ಕರೊನಾ ವೈರಸ್ ವಿರುದ್ಧ ಹೋರಾಡಲು ಆಸ್ಪತ್ರೆ ಕೆಲಸ ಆರಂಭಿಸಿದ ರಾಜಕುಮಾರಿ!

Swiden Queen
Published on

ಕರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ನೆರವಾಗಲು ಸ್ವೀಡನ್​ನ ರಾಜಕುಮಾರಿ ಸೋಫಿಯಾ ಮುಂದಾಗಿದ್ದಾರೆ. ಆನ್​ಲೈನ್​ನಲ್ಲಿ ತರಬೇತಿ ಪಡೆದುಕೊಂಡು ಇದೀಗ ಆಸ್ಪತ್ರೆಯಲ್ಲಿ ಕೆಲಸವನ್ನಾರಂಭಿಸಿದ್ದಾರೆ.

ಸ್ಟಾಕ್​ಹೋಮ್ ಸೋಫಿಯಾಮೆಂಟ್ ಆಸ್ಪತ್ರೆಯು ಆನ್​ಲೈನ್ ತರಬೇತಿ ನೀಡುತ್ತಿದೆ. ವಾರಕ್ಕೆ 80 ಜನರಿಗೆ ಈ ರೀತಿಯ ತರಬೇತಿ ನೀಡಲಾಗುತ್ತಿದ್ದು ಇದರಲ್ಲಿ ತರಬೇತಿ ಪಡೆದುಕೊಂಡಿರುವ ರಾಜಕುಮಾರಿ ಸೋಫಿಯಾ, ಸೇವೆಯನ್ನು ಆರಂಭಿಸಿದ್ದಾರೆ.

ಈ ರೀತಿಯ ತರಬೇತಿ ಪಡೆದಿರುವ ಸಿಬ್ಬಂದಿಗೆ ನೇರವಾಗಿ ಕರೊನಾ ರೋಗಿಗಳ ಚಿಕಿತ್ಸೆಗೆ ಬಿಡದೆ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ನರ್ಸ್​ಗಳ ಸಹಾಯಕ್ಕೆ ನೇಮಿಸಿಕೊಳ್ಳಲಾಗುತ್ತದೆ. ಕೆಲಸಕ್ಕೆ ಹಾಜರಾದ ಮೊದಲನೇ ದಿನ ಸಮವಸ್ತ್ರದಲ್ಲಿರುವ ಫೋಟೊವನ್ನು ಅವರು ಇನ್​ಸ್ಟ್ಟಾಗ್ರಾಮ್ಲ್ಲಿ ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net