ಕತ್ತಿ ಹಬ್ಬ ಆಚರಣೆ ಎರಡು ಬಣಗಳ ಅಭಿಪ್ರಾಯ ಸಂಗ್ರಹ

21-KGL-1,
ಕೊಳ್ಳೇಗಾಲದ ಆರಕ್ಷಕ ಉಪ ಅಧೀಕ್ಷಕರ ಕಚೇರಿಯಲ್ಲಿ ಬುಧವಾರ ಕತ್ತಿ ಹಬ್ಬದ ವಿಚಾರವಾಗಿ ಸಮುದಾಯದ ಎರಡು ಗುಂಪುಗಳ ಮುಖಂಡರ ಜತೆ ಡಿವೈಎಸ್ಪಿ ಎಂ.ಧಮೇರ್ಂದ್ರ ಮತ್ತು ತಹಸೀಲ್ದಾರ್ ಬಸವರಾಜು ಸಭೆ ನಡೆಸಿದರು. ಶಿವಮಾದಯ್ಯ ಇದ್ದರು.
Published on

ಕೊಳ್ಳೇಗಾಲ: ದೇವಾಂಗ ಸಮಾಜದ ಶ್ರೀ ರಾಮಲಿಂಗ ಚೌಡೇಶ್ವರಿ ದೊಡ್ಡ ಕತ್ತಿ ಹಬ್ಬ ಆಚರಣೆ ವಿಚಾರವಾಗಿ ಸಮುದಾಯದಲ್ಲಿ ಎರಡು ಬಣಗಳಾಗಿ ಪರ-ವಿರೋಧ ವ್ಯಕ್ತವಾಗಿ ಗೊಂದಲ ಉಂಟಾಗಿರುವ ಹಿನ್ನೆಲೆಯಲ್ಲಿ ಬುಧವಾರ ಕೊಳ್ಳೇಗಾಲ ಆರಕ್ಷಕ ಉಪ ಅಧೀಕ್ಷಕರ ಕಚೇರಿಯಲ್ಲಿ ಸಭೆ ಆಯೋಜಿಸಲಾಗಿತ್ತು.

ಡಿವೈಎಸ್ಪಿ ಎಂ.ಧಮೇಂದ್ರ, ತಹಸೀಲ್ದಾರ್ ಬಸವರಾಜು, ಸಿಪಿಐ ಶಿವಮಾದಯ್ಯ ಅವರು ಕತ್ತಿ ಹಬ್ಬ ವಿಚಾರವಾಗಿ ಎರಡು ಬಣಗಳ ಮುಖಂಡರ ಅಭಿಪ್ರಾಯಗಳನ್ನು ಸಂಗ್ರಹಿಸಿದರು.

ಸಭೆಯಲ್ಲಿ ದೇವಾಂಗ ಸಮಾಜದ ಮುಖಂಡ ಬಂಗಾರಪ್ಪ ಮಾತನಾಡಿ, ಕತ್ತಿ ಹಬ್ಬ ಆಚರಣೆ ಮಾಡಬೇಕೆಂದರೆ ದೇವಾಂಗ ಸಮಾಜದ ಮಹಾಸಭೆಯಲ್ಲಿ ನಿರ್ಧರಿಸಬೇಕು. ಆದರೆ, ನಮ್ಮ ಸಮಾಜದ ಕೆಲವರು ಮಹಾಸಭೆಯನ್ನು ಕಡೆಗಣಿಸಿ ಸರ್ವಾಧಿಕಾರಿ ಧೋರಣೆಯಿಂದ ಹಬ್ಬವನ್ನು 2026 ಫೆ.4 ರಿಂದ 13ರವರೆಗೆ ನಡೆಸಲು ನಿಗದಿಪಡಿಸಲಾಗಿದೆ. ಸಂಪ್ರದಾಯದಂತೆ ಕತ್ತಿ ಹಬ್ಬ ನಡೆಸಬೇಕಾದರೆ 12 ವರ್ಷ ಪೂರ್ಣಗೊಳ್ಳಬೇಕಿದ್ದರೂ 11 ವರ್ಷಕ್ಕೆ ನಡೆಸಲು ತೀರ್ಮಾನಿಸಲಾಗಿದೆ. ಇದು ಕುಲಾಚಾರಕ್ಕೆ ವಿರುದ್ಧವಾಗಿದೆ. ಹಾಗಾಗಿ 12 ವರ್ಷ ತುಂಬಿದ ಬಳಿಕವೇ ಹಬ್ಬ ಆಗಬೇಕಿದೆ. ತಾಲೂಕು ಆಡಳಿತ ಒಗ್ಗೂಡಿ ಹಬ್ಬವನ್ನು ಸಂಪ್ರದಾಯದಂತೆ ಆಚರಿಸಲು ಅನುಮತಿ ಮಾಡಿಕೊ ಡಬೇಕೆಂದರು.

ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ: ಸಭೆಯಲ್ಲಿ ದೇವಾಂಗ ಸಮಾಜದ ಮುಖಂಡ ಗಿರೀಶ್ ಬಾಬು ಮಾತನಾಡಿ, ನಾನು ಎರಡು ಗುಂಪಿಗೂ ಸೇರಿದವನಲ್ಲ. ನನಗೆ ಹಬ್ಬ ನಡೆಯಬೇಕು ಎಂದು ತಿಳಿಸಿ ತಮಗೆ ನೀಡಿದ್ದ ಶ್ರೀ ರಾಮಲಿಂಗ ಚೌಡೇಶ್ವರಿ ದೊಡ್ಡ ಕತ್ತಿ ಹಬ್ಬ ಟ್ರಸ್ಟ್ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದರು.

ತಹಸೀಲ್ದಾರ್ ಬಸವರಾಜು ಮಾತನಾಡಿ, ಸಮುದಾಯದ ಮುಖಂಡರ ನಡುವೆ ಒಗ್ಗಟ್ಟಿಲ್ಲದ ಕಾರಣ ಮುಖಂಡರ ಮನಸ್ಥಿತಿಯನ್ನು ಸರಿಪಡಿಸಿ ಕೊಂಡು ಸರಿ-ತಪ್ಪನ್ನು ನೀವು ಕೂತು ಚರ್ಚಿಸಿದರೆ ಸಮಸ್ಯೆ ಬಗೆಹರಿಯುತ್ತದೆ. ಸಭೆಯಲ್ಲಿ ಎಲ್ಲ ಹೇಳಿಕೆಯಲ್ಲೂ ಮಹಾಸಭೆ ಯಲ್ಲಿ ನಿರ್ಧಾರ ಆಗಬೇಕೆಂಬುದರ ವಿಚಾರ ಪ್ರಸ್ತಾಪವಾಗಿದೆ. ಹಾಗಾಗಿ ಎಲ್ಲ ಸಮಾಜದ ಶೆಟ್ಟಿಗಾರರು ಹಾಗೂ ಜನರು ದೇವರ ಕಾರ್ಯವನ್ನು ಒಮ್ಮತದಿಂದ ಹಬ್ಬ ಆಚರಣೆ ಮಾಡುವ ತೀರ್ಮಾನಿಸಿದರೆ ತಾಲೂಕು ಆಡಳಿತ ಸಹಕಾರ ನೀಡಲಿದೆ ಎಂದರು.

ಸಬೆಯಲ್ಲಿ ದೇವಾಂಗ ಸಮಾಜದ ಮುಖಂಡ ನಾಗರಾಜಯ್ಯ, ಸಿ.ಎಂ ಪರಮೇಶ್ವರಯ್ಯ, ಅಚ್ಗಾಳ್, ಸೋಮ ಶೇಖರ್, ಗಿರೀಶ್ ಬಾಬು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net