ಕಳ್ಳ-ಮಳ್ಳ?: ಶೂ ಬಿಚ್ಚಿಟ್ಟು ಚಪ್ಪಲಿ-ಟವೆಲ್ ಕದ್ದ; ಅನುಮಾನ ಮೂಡಿಸಿದೆ ಈತನ ವರ್ತನೆ!

Thief
Published on

ತುಮಕೂರು: ಇಲ್ಲೊಂದು ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ವ್ಯಕ್ತಿಯೊಬ್ಬನ ಅನುಮಾನಾಸ್ಪದ ವರ್ತನೆ ಸೆರೆಯಾಗಿದೆ. ಇಂದು (ಸೆ.5)ಬೆಳಗ್ಗಿನ ಜಾವ ಈ ಮನೆ ಬಳಿಗೆ ಬಂದು ಶೂ ಬಿಚ್ಚಿಟ್ಟು, ಚಪ್ಪಲಿ ಟವೆಲ್ ಕದ್ದಿರುವ ಈತ ಕಳ್ಳನಾ ಮಳ್ಳನಾ ಎಂದು ಯೋಚಿಸುವಂತೆ ಮಾಡಿದೆ.

ತುಮಕೂರು ಜಿಲ್ಲೆಯ ಕುಣಿಗಲ್​ ಪಟ್ಟಣದ ಮಲ್ಲಾಘಟ್ಟ ಶ್ರೀನಿವಾಸ್ ಎಂಬುವರ ಮನೆ ಮುಂದೆ ಇಂದು ಬೆಳಗಿನ ಜಾವ 3.20ರ ಸುಮಾರಿಗೆ ಈ ಪ್ರಕರಣ ನಡೆದಿದೆ. ವಾರ್ಡ್ ನಂಬರ್ 2ರ ನೀಲತ್ತಹಳ್ಳಿ ಗೇಟ್ ಬಳಿ ಇರುವ ಈ ಮನೆಯ ಆವರಣದಲ್ಲಿನ ಈ ದೃಶ್ಯಾವಳಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಬೆಳಗಿನ ಜಾವ ಮನೆ ಬಳಿಗೆ ಬಂದ ಈತ ತನ್ನ ಶೂ ಬಿಚ್ಚಿ ಮನೆಯವರ ಚಪ್ಪಲಿ ಹಾಕಿಕೊಂಡಿದ್ದಾನೆ. ನಂತರ ಮನೆಯ ಹೊರಗಿದ್ದ ಪಾತ್ರೆಗಳನ್ನು ಅಲ್ಲಾಡಿಸಿ ಸದ್ದು ಕೂಡ ಮಾಡಿದ್ದಾನೆ. ಈ ಮಧ್ಯೆ ಪಾತ್ರೆಗಳ ಎತ್ತಿ ನೋಡಿ ಬಳಿಕ ಅವುಗಳನ್ನು ಅಲ್ಲೇ ಬಿಟ್ಟು ಮನೆ ಹೊರಗೆ ಇದ್ದ ಟವೆಲ್ ಹಾಕಿಕೊಂಡು ಹೋಗಿದ್ದಾನೆ. ಈತ ಕಳ್ಳನಾ ಮಳ್ಳನಾ ಎಂದು ಗೊತ್ತಾಗದ ಮನೆಯವರು ಈತನ ವರ್ತನೆ ಬಗ್ಗೆ ಅನುಮಾನ ಉಂಟಾಗಿದ್ದಾಗಿ ಹೇಳಿದ್ದಾರೆ.

ನೋಡೋಕೆ ಯಾರೋ ತಲೆಕೆಟ್ಟವ ಅನ್ನಿಸೋದು ಸಹಜ. ಆದರೆ ಆತನ ಕಾಲಲ್ಲಿದ್ದ ಶೂ ಬಿಚ್ಚಿ ಈ ಮನೆಯವರ ಚಪ್ಪಲಿ ಧರಿಸ್ತಾನೆ. ಸೈಕಲ್ ಮೇಲಿಟ್ಟಿದ್ದ ಟವೆಲ್ ತೆಗೆದುಕೊಂಡು ಹೆಗಲ ಮೇಲೆ ಹಾಕಿಕೊಳ್ತಾನೆ. ತಲೆಕೆಟ್ಟವನಿಗೆ ಇಂತಹದ್ದೇ ಬೇಕು ಅಂತೇನಿರಲ್ಲ, ಸಿಕ್ಕಿದ್ದನ್ನ ಹಾಕಿಕೊಳ್ಳಬಹುದಿತ್ತು... ಮೇಲ್ನೋಟಕ್ಕೆ ಇದೆಲ್ಲಾ ನಾಟಕ ಅನ್ನಿಸುತ್ತೆ. ಬೇರೆ ಯಾವುದೋ ದುರುದ್ದೇಶದ ಯೋಜನೆಯಲ್ಲಿ ಬಂದಿರುವ ಶಂಕೆಯನ್ನು ಮನೆಯ ಮಾಲೀಕರು ಮತ್ತು ಸ್ಥಳೀಯರು ವ್ಯಕ್ತ ಪಡಿಸಿದ್ದಾರೆ .

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net