

ಬೆಂಗಳೂರು: ಭಾರತದಲ್ಲಿ ಒಟ್ಟು ಎರಡು ಕಡೆ ದಾಳಿ ನಡೆಸಿದ ಎನ್ಐಎ ಇಬ್ಬರು ಶಂಕಿತ ಉಗ್ರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬೆಂಗಳೂರಿನ ಥಣಿಸಂದ್ರ ಹಾಗೂ ಮುಂಬೈನ ಪಲ್ಗಾರ್ನಲ್ಲಿ ಎನ್ಐಎ ದಾಳಿ ನಿನ್ನೆ(ಫೆ.11) ನಡೆದಿತ್ತು. ಎನ್ಐಎ ಅಧಿಕಾರಿಗಳು ಬೆಂಗಳೂರಿನಲ್ಲಿ ಐಎಸ್ಡಿ ಜೊತೆ ಸೇರಿಕೊಂಡು ದಾಳಿ ನಡೆಸಿದ್ದರು.
ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸುತ್ತಿರುವ ಎನ್ಐಎ ಅಧಿಕಾರಿಗಳಿಗೆ, ಇಬ್ಬರು ಶಂಕಿತರು ವಿದೇಶಿ ಮೂಲದ ಉಗ್ರ ಸಂಘಟನೆಗೆ ಸೇರಿದ ಹ್ಯಾಂಡ್ಲರ್ಸ್ಗಳ ಜತೆಗೆ ಆನ್ಲೈನ್ ಸಂಪರ್ಕ ಸಾಧಿಸಿರುವ ಅಂಶ ಗೊತ್ತಾಗಿದೆ. ಶಂಕಿತರು ಸಾಮಾಜಿಕ ಜಾಲತಾಣ ಮೂಲಕ ಯುವಕರನ್ನ ಸೆಳೆದು, ಉಗ್ರ ಕೃತ್ಯ, ಹಿಂಸೆ, ಪ್ರಚೋದನೆಗೆ ಒಳಸಂಚು ರೂಪಿಸುತ್ತಿದ್ದರು ಎಂಬ ಆಘಾತಕಾರಿ ವಿಚಾರ ಪ್ರಾಥಮಿಕಿ ತನಿಖೆಯಿಂದ ಹೊರಬಿದ್ದಿದೆ.ದಾಳಿ ವೇಳೆ ಹಲವು ವಿಧದ ಡಿಜಿಟಲ್ ಡಿವೈಎಸ್ ಮತ್ತು ದಾಖಲೆಗಳನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಕಳೆದ ಸೆಪ್ಟೆಂಬರ್ನಲ್ಲಿ ತಿಲಕ್ ನಗರದಲ್ಲಿ ಇಬ್ಬರು ಶಂಕಿತ ಉಗ್ರರಾದ ಆಖ್ತರ್ ಹುಸೇನ್ ಮತ್ತು ಜುಬಾ ಎಂಬುವವರ ಮೇಲೆ ಎಫ್ಐಆರ್ ದಾಖಲಿಸಿ ತನಿಖೆ ಎನ್ಐಎ ಅಧಿಕಾರಿಗಳು ತನಖೆ ಮಾಡಿದ್ದರು. ಬಂಧಿತರಾದ ಶಂಕಿತರು ಸಾಮಾಜಿಕ ಜಾಲತಾಣದ ಮೂಲಕ ಯುವಕರನ್ನ ಸೆಳೆಯುವ ಯತ್ನ ಮಾಡಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿತ್ತು. ಹೀಗಾಗಿ ಎನ್ಐಎ ಅಧಿಕಾರಿಗಳು ಹೆಚ್ಚಿನ ತನಿಖೆಗೆ ಮುಂದಾಗಿದ್ದರು.
ಈ ಪ್ರಕರಣ ಸಂಬಂಧ ನಿಗಾ ವಹಿಸಿದ್ದ ಎನ್ಐಎ, ಸೆಪ್ಟೆಂಬರ್ನಲ್ಲಿ ಬಂಧಿತರಾಗಿರುವ ಶಂಕಿತರು ಹಾಗೂ ನಿನ್ನೆ ಬಂಧಿತರಾಗಿರು ಇಬ್ಬರು ಶಂಕಿತರು ಪರಿಚಯಸ್ಥರಾಗಿದ್ದರು ಎಂಬ ಅನುಮಾನದಲ್ಲಿ, ಬೆಂಗಳೂರು ಮತ್ತು ಮುಂಬೈನಲ್ಲಿ ದಾಳಿ ನಡೆಸಲಾಗಿದೆ. ಸದ್ಯ ಇಬ್ಬರನ್ನೂ ಎನ್ಐಎ ಅಧಿಕಾರಿಗಳು ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ.