ಕಳ್ಳತನದ ಶಂಕೆಯ ಮೇಲೆ ವ್ಯಕ್ತಿ ಅಪಹರಿಸಿ ಮನಬಂದಂತೆ ಥಳಿಸಿದ ಆರೋಪಿಗಳು

shadow four men
ಸಾಂದರ್ಭಿಕ ಚಿತ್ರ
Published on

ಮುಂಬೈ: ಕಳ್ಳತನ ಮಾಡಿದ್ದಾರೆಂದು ಶಂಕಿಸಿ ಇಬ್ಬರನ್ನು ಅಪಹರಿಸಿ, ಮನಬಂದಂತೆ ಥಳಿಸಿದ ಪರಿಣಾಮ ಓರ್ವ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

ಆರೋಪಿಗಳನ್ನು ಅಂಗಡಿ ಮಾಲೀಕ ದಿನಕರ್ ಪ್ರಹ್ಲಾದ್ ಲಾವಂಡ್ (42), ಅಭಿಮನ್ಯು ಬಿಹಾರಿ ಯಾದವ್ (24) ಮತ್ತು ರಾಜ್‌ಕುಮಾರ್ ಶ್ರೀರಾಮಧಾನಿ ಯಾದವ್ (27) ಎಂದು ಗುರುತಿಸಲಾಗಿದ್ದು, ವಿನೋದ್ ರಾಥೋಡ್ (35) ಮೃತ ದುರ್ದೈವಿಯಾಗಿದ್ದಾನೆ.ಇನ್ನು ಘಟನೆಯಲ್ಲಿ ಈತನ ಸ್ನೇಹಿತ ಅನಿಲ್ ಜಾಧವ್ (26) ತೀವ್ರವಾಗಿ ಗಾಯಗೊಂಡಿದ್ದಾನೆ.

ಇದನ್ನೂ ಓದಿ: ಹಣ, ಚಿನ್ನಕ್ಕಾಗಿ ಗೆಳೆಯನನ್ನೇ ಹತ್ಯೆಗೈದ ಪತಿ: ಕೃತ್ಯಕ್ಕೆ ಸಾಥ್​​ ನೀಡಿದ ಪತ್ನಿ

ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಾಳು ಅನಿಲ್ ಜಾಧವ್ (26) ದೂರು ದಾಖಲಿಸಿದ್ದು, ನಾಲ್ವರು ಆರೋಪಿಗಳು ತನ್ನನ್ನು ಮತ್ತು ತನ್ನ ಸ್ನೇಹಿತನನ್ನು ಅಂಗಡಿಗೆ ಕರೆದೊಯ್ದು ಅಲ್ಲಿ ಒತ್ತೆಯಾಳಾಗಿ ಇರಿಸಿ, ಮನಬಂದಂತೆ ಥಳಿಸಿದ್ದಾರೆ. ಅಲ್ಲದೇ, ತನ್ನ ಸ್ನೇಹಿತನನ್ನು ಗೋಡೆಗೆ ತಳ್ಳಿದ್ದು, ಆತ ಪೆಟ್ಟಿನಿಂದಾದ ಬಿದ್ದು ಸಾವನ್ನಪ್ಪಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆ ಬಗ್ಗೆ ಹಿರಿಯ ಇನ್ಸ್‌ಪೆಕ್ಟರ್ ರಾಜೀವ್ ಶೆಜ್ವಾಲ್ ಮಾತನಾಡಿದ್ದು, ನಾಲ್ವರು ಆರೋಪಿಗಳ ಪೈಕಿ ಮೂವರನ್ನು ಬಂಧಿಸಲಾಗಿದೆ. ಅವರಲ್ಲಿ ಒಬ್ಬರು ವೆಲ್ಡಿಂಗ್ ಅಂಗಡಿ ಹೊಂದಿದ್ದಾರೆ. ಸಂತ್ರಸ್ತರಿಬ್ಬರೂ ತಮ್ಮ ಅಂಗಡಿಯ ಹೊರಗಿನ ಕಬ್ಬಿಣದ ರಾಡ್‌ಗಳನ್ನು ಕದ್ದಿದ್ದಾರೆ ಎಂದು ಶಂಕಿಸಿ ಅವರನ್ನು ಅಪಹರಿಸಿ ಥಳಿಸಿದ್ದಾರೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net