ಉತ್ತಮ ಜೀವನ ಶೈಲಿಯಿಂದ ಆರೋಗ್ಯ ಸುಸ್ಥಿರ

blood donation (2)
ಶಿರಾಳಕೊಪ್ಪ ಹಿಂದು ಮಹಾ ಗಣಪತಿ ಸಮಿತಿ ಏಪರ್ಡಿಸಿದ್ದ ರಕ್ತದಾನ ಶಿಬಿರದಲ್ಲಿ ಯುವಕರು ರಕ್ತದಾನ ಮಾಡಿದರು. ಡಾ. ಜಾಧವ್, ಮಲ್ಲಿಕಾರ್ಜುನ, ಶಿವಾನಂದ ಸ್ವಾಮಿ, ಚೆನ್ನವೀರ ಶೆಟ್ಟಿ, ಶ್ರೀಕಾಂತ, ಮಂಚಿ ಶಿವಣ್ಣ ಇತರರಿದ್ದರು.
Published on

ಶಿರಾಳಕೊಪ್ಪ: ರಕ್ತದಾನ ಮಾಡಿದವರ ಆರೋಗ್ಯ ಉತ್ತಮವಾಗುವ ಜತೆಗೆ ಬೇರೆಯವರ ಜೀವವನ್ನು ಉಳಿಸಿದ ಪುಣ್ಯದ ಕಾರ್ಯ ಲಭಿಸಿದಂತಾಗುತ್ತದೆ ಎಂದು ಬಿಳಕಿ ಸರ್ಕಾರಿ ಆಸ್ಪತ್ರೆ ವೈದ್ಯ ಡಾ. ಜಾಧವ್ ತಿಳಿಸಿದರು.

ಹಿಂದು ಮಹಾ ಗಣಪತಿ ಸೇವಾ ಸಮಿತಿ ರಜತ ಮಹೋತ್ಸವದ ಅಂಗವಾಗಿ ಶಿವಮೊಗ್ಗದ ಆಶಾಜ್ಯೋತಿ ಸ್ವಯಂಪ್ರೇರಿತ ರಕ್ತಕೇಂದ್ರದ ಆಶ್ರಯದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರಕ್ತದಾನ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ದೂರವಾಗುತ್ತವೆ. ಇಂದು ನಮ್ಮ ಜೀವನಶೈಲಿ ಬದಲಾಗಿದೆ. ರಾತ್ರಿ ತಡವಾಗಿ ಮಲಗಿ, ಬೆಳಗ್ಗೆ ತಡವಾಗಿ ಏಳುವುರಿಂದ ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ ಎಂದರು.
ಸೂರ್ಯೋದಯದ ಮೊದಲು ಏಳುವ ಅಭ್ಯಾಸ ಮಾಡಿಕೊಳ್ಳಿ. ವ್ಯಾಯಾಮ ಮಾಡಿ, ಮನೆಯಲ್ಲಿ ಮಾಡಿದ ಆರೋಗ್ಯಕರ ಆಹಾರವನ್ನು ಸರಿಯಾದ ಸಮಯಕ್ಕೆ ಸೇವಿಸಿ. ರಾತ್ರಿ ಕಡಿಮೆ ಆಹಾರ ತೆಗೆದುಕೊಂಡು ಆರೋಗ್ಯವಂತರಾಗೋಣ. 30 ವಷರ್ದ ನಂತರ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯದ ಕಡೆ ಗಮನಕೊಡಿ ಎಂದು ತಿಳಿಸಿದರು.
ಪುರಸಭೆ ಮಾಜಿ ಸದಸ್ಯ ಶಿವಾನಂದ ಸ್ವಾಮಿ ಮಾತನಾಡಿ, ಇಂದು ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ ರಕ್ತವನ್ನು ಉತ್ಪಾದಿಸಲು ಸಾಧ್ಯವಾಗಿಲ್ಲ. ದೇವರ ದಯೆಯಿಂದ ನಾವು ಎಷ್ಟೇ ರಕ್ತಕೊಟ್ಟರೂ ಪುನಃ ದೇಹದಲ್ಲಿ ರಕ್ತ ಉತ್ಪತ್ತಿ ಆಗುತ್ತದೆ. ಆದರೆ ಸಾಕಷ್ಟು ಜನರಲ್ಲಿ ಅರಿವಿನ ಕೊರತೆಯಿದೆ. ರಕ್ತಕೊಟ್ಟರೆ ಒಂದೇ ವಾರದಲ್ಲಿ ಪುನಃ ರಕ್ತ ಉತ್ಪತ್ತಿ ಆಗುತ್ತದೆ.
ಪಪಂ ಮಾಜಿ ಅಧ್ಯಕ್ಷ ಚೆನ್ನವೀರ ಶೆಟ್ಟಿ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭ ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕ್ ಅವರು ಗಣೇಶ ಹಬ್ಬವನ್ನು ಸಾವರ್ಜನಿಕವಾಗಿ ಆಚರಣೆ ಹೇಗೆ ಮಾಡಬಹುದು ಎಂಬುದನ್ನ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಶ್ರೀಕಾಂತ, ಮಂಚಿ ಶಿವಣ್ಣ, ಗುರುಸ್ವಾಮಿ, ಮಲ್ಲಿಕಾರ್ಜುನ, ವೀರಶೈವ ಸಮಾಜದ ಅಧ್ಯಕ್ಷ ಪ್ರಭುಸ್ವಾಮಿ, ಬಿಳವಾಣಿ ಗ್ರಾಪಂ ಅಧ್ಯಕ್ಷ ಬಸಣ್ಣ, ಪಪಂ ಮಾಜಿ ಅಧ್ಯಕ್ಷ ಮನೋಹರ್, ಮಾಜಿ ಸದಸ್ಯ ಶಿವಪುತ್ರಪ್ಪ, ಡಾ. ವರುಣ್, ಗಣಪತಿ ಸೇವಾ ಸಮಿತಿ ಕಾರ್ಯದರ್ಶಿ ಮಾಲತೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net