More

    VIDEO| ನೆಟ್ಟಿಗರ ತಲೆಕೆಡಿಸಿದ ಟ್ರಾನ್ಸ್​ಪರೆಂಟ್​ ಮೀನು

    ನವದೆಹಲಿ: ವೈವಿಧ್ಯಮಯ ಜಗತ್ತಿನಲ್ಲಿ ಜನತೆ ಪ್ರತಿನಿತ್ಯ ಒಂದಿಲ್ಲೊಂದು ತರಹದ ವಿಸ್ಮಯ ಹಾಗೂ ಹೊಸ ತರಹದ ಜೀವಿಗಳನ್ನು ಕಣ್ತುಂಬಿಕೊಳ್ಳುತ್ತಿರುತ್ತಾರೆ. ಇನ್ನು ಭೂಮಿಯ ಮೇಲೆ ಅನೇಕ ತರಹದ ಜೀವಿಗಳು ಇರುತ್ತವೆ ಎಂಬ ವಿಚಾರ ಹಲವರಿಗೆ ತಿಳಿದಿರುವುದಿಲ್ಲ.

    ಇದೀಗ ಹೊಸ ವಿಚಾರ ಒಂದರಲ್ಲಿ ಟ್ರಾನ್ಸ್​​ಪರೆಂಟ್​ ಮೀನೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದ್ದು, ಪ್ರಕೃತಿಯ ಸೃಷ್ಟಿಯ ಬಗ್ಗೆ ಜನರಲ್ಲಿ ಕೌತುಕ ಮತ್ತು ವಿಸ್ಮಯವನ್ನು ಮೂಡಿಸಿದೆ.

    ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಟ್ರಾನ್ಸ್​​ಪರೆಂಟ್​ ಮೀನನ್ನು ಕೈಯಲ್ಲಿ ಹಿಡಿದಿರುವುದನ್ನು ಕಂಡು ವೀಕ್ಷಕರು ನಿಬ್ಬೆರಗಾಗಿದ್ದಾರೆ. ಮೀನು ಎಷ್ಟು ಟ್ರಾನ್ಸ್​​ಪರೆಂಟ್​ಯಾಗಿದೆ ಎಂದರೆ ಅದನ್ನು ಹಿಡಿದಿರುವ ವ್ಯಕ್ತಿಯ ಕೈಗಳು ಸಹ ಕಾಣಬಹುದಾಗಿದೆ.

    ಇದನ್ನೂ ಓದಿ: 80ಕ್ಕೆ ಪಾದಾರ್ಪಣೆ ಮಾಡಿದ ಎಚ್​.ಎಸ್. ವೆಂಕಟೇಶ​ಮೂರ್ತಿ; ಗಾಯಕ-ಗಾಯಕಿಯರಿಂದ ಗೀತನಮನ

    ಮೀನಿನ ಕಣ್ಣೊಂದನ್ನು ಹೊರತುಪಡಿಸಿದರೆ ಅದರ ದೇಹದ ಯಾವುದೇ ಭಾಗಗಳು ಸಹ ಕಾಣಿಸದಿರದಿರುವುದು ಹೆಚ್ಚು ಆಕರ್ಷಣೀಯವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್​ ಆಗಿದ್ದು, ಇಲ್ಲಿಯವರೆಗು 14ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಗೆ ಒಳಪಟ್ಟಿದೆ. ಮೀನಿನ ಬಗ್ಗೆ ಹಲವರು ಕುತೂಹಲಕಾರಿ ಪ್ರಶ್ನೆಗಳನ್ನು ಕೇಳುತ್ತಿದ್ಧಾರೆ.

    ಅಂಗಗಳು ಗೋಚರಿಸದೆ ಮೀನುಗಳು ಹೇಗೆ ಬದುಕಬಲ್ಲವು ಎಂದು ಕೆಲವರು ಕೇಳಿದ್ದರೆ. ಇನ್ನು ಕೆಲವರು ಇದೇ ರೀತಿಯ ದೊಡ್ಡ ಜೀವಿಗಳು ಸಹ ಬದುಕಿರಬಹುದು ಎಂದು ಕೆಲವರು ಊಹಿಸಿದ್ದಾರೆ. ಸದ್ಯ ಈ ಮೀನಿನ ತಳಿ ಯಾವುದೆಂದು ತಿಳಿದು ಬಂದಿಲ್ಲವಾದರೂ ನೆಟ್ಟಿಗರು ಈ ಬಗ್ಗೆ ಕುತೂಹಲಕಾರಿಯಾಗಿ ಕಮೆಂಟ್​ ಮಾಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts