ಸ್ವಾಮೀಜಿ ವಿಚಾರಣೆ ವಿಷಾದನೀಯ ಸಂಗತಿ

kisan
Published on

ಬೆಂಗಳೂರು: ವಿಶ್ವ ಒಕ್ಕಲಿಗ ಸಂಸ್ಥಾನದ ಚಂದ್ರಶೇಖರನಾಥ ಸ್ವಾಮೀಜಿಯವರ ಮೇಲೆ ಉಪ್ಪಾರಪೇಟೆ ಪೊಲೀಸರು ಖಾಸಗಿ ವ್ಯಕ್ತಿ ನೀಡಿದ ದೂರಿನ ಮೇಲೆ ಎಫ್‌ಐಆರ್ ದಾಖಲಿಸಿಕೊಂಡು ವಿಚಾರಣೆಗೆ ಸಿದ್ಧತೆ ನಡೆಸುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿ ಎಂದು ಭಾರತೀಯ ಕಿಸಾನ್ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಸ್ವಾಮೀಜಿಯವರು ರೈತರ ಹಿತಾಸಕ್ತಿಗೆ ತೊಂದರೆ ಆಗಿದ್ದರಿಂದ ಮಾತಿನ ಬರದಲ್ಲಿ ಆ ಹೇಳಿಕೆಯನ್ನು ಕೊಟ್ಟಿರುವುದು ಮತ್ತು ಅದಕ್ಕೆ ತಕ್ಷಣ ಸ್ಪಷ್ಟಿಕರಣ ಕೊಟ್ಟಿರುವುದು ಸಂವಿಧಾನ ವಿರೋಧಿ ಆಗುವುದಿಲ್ಲ. ರಾಜಕಾರಣಿಗಳು, ಸಮಾಜದ ಮುಖಂಡರುಗಳು, ಇತರೆ ವ್ಯಕ್ತಿಗಳು ಇದಕ್ಕಿಂತಲೂ ಸಂವಿಧಾನ ವಿರೋಧಿ ಮಾತುಗಳನ್ನು ಆಡಿರುತ್ತಾರೆ. ಇದಕ್ಕೆ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ. ಸ್ವಾಮಿಜಿ ಅವರು ಈಗಾಗಲೇ ಅದರ ಬಗ್ಗೆ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. ಇದಾದ ಮೇಲು ಅವರ ಮೇಲೆ ಕ್ರಮ ಕೈಗೊಂಡರೆ ಮುಂದಿನ ಪರಿಣಾಮ ಎದುರಿಸ ಬೇಕಾಗುತ್ತದೆ ಎಂದು ಸಂಘದ ಪ್ರಾಂತ ಅಧ್ಯಕ್ಷ ಹಾಡ್ಯ ರಮೇಶ್ ರಾಜು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net