

ಅಭ್ಯಾಸ ಕ್ರಮ:
ಉಸಿರಾಟ: ಬಾಯಿಯ ಮೂಲಕ ಉಸಿರಾಟ ಮಾಡಿ.
ಅವಧಿ: ಕೆಥೆಟರ್ ಬಳಸಿದಾಗ ಅಭ್ಯಾಸವನ್ನು ಪೂರ್ಣಗೊಳಿಸಲು 5 ನಿಮಿಷಕ್ಕೂ ಕಡಿಮೆ ಕಾಲ ಸಾಕು. ಹತ್ತಿಯ ದಾರವನ್ನು ಬಳಸಿದಾಗ ಸುಮಾರು 10 ನಿಮಿಷ ಬೇಕು. ಹಲವಾರು ದಿನಗಳಿಗೊಮ್ಮೆ ಅಥವಾ ವಾರಕ್ಕೊಮ್ಮೆ ಮಾಡಿದರೆ ಸಾಕು.
ಗಮನ: ದೇಹವನ್ನು ಸಡಿಲಿಸುವುದರ ಕಡೆಗೆ ಮತ್ತು ಸೂತ್ರ ಮೆಲುವಾಗಿ ಹಾಗೂ ನಿಧಾನವಾಗಿ ಚಲಿಸುವುದರ ಕಡೆಗೆ. ಎರಡು ಹುಬ್ಬುಗಳ ನಡುವೆ ಅಜ್ಞಾಚಕ್ರದ ಮೇಲೆ.
ಅನುಕ್ರಮಣಿಕೆ: ಸೂತ್ರನೇತಿಯನ್ನು ಜಲನೇತಿಗೆ ಮೊದಲು ಮಾಡಬೇಕು. ಹೀಗೆ ಮಾಡುವಾಗ ಮೂಗಿನಲ್ಲಿ ಸಂಚಯನ ಗೊಂಡಿದ್ದ ಕಶ್ಮಲ-ಶ್ಲೇಷ್ಮ ಗಳೆಲ್ಲವೂ ಜಲನೇತಿ ಮಾಡಿದಾಗ ಮೂಗಿನಿಂದಾಚೆ ಬರುತ್ತದೆ.
ಮುನ್ನೆಚ್ಚರಿಕೆ: ಯಾವುದೇ ಸಂದರ್ಭದಲ್ಲಿ ಇದನ್ನು ಒರಟಾಗಿ ಮಾಡಬಾರದು. ಸೂತ್ರ ಮೂಗಿನೊಳಗೆ ಹೋಗದಿದ್ದರೆ ಅನುಭವೀ ಯೋಗ ಶಿಕ್ಷಕರೊಂದಿಗೆ ಈ ಬಗ್ಗೆ ಸಮಾಲೋಚಿಸಿ.
ವಿಧಿ ನಿಷೇಧಗಳು: ದೀರ್ಘಕಾಲದಿಂದ ಮೂಗಿನಲ್ಲಿ ರಕ್ತಸ್ರಾವ ವಿರುವಂಥವರು ಸೂತ್ರನೇತಿಯನ್ನು ಮಾಡಬಾರದು. ಮೂಗಿನ ಹುಣ್ಣು, ಪಾಲಿಪ್ಸ್ ಇರುವವರು ಯೋಗ ಪರಿಣಿತರ ಅಥವಾ ಆಯುರ್ವೆದ ವೈದ್ಯರ ಸಲಹೆ ಪಡೆಯಬೇಕು.
ಪ್ರಯೋಜನಗಳು: ಇದು ಮೂಗಿನ ಹೊಳ್ಳೆಗಳ ಮಧ್ಯಪಟಲ ಅಥವಾ ನಡುತಡೆಯ ಕೊಂಕನ್ನು ಸರಿಪಡಿಸಬಹುದು. ಡೊಂಕುಮೂಳೆ ಅಥವಾ ದುರ್ವಂಸದ ಬೆಳವಣಿಗೆಯ ಕಾರಣದಿಂದ ಸರಾಗವಾದ ಹರಿವು ಸಾಧ್ಯವಿಲ್ಲದಿದ್ದರೆ, ಸೂತ್ರನೇತಿ ಮಾಡುವಾಗ ಉಂಟಾಗುವ ತಿಕ್ಕಾಟದಿಂದ ಕೆಲವು ತಿಂಗಳುಗಳಲ್ಲಿ ಈ ಅಡಚಣೆಗಳು ಕಾಣೆಯಾಗುತ್ತವೆ.
ಅಭ್ಯಾಸ ಸೂಚನೆ: ಕೆಥೆಟರ್ನ ಬಳಕೆ ಸುಲಭ ಮತ್ತು ಬೇಗನೆ ಆಗುವಂಥದ್ದಾದರೂ ಹತ್ತಿಯ ದಾರದಷ್ಟು ಚೆನ್ನಾಗಿ ಇದು ಮೂಗಿನ ಮಾರ್ಗಗಳನ್ನು ಸ್ವಚ್ಛಗೊಳಿಸುವುದಿಲ್ಲ.