಸಿರಿಯಾ ಸರ್ಕಾರದ ವಿರುದ್ಧ ದೊಡ್ಡ ಸಮರ ಸಾರಿದ್ದಲ್ಲದೇ, ಮಾಜಿ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ 25 ವರ್ಷಗಳ ಆಡಳಿತಕ್ಕೆ ಯುಗಾಂತ್ಯವಾಡಿದ ವಿಷಯ ಇದೀಗ ಜಗಜ್ಜಾಹೀರಾಗಿದೆ. ಸಿರಿಯಾವನ್ನು ಅಸ್ಸಾದ್ರಿಂದ ಸಂಪೂರ್ಣವಾಗಿ ಕಸಿದುಕೊಂಡ ಬಂಡುಕೋರರು, ಸಿರಿಯಾದ ರಾಜಧಾನಿ ಡಮಾಸ್ಕಸ್ ಅನ್ನು ತಮ್ಮ ಸ್ವಾಧಿನಕ್ಕೆ ಪಡೆದುಕೊಂಡು, ಹೊಸ ಆಡಳಿತಕ್ಕೆ ದಾಪುಗಾಲಿಟ್ಟಿದ್ದಾರೆ. ಬಶರ್ ಅಧಿಕಾರದಲ್ಲಿ ಏನೇನಿತ್ತೋ ಅದನ್ನೆಲ್ಲಾ ತಮ್ಮ ಆಡಳಿತಕ್ಕೆ ತರುವಲ್ಲಿ ಯಶಸ್ವಿಯಾಗಿರುವ ಸಿರಿಯನ್ ರೆಬೆಲ್ಸ್. ಅಸ್ಸಾದ್ ಒಡೆತನದ ಅರಮನೆಯಿಂದ ಹಿಡಿದು ಐಷಾರಾಮಿ ಕಾರು, ಲಕ್ಸುರಿ ಜೀವನವನ್ನು ಬಟಾಬಯಲು ಮಾಡಿದ್ದಾರೆ.
ಇತ್ತೀಚೆಗಷ್ಟೇ ಅಸ್ಸಾದ್ ಉಳಿದಿದ್ದ ಭವ್ಯ ಬಂಗಲೆಯ ಮೂಲೆ ಮೂಲೆಯನ್ನು ತಡಕಾಡಿರುವ ಬಂಡುಕೋರರು, ಅಸ್ಸಾದ್ ಬಳಸುತ್ತಿದ್ದ ದುಬಾರಿ ಮೌಲ್ಯದ ವಸ್ತುಗಳು, ಐಷಾರಾಮಿ ಕಾರುಗಳನ್ನು ವಿಡಿಯೋ ಮೂಲಕ ಜನರ ಮುಂದಿಟ್ಟಿದ್ದರು. ಈ ವಿಡಿಯೋವನ್ನು ರಷ್ಯಾದಲ್ಲಿ ತನ್ನ ಕುಟುಂಬದೊಂದಿಗೆ ವಾಸ್ತವ್ಯ ಹೂಡಿರುವ ಬಶರ್ ಅಲ್ ಅಸ್ಸಾದ್ಗೆ ಸಂದೇಶವನ್ನಾಗಿ ರವಾನಿಸಿದ್ದಾರೆ ಎಂಬುದರಲ್ಲಿ ಅನುಮಾನವೇ ಇಲ್ಲ. ಈ ಮಧ್ಯೆ ಅಸ್ಸಾದ್ ಆ ಕಾಲದಲ್ಲಿ ಒಳಉಡುಪನ್ನು ಧರಿಸಿ, ತೆಗೆಸಿಕೊಂಡ ಫೋಟೋಗಳನ್ನು ತೆರೆದಿಟ್ಟಿರುವ ಬಂಡುಕೋರರು, ಅಸ್ಸಾದ್ ಚಡ್ಡಿ ಧರಿಸಿರುವ ಹಲವು ಭಂಗಿಗಳ ಛಾಯಾಚಿತ್ರವನ್ನು ಹರಿಬಿಟ್ಟಿದ್ದಾರೆ.
ತನ್ನ 25 ವರ್ಷಗಳ ಆಡಳಿತ ಕಸಿದುಕೊಂಡ ಬಂಡುಕೋರರಿಗೆ ಹೆದರಿ ಸಿರಿಯಾದಿಂದ ಪಲಾಯನ ಮಾಡಿದ್ದ ಬಶರ್ ಅಲ್-ಅಸ್ಸಾದ್, ಸದ್ಯ ರಷ್ಯಾದಲ್ಲಿ ಕುಟುಂಬದೊಂದಿಗೆ ನೆಲೆ ಕಂಡುಕೊಂಡಿದ್ದಾರೆ. ಸಿರಿಯಾ ರಾಜಧಾನಿ ಡಮಾಸ್ಕಸ್ ಅನ್ನು ವಶಪಡಿಸಿಕೊಂಡ ಬಂಡುಕೋರರು, ಅಲೆಪ್ಪೊದಲ್ಲಿನ ಅಸ್ಸಾದ್ ಅರಮನೆಯಲ್ಲಿದ್ದ ಆಲ್ಬಂಗಳಲ್ಲಿ ಮಾಜಿ ಅಧ್ಯಕ್ಷನ ಹಳೆಯ ಫೋಟೋಗಳನ್ನು ಜಗತ್ತಿಗೆ ತೋರಿಸಿದ್ದಾರೆ. ಕ್ಯಾಮರಾ ಮುಂದೆ ಆಕರ್ಷಕವಾಗಿ ಕಾಣಿಸುವಂತೆ ಪೋಸ್ ನೀಡಿರುವ ಅಸ್ಸಾದ್, ಬಹುತೇಕ ಫೋಟೋಗಳಲ್ಲಿ ಚಡ್ಡಿಯಲ್ಲೇ ಮಿಂಚಿದ್ದಾರೆ.
ಶರ್ಟ್, ಪ್ಯಾಂಟ್ ಧರಿಸದೆ ಕೇವಲ ಚಡ್ಡಿಯಲ್ಲಿ ಕಾಣಿಸಿಕೊಂಡಿರುವ ಅಸ್ಸಾದ್, ಸ್ಕೂಟರ್ ಮೇಲೆ ನಿಂತು ತೆಗೆಸಿಕೊಂಡಿರುವ ಫೋಟೋಗಳು ಜಾಲತಾಣಗಳಲ್ಲಿ ಕಾಣಸಿಕ್ಕಿವೆ. ಸದ್ಯ ಈ ಫೋಟೋಗಳು ವ್ಯಾಪಕವಾಗಿ ಹರಿದಾಡಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ,(ಏಜೆನ್ಸೀಸ್).