ಇಲ್ಲಿದೆ ನೋಡಿ ಶುಭ ಸುದ್ದಿ: ದೇಶದಲ್ಲಿ ಹೆಚ್ಚುತ್ತಿದೆ ಕರೊನಾವನ್ನೇ ಮಣಿಸಿ ಗುಣಮುಖ ಆಗುತ್ತಿರುವ ಸೋಂಕಿತರ ಸಂಖ್ಯೆ

Corona 1
Published on

ನವದೆಹಲಿ: ರಾಷ್ಟ್ರವ್ಯಾಪಿ ಕರೊನಾ ಲಾಕ್‌ಡೌನ್‌ನ 24ನೇ ದಿನವಾದ ಶುಕ್ರವಾರ ದೇಶದಲ್ಲಿ ಕರೊನಾ ಪಾಸಿಟಿವ್ ರೋಗಿಗಳ ಸಂಖ್ಯೆ 13800 ದಾಟಿದೆ. ಮೃತರ ಸಂಖ್ಯೆ 455ಕ್ಕೆ ಏರಿದೆ.

ಈಗಲೂ ಮಹಾರಾಷ್ಟ್ರ ಮತ್ತು ದೆಹಲಿಯೇ ಅತಿ ಹೆಚ್ಚು ಬಾಧಿತ ರಾಜ್ಯಗಳಾಗಿವೆ. ಅಲ್ಲಿನ ಕರೊನಾ ಪಾಸಿಟಿವ್ ಕೇಸ್‌ಗಳ ಸಂಖ್ಯೆ ಕ್ರಮವಾಗಿ 3000 ಮತ್ತು 1600 ದಾಟಿವೆ. ಜಗತ್ತಿನಾದ್ಯಂತ ಕರೊನಾದಿಂದ ಮೃತಪಟ್ಟವರ ಸಂಖ್ಯೆ 1 ಲಕ್ಷ 40 ಸಾವಿರಕ್ಕಿಂತ ಹೆಚ್ಚಾಗಿದೆ. ಅಮೆರಿಕವೊಂದರಲ್ಲೇ 32 ಸಾವಿರ ಜನ ಮೃತಪಟ್ಟಿದ್ದಾರೆ.

ಈ ನಡುವೆ ಭಾರತದಲ್ಲಿ ಕರೊನಾ ವೈರಸ್‌ನಿಂದ ಗುಣಮುಖರಾಗುತ್ತಿರುವ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳ ಕಾಣುತ್ತಿರುವುದು ಸಾರ್ವಜನಿಕರಿಗೆ ಶುಭಸುದ್ದಿಯಾಗಿ ಪರಿಣಮಿಸಿದೆ.

ದಿನವೊಂದಕ್ಕೆ ಒಂದು ಸಾವಿರಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗುತ್ತಿದ್ದು ಅದೇ ರೀತಿಯಲ್ಲಿ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲೂ ತೀವ್ರ ಏರಿಕೆ ಕಂಡುಬರುತ್ತಿದೆ. ಸೋಂಕಿನಿಂದ ಗುಣವಾದವರ ಸಂಖ್ಯೆ ಶುಕ್ರವಾರ ಶೇ.13.06ಕ್ಕೆ ಏರಿಕೆಯಾಗಿದೆ. ಮಂಗಳವಾರದಂದು ಇದು ಶೇ.9.99, ಬುಧವಾರದಂದು ಶೇ.11.41 ಮತ್ತು ಗುರುವಾರದಂದು ಶೇ.12.02 ಇತ್ತು. ದಿನದಿಂದ ದಿನಕ್ಕೆ ಚೇತರಿಕೆ ಪ್ರಮಾಣ ಏರುತ್ತಿರುವುದು ಶುಭ ಸೂಚನೆಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net