ಜ್ಞಾನಸಂಬಂಧರ್ ಸ್ವಾಮೀಜಿಗೆ ಸ್ವಾಗತ -  ಆಶೀರ್ವಾದ ಪಡೆದ ಮುಖಂಡರು

17mdk10
Published on

ಕುಶಾಲನಗರ : ತಮಿಳುನಾಡಿನ 27 ಭವ್ಯ ಶಿವ ದೇವಾಲಯಗಳ ಧರ್ಮಪುರಂ ಅಧೀನ ಮಠಾಧಿಪತಿ ಸಂತ ಶ್ರೀ ಜ್ಞಾನಸಂಬಂಧರ್ ಸ್ವಾಮೀಜಿ ಮಂಗಳವಾರ ಕೊಡಗಿಗೆ ಆಗಮಿಸಿದರು. ಈ ಸಂದರ್ಭ ಸ್ವಾಮೀಜಿ ಅವರನ್ನು ಜಿಲ್ಲೆಯ ಪ್ರವೇಶದ್ವಾರ ಕುಶಾಲನಗರದ ಕಾವೇರಿ ಪ್ರತಿಮೆ ಬಳಿ ಪ್ರಮುಖರು ಸ್ವಾಗತಿಸಿ ಆಶೀರ್ವಾದ ಪಡೆದುಕೊಂಡರು. ಈ ವೇಳೆ ಮುಖಂಡರಾದ ರಾಮನಾಥನ್, ಚಂದ್ರಶೇಖರ್ ಹೇರೂರು, ಮಧುಸೂದನ್, ಮಹೇಶ್ ಅಮಿನ್, ಮಧು, ರಾಮಸ್ವಾಮಿ, ವಿಘ್ನೇಶ್, ಬಾಲಕೃಷ್ಣ ಮತ್ತಿತರರು ಇದ್ದರು. ಶ್ರೀ ಜ್ಞಾನಸಂಬಂಧರ್ ಸ್ವಾಮೀಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತದ ಪ್ರಾಚೀನ ಪರಂಪರೆಯ ಧರ್ಮದಂಡ ಸೆಂಗೋಲ್ ಅನ್ನು ದೆಹಲಿಯ ನೂತನ ಸಂಸತ್ ಭವನ ಉದ್ಘಾಟನೆ ಸಂದರ್ಭ ಹಸ್ತಾಂತರಿಸುವ ಮೂಲಕ ಸುದ್ದಿ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net