ಭಾರತದ ಸರಹದ್ದಿನಲ್ಲಿ ಶತ್ರುರಾಷ್ಟ್ರದ ಕ್ವಾಡ್​ಕಾಪ್ಟರ್ ಹಾರಾಟ!; ಹೊಡೆದುರುಳಿಸಿತು ಬಿಎಸ್​ಎಫ್

Drone
Published on

ನವದೆಹಲಿ: ಭಾರತದ ಸರಹದ್ದಿನಲ್ಲಿ ಇಂದು ಶತ್ರುರಾಷ್ಟ್ರದ ಕ್ವಾಡ್​ಕಾಪ್ಟರ್ ಹಾರಾಟ ನಡೆಸಿದ್ದು, ಗಡಿಭದ್ರತಾ ಪಡೆ (ಬಿಎಸ್​ಎಫ್​) ಸಿಬ್ಬಂದಿ ಅದನ್ನು ಹೊಡೆದುರುಳಿಸಿದ್ದಾರೆ. ಚೀನಾ ನಿರ್ಮಿತ ಈ ಕ್ವಾಡ್​ಕಾಪ್ಟರ್​ ಪಾಕಿಸ್ತಾನ ಕಡೆಯಿಂದ ಭಾರತಕ್ಕೆ ಪ್ರವೇಶಿಸಿದೆ ಎನ್ನಲಾಗಿದೆ.

ಇಂದು ತಡರಾತ್ರಿ 1.15ರ ಸುಮಾರಿಗೆ ಅಮೃತಸರ ಸೆಕ್ಟರ್​​ನ ಧನೋಕಲನ್ ಗ್ರಾಮದ ಪ್ರದೇಶದಲ್ಲಿ ಪಾಕಿಸ್ತಾನ ಕಡೆಯಿಂದ ಅನುಮಾನಾಸ್ಪದವಾಗಿ ಹಾರಾಟ ನಡೆಸುತ್ತಿದ್ದ ವಸ್ತುವೊಂದು ಭಾರತೀಯ ಸರಹದ್ದಿನ ಒಳಹೊಕ್ಕಿರುವ ಸುಳಿವು ಬಿಎಸ್​ಎಫ್​ ಸಿಬ್ಬಂದಿಗೆ ಸಿಕ್ಕಿತು.

ತಕ್ಷಣ ಕಾರ್ಯಪ್ರವೃತ್ತರಾದ ಬಿಎಸ್​ಎಫ್ ಸಿಬ್ಬಂದಿ ಶೂಟ್ ಮಾಡಿ ಅದನ್ನು ಹೊಡೆದುರುಳಿಸಿದ್ದಾರೆ. ಬಳಿಕ ಸುತ್ತುವರಿದು ಸೂಕ್ತ ಮುನ್ನೆಚ್ಚರಿಕೆ ವಹಿಸಿ ಕಪ್ಪು ಬಣ್ಣದ ಚೀನಿ ನಿರ್ಮಿತ ಕ್ವಾಡ್​ಕಾಪ್ಟರ್ (ಮಾಡೆಲ್​-ಡಿಜೆಐ ಮ್ಯಾಟ್ರಿಸ್​-300) ಬಿಎಸ್​​ಎಫ್​ ವಶಕ್ಕೆ ಪಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net