ಮೊದಲ ರಾತ್ರಿಯ ಬೆಡ್​ರೂಮ್​ ಫೋಟೋ ಶೇರ್​ ಮಾಡಿಕೊಂಡ ನಟಿ ಸ್ವರಾ ಭಾಸ್ಕರ್​! ಕಾಲೆಳೆದ ನೆಟ್ಟಿಗರು

Photo of Actress Swara Bhaskar
Published on

ನವದೆಹಲಿ: ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಬಗ್ಗೆ ಧೈರ್ಯವಾಗಿ ತಮ್ಮ ಅಭಿಪ್ರಾಯಗಳನ್ನು ತಿಳಿಸುವ ಕೆಲವೇ ಕೆಲವು ಸೆಲೆಬ್ರಿಟಿಗಳಲ್ಲಿ ಸ್ವರಾ ಭಾಸ್ಕರ್​ ಕೂಡ ಒಬ್ಬರು. ಹೀಗಾಗಿಯೇ ಅವರನ್ನು ವಿರೋಧಿಸುವ ಒಂದು ವರ್ಗ ಇದೆ. ಇತ್ತೀಚೆಗಷ್ಟೇ ತಮ್ಮ ಮದುವೆಯ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಸ್ವರಾ ಭಾಸ್ಕರ್​ ತಮ್ಮ ಅಭಿಮಾನಿಗಳಗೆ ಸರ್ಪ್ರೈಸ್ ನೀಡಿದ್ದರು.

ಸಮಾಜವಾದಿ ಪಕ್ಷದ ರಾಜ್ಯ ಯುವ ಅಧ್ಯಕ್ಷ ಫಹಾದ್ ಅಹ್ಮದ್ ಅವರೊಂದಿಗೆ ಸ್ವರಾ ಮದುವೆ ಆಗಿದ್ದಾರೆ. ಈ ವರ್ಷ ಜ.6 ರಂದು ಅವರು ಮದುವೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ದಾಖಲೆಗಳನ್ನು ಸಲ್ಲಿಸುವಾಗ ತೆಗೆದುಕೊಂಡ ಭಾವನಾತ್ಮಕ ಫೋಟೋಗಳನ್ನು ಹಂಚಿಕೊಂಡಿದ್ದರು. ಸ್ವರಾ ಮತ್ತು ಫಹಾದ್​ ಸಾಮಾಜಿಕ ಹೋರಾಟಗಾರರಾಗಿದ್ದು, ಹೋರಾಟಗಳಲ್ಲಿ ತೊಡಗಿಸಿಕೊಳ್ಳುತ್ತಾ ಇಬ್ಬರಲ್ಲಿ ಪ್ರೇಮಾಂಕುರವಾಗಿ, ಇದೀಗ ಮದುವೆ ಮಾಡಿಕೊಂಡಿದ್ದಾರೆ.

ನಾವಿಬ್ಬರೂ ಪ್ರೀತಿಸುತ್ತಿದ್ದೇವೆ ಮತ್ತು ಈಗಾಗಲೇ ಮದುವೆಯಾಗಿದ್ದೇವೆ ಎಂದು ಸ್ವರಾ ಭಾಸ್ಕರ್ ಇತ್ತೀಚೆಗೆ ತಮ್ಮ ಟ್ವಿಟ್ಟರ್ ಮೂಲಕ ಘೋಷಿಸಿದರು. ಜನವರಿ 6 ರಂದು ವಿಶೇಷ ವಿವಾಹ ಕಾಯ್ದೆಯಡಿ ಸ್ವರಾ ಭಾಸ್ಕರ್ ಮತ್ತು ಫಹಾದ್ ಅಹ್ಮದ್ ನ್ಯಾಯಾಲಯದಲ್ಲಿ ವಿವಾಹವಾಗಿದ್ದಾರೆ. ಇತ್ತೀಚೆಗಷ್ಟೇ ಇಬ್ಬರೂ ಮೊದಲ ರಾತ್ರಿಯನ್ನು ಆಚರಿಸಿಕೊಂಡಿದ್ದಾರೆ. ಸ್ವರಾ ಅವರ ತಾಯಿ ಮಲಗುವ ಕೋಣೆಯನ್ನು ಗುಲಾಬಿಗಳಿಂದ ಸುಂದರವಾಗಿ ಅಲಂಕರಿಸಿದರು. ಇದಕ್ಕೆ ಸಂಬಂಧಿಸಿದ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ನೋಡಿ, ನಮ್ಮ ಮೊದಲ ರಾತ್ರಿಯ ಕೋಣೆಯನ್ನು ನಮ್ಮ ತಾಯಿ ಎಷ್ಟು ಸುಂದರವಾಗಿ ಅಲಂಕರಿಸಿದ್ದಾರೆ ಎಂದು ಸ್ವರಾ ಬರೆದುಕೊಂಡಿದ್ದಾರೆ.

Swara Bhaskar

ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಸ್ವರಾ ಅವರ ಕಾಲೆಳೆಯುತ್ತಿದ್ದಾರೆ. ಈ ಹಿಂದೆ ಒಮ್ಮೆ ಫಹಾದ್​ ಅವರನ್ನು ಸ್ವರಾ ಅಣ್ಣ ಎಂದು ಟ್ವೀಟ್​ನಲ್ಲಿ ಸಂಭೋದಿಸಿದ್ದರು. ಅದನ್ನು ಮರು ನೆನಪಿಸಿ, ಫಹಾದ್​ ಅವರು ಸ್ವರಾ ಅವರ ಹಿರಿಯ ಅಣ್ಣ. ಆದರೆ, ಈಗ ಇಬ್ಬರು ಮದುವೆ ಆಗಿದ್ದಾರೆ ಎಂದು ವ್ಯಂಗ್ಯವಾಡುತ್ತಿದ್ದಾರೆ. ಫಸ್ಟ್​ನೈಟ್​ ಬೆಡ್​ ರೂಮ್​ ಫೋಟೋವನ್ನು ಸಿಕ್ಕಾಪಟ್ಟೆ ಟ್ರೋಲ್​ ಮಾಡುತ್ತಿದ್ದಾರೆ. (ಏಜೆನ್ಸೀಸ್​)

Swara Bhaskar
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net