

ಸುತ್ತೂರು : ಸುತ್ತೂರು ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಕ್ಲಸ್ಟರ್ ಮಟ್ಟದ ಶೈಕ್ಷಣಿಕ ಮತ್ತು ವಿಜ್ಞಾನ ವಸ್ತುಪ್ರದರ್ಶನ ಏರ್ಪಡಿಸಲಾಗಿತ್ತು. ಸುತ್ತೂರು ಕ್ಲಸ್ಟರ್ ವ್ಯಾಪ್ತಿಯ ಜೆಎಸ್‌ಎಸ್ ಶಾಲೆಗಳಾದ ಸುತ್ತೂರು, ಹಳ್ಳಿಕೆರೆಹುಂಡಿ, ಹುಲ್ಲಹಳ್ಳಿ, ಮಹದೇವನಗರ, ನಂಜನಗೂಡು ಬಾಲಕಿಯರ ಪ್ರೌಢಶಾಲೆಗಳ ಶಾಲಾ ಹಂತದಲ್ಲಿ ಆಹಾರ ಮತ್ತು ಪೌಷ್ಟಿಕತೆ, ಸಮಾಜ ವಿಜ್ಞಾನ, ಜೀವಶಾಸ್ತ್ರ, ಕೃಷಿ, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಕ್ರೀಡೆ ಮತ್ತು ಭಾಷೆಗಳಿಂದ ಆಯ್ದ ಒಟ್ಟು 140 ಮಾದರಿಗಳು ಪ್ರದರ್ಶನಗೊಂಡವು. ಇದರಲ್ಲಿ ಜನರಿಗೆ ಉತ್ತಮ ವಿಷಯ ಜ್ಞಾನವನ್ನು ತಿಳಿಸಿಕೊಡುವ ಆಕರ್ಷಕವಾದ 41 ಮಾದರಿಗಳು 2024 ರ ಫೆಬ್ರವರಿಯಲ್ಲಿ ನಡೆಯುವ ಸುತ್ತೂರು ಜಾತ್ರೆಯ ಶೈಕ್ಷಣಿಕ ಮತ್ತು ವಿಜ್ಞಾನ ವಸ್ತುಪ್ರದರ್ಶನಕ್ಕೆ ಆಯ್ಕೆಯಾದವು. ತೀರ್ಪುಗಾರರಾಗಿ ಡಾ. ಮಹದೇವಪ್ರಸಾದ್, ಡಾ. ಮಲ್ಲಿಕಾರ್ಜುನ, ಪ್ರೊ. ಸಿದ್ದರಾಮಯ್ಯ, ಪ್ರೊ.ಎನ್. ಮಹದೇವಸ್ವಾಮಿ, ಪ್ರೊ. ವಿಜಯಾ, ಶಿವಾನಂದ, ನಾಗರಾಜಚಾರ್, ರಾಜಪ್ಪ ಆಗಮಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಶಿವಮಲ್ಲು, ಮ.ಗು. ಬಸವಣ್ಣ, ಷಡಕ್ಷರಿ ಇತರರು ಇದ್ದರು.