ಸಾರ್ವಜನಿಕ ಉದ್ಯಾನದಲ್ಲಿ ಸ್ವಚ್ಛತಾ ಅಭಿಯಾನ: ರಾಜ್ಯ ಒಕ್ಕಲಿಗರ ಸಂದ ನಿರ್ದೇಶಕ ಅಶೋಕ್ ಜಯರಾಂ ಮಾಹಿತಿ

13_11_Mdy_08(Swacha Mandya)
Published on

ಮಂಡ್ಯ: ನಗರದಲ್ಲಿರುವ ಹಲವು ಸಾರ್ವಜನಿಕ ಉದ್ಯಾನಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಲು ಮುಂದಾಗಿದ್ದೇವೆ ಎಂದು ರಾಜ್ಯ ಒಕ್ಕಲಿಗರ ಸಂದ ನಿರ್ದೇಶಕ ಅಶೋಕ್ ಜಯರಾಂ ಹೇಳಿದರು.

ನಗರದ ಗುತ್ತಲು ಬಡಾವಣೆಯಲ್ಲಿರುವ ವೀರ ಸೈನಿಕರ ಉದ್ಯಾನದಲ್ಲಿ ಭಾನುವಾರ ಎಸ್.ಡಿ.ಜಯರಾಂ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಬಿಜೆಪಿ ಜಿಲ್ಲಾ ಟಕದಿಂದ ಆಯೋಜಿಸಿದ್ದ ಸ್ವಚ್ಛ ಮಂಡ್ಯ ಅಭಿಯಾನಕ್ಕೆ ಚಾಲನೆ ನೀಡಿ ವಾತನಾಡಿದರು.

ವಾರದ ಒಂದು ದಿನ ಎಸ್.ಡಿ.ಜಯರಾಂ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಬಿಜೆಪಿ ಜಿಲ್ಲಾ ಟಕ, ಸ್ಥಳೀಯರ ಸಹಕಾರದೊಂದಿಗೆ ಸ್ವಚ್ಛತಾ ಅಭಿಯಾನ ನಡೆಸುತ್ತಿದ್ದೇವೆ. ಸ್ವಚ್ಛತೆ ಇದ್ದೆಡೆ ಆರೋಗ್ಯ ಹೆಚ್ಚಾಗುತ್ತದೆ, ಉದ್ಯಾನದಲ್ಲಿ ಕಾಲಕಳೆಯಲು ಮಕ್ಕಳಿಗೆ ಮತ್ತು ನಾಗರಿಕರಿಗೆ ಅನುಕೂಲವಾಗುತ್ತದೆ ಎಂದು ನುಡಿದರು.

ಸೆ.17ರಂದು ನಡೆದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಸೇವಾ ಸಪ್ತಾಹ ಅಂಗವಾಗಿ ಮಂಡ್ಯ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಸೇವಾ ಚಟುವಟಿಕೆಗೆ ಚಾಲನೆ ನೀಡಲಾಗಿತ್ತು. ಅದರ ಮುಂದುವರಿಗೆ ಭಾಗವಾಗಿ ಸಾರ್ವಜಕರೊಡನೆ ಸ್ವಚ್ಚತಾ ಅಭಿಯಾನಕ್ಕೆ ಮತ್ತೆ ಆದ್ಯತೆ ನೀಡಿದ್ದೇವೆ. ಸಾರ್ವಜನಿಕ ಸ್ಥಳಗಳಿ ಸ್ವಚ್ಛತೆ ವಾಡಲಾಗುವುದು ಎಂದರು.

ಬಿಜೆಪಿ ನಗರ ಮೋರ್ಚಾ ಅಧ್ಯಕ್ಷ ವಿವೇಕ್, ನಗರಸಭಾ ಸದಸ್ಯೆ ವಿದ್ಯಾಮಂಜುನಾಥ್, ಬಿಜೆಪಿ ಮುಖಂಡರಾದ ಶಂಕರ್, ಶಶಿ, ಶಿವಕೆಂಪಯ್ಯ, ಎಂಆರ್‌ಎಂ ರು, ವೆಂಕಟೇಶ್, ಅನಿಲ್‌ಕುವಾರ್, ರವಿ, ಮಧು ಇತರರಿದ್ದರು.

ಎಸ್.ಡಿ.ಜಯರಾಂ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ನಗರಸಭೆ ಪೌರಕಾರ್ಮಿಕರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net