Sweet Corn : ಚಳಿಗಾಲದಲ್ಲಿ ಬಿಸಿಯಾದ ಸ್ವೀಟ್ ಕಾರ್ನ್ ತಿನ್ನುವುದರಿಂದ ಏನು ಪ್ರಯೋಜನ?

Corn
Published on

Sweet Corn : ಈಗ ಚಳಿಗಾಲ ಶುರುವಾಗಿದೆ. ಬಿಸಿ..ಬಿಸಿಯಾದ ಹಾಗೂ ರುಚಿಯಾದ ಆಹಾರವನ್ನು ತಿನ್ನಲು ನಾಲಿಗೆ ಬಯಸುತ್ತದೆ. ಈ ಚಳಿಗಾಲದಲ್ಲಿ ಬಿಸಿಬಿಸಿಯಾಗಿ ಏನಾದರು ತಿನ್ನಬೇಕು ಎಂಬ ಆಸೆ ಇರುತ್ತದೆ. ವಾತಾವರಣ ತಂಪಾಗಿದೆ ಎಂದರೆ ಬಿಸಿ ಬಿಸಿ ಚಾಯ್ ಅಥವಾ ಪಕೋಡಿ, ಬಜ್ಜಿ ಮತ್ತು ಜೋಳ ನೆನಪಾಗುತ್ತದೆ. ಅದರಲ್ಲಿ ಸ್ವೀಟ್ ಕಾರ್ನ್ ಕೂಡ ಒಂದು. ಹವಾಮಾನವು ತುಂಬಾ ತಂಪಾಗಿರುವಾಗ, ಜೋಳವನ್ನು ತಿನ್ನಲು ಹೆಚ್ಚಿನವರು ಇಷ್ಟಪಡುತ್ತಾರೆ.

ಸ್ವೀಟ್‌ಕಾರ್ನ್‌ನಲ್ಲಿ ವಿಟಮಿನ್‌ಗಳು, ಖನಿಜಗಳು ಮತ್ತು ಫೈಬರ್ ಸಮೃದ್ಧವಾಗಿದೆ. ಥಯಾಮಿನ್ ಮತ್ತು ನಿಯಾಸಿನ್ ಅನ್ನು ಸಹ ಒಳಗೊಂಡಿದೆ, ಇದು ಬಿ ಜೀವಸತ್ವಗಳಾಗಿವೆ. ಇವುಗಳೊಂದಿಗೆ ರಂಜಕ ಮತ್ತು ಮೆಗ್ನೀಸಿಯಮ್ ಇವೆ. ಇವೆಲ್ಲವೂ ಚಳಿಗಾಲದಲ್ಲಿ ದೇಹಕ್ಕೆ ಒಳ್ಳೆಯದು. ಸ್ವೀಟ್ ಕಾರ್ನ್ ನಲ್ಲಿ ನಾರಿನಂಶ ಅಧಿಕವಾಗಿದೆ. ಇವುಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸಮಸ್ಯೆ ದೂರವಾಗುತ್ತದೆ. ಜೊತೆಗೆ ಮಲಬದ್ಧತೆಯೂ ಕಡಿಮೆಯಾಗುತ್ತದೆ.

ಜೋಳದಲ್ಲಿರುವ ನಾರಿನಂಶವು ಹೊಟ್ಟೆಯನ್ನು ತುಂಬಿಸುತ್ತದೆ. ಇದರಿಂದ ತೂಕವೂ ಕಡಿಮೆಯಾಗಲಿದೆ ಎನ್ನಲಾಗಿದೆ. ಈ ಸ್ವೀಟ್ ಕಾರ್ನ್ ಮೂಳೆಗಳಿಗೂ ತುಂಬಾ ಒಳ್ಳೆಯದು.

ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ವಿವಿಧ ರೀತಿಯ ಕ್ಯಾನ್ಸರ್‌ಗಳನ್ನು ತಡೆಯುತ್ತದೆ. ಇದು ಕರುಳಿನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.

ಸ್ವೀಟ್ ಕಾರ್ನ್ ತಿನ್ನುವುದರಿಂದ ತೂಕ ಕಡಿಮೆಯಾಗುತ್ತದೆ. ಇದು ಹೆಚ್ಚಿನ ಫೈಬರ್ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಈ ಕಾಳು ತಿನ್ನುವುದರಿಂದ ಹೊಟ್ಟೆ ತುಂಬುತ್ತದೆ.

ವಿಶೇಷವಾಗಿ ಬೆಳೆಯುವ ಮಕ್ಕಳು ಈ ಸ್ವೀಟ್ ಕಾರ್ನ್ ತಿನ್ನುವುದರಿಂದ ಒಳ್ಳೆಯ ಲಾಭಗಳಿವೆ ಎನ್ನುತ್ತಾರೆ.

ಜೋಳ ಪ್ರೋಬಯಾಟಿಕ್‌ಗಳನ್ನು ಸಹ ಒಳಗೊಂಡಿದೆ. ಇದರಿಂದ ಮೆಟಾಬಾಲಿಸಂ ಹೆಚ್ಚುತ್ತದೆ ಮತ್ತು ತೂಕ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ.

ಚಳಿಗಾಲದಲ್ಲಿ ಸ್ವೀಟ್ ಕಾರ್ನ್ ಅನ್ನು ಬಿಸಿಯಾಗಿ ತಿನ್ನುವುದು ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

ಸ್ವೀಟ್ ಕಾರ್ನ್​​ನಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ ಅಧಿಕವಾಗಿದೆ. ಅವರು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತಾರೆ. ಮಧುಮೇಹ ಇರುವವರೂ ಈ ಸ್ವೀಟ್ ಕಾರ್ನ್ ತಿನ್ನಬಹುದು ಎಂದು ಹೇಳಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net