ಸುಶಾಂತ್‌ ಟ್ವಿಟರ್‌ನ ಕಮೆಂಟ್‌ಗಳನ್ನು ಅಳಿಸಲಾಗುತ್ತಿದೆಯೆ? ಪೊಲೀಸರಿಂದ ತನಿಖೆ

sushanthsingh
Published on

ನವದೆಹಲಿ: ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆಯ ಮಾಡಿಕೊಂಡಿದ್ದಾರೆ ಎಂದು ಮರಣೋತ್ತರ ಪರೀಕ್ಷಾ ವರದಿಗಳು ಹೇಳುತ್ತಿದ್ದರೂ, ಎಲ್ಲಾ ನಿಟ್ಟಿನಲ್ಲಿಯೂ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ತನ್ನ ತನಿಖೆಯಲ್ಲಿ ಈವರೆಗೆ ಸುಮಾರು 27 ಜನರ ಹೇಳಿಕೆಗಳನ್ನು ದಾಖಲಿಸಿದ್ದಾರೆ.

ಸುಶಾಂತ್‌ ಸಿಂಗ್‌ ಟ್ವಿಟರ್‌ ಖಾತೆಯಲ್ಲಿ ಕೆಲವೊಂದು ವೈಯಕ್ತಿಕ ವಿಷಯಗಳನ್ನು ಹಂಚಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ, ಅವರ ಟ್ವಿಟರ್‌ ಖಾತೆಯನ್ನು ಸಂಪೂರ್ಣವಾಗಿ ಪರಿಶೀಲಿಸಲು ಪೊಲೀಸರು ಬಯಸಿದ್ದಾರೆ.

ಇವರ ಟ್ವಿಟರ್‌ ಖಾತೆಯಲ್ಲಿನ ಕೆಲವು ಕಮೆಂಟ್‌ಗಳನ್ನು ಅಳಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ, ಇಂಥದ್ದೊಂದು ಮಾಹಿತಿಯನ್ನು ಪೊಲೀಸರು ಬಯಸಿದ್ದಾರೆ.

ಈ ನಿಮಿತ್ತ ಸುಶಾಂತ್‌ ಸಿಂಗ್‌ ಟ್ವಿಟರ್‌ ಖಾತೆ ಮತ್ತು ಅವರ ಚಟುವಟಿಕೆಯ ಬಗ್ಗೆ ವಿವರಗಳನ್ನು ಕಲೆ ಹಾಕುತ್ತಿರುವ ಪೊಲೀಸರು ಟ್ವಿಟರ್ ಇಂಡಿಯಾಕ್ಕೆ ಪತ್ರ ಬರೆದಿದ್ದಾರೆ. ಇವರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಯಾವುದಾದರೂ ವಿಷಯಗಳು ಡಿಲೀಟ್‌ ಆಗಿವೆಯೇ ಎಂಬುದನ್ನು ಪರಿಶೀಲಿಸುವ ಸಂಬಂಧ ಈ ಮಾಹಿತಿಯನ್ನು ಪೊಲೀಸರು ತಿಳಿಯಬಯಸಿದ್ದಾರೆ.

ಸುಶಾಂತ್ ಅವರ ಟ್ವಿಟ್ಟರ್‌ ಖಾತೆಗೆ 2.2 ಮಿಲಿಯನ್ ಫಾಲೋವರ್ಸ್ ಇದ್ದುರು. ಅವರು ಕೊನೆಯದಾಗಿ ಟ್ವೀಟ್ ಮಾಡಿದ್ದುದು 2019ರ ಡಿಸೆಂಬರ್ 27ರಂದು, ಅಕ್ಟೋಬರ್ 2014ರಲ್ಲಿ ಸುಶಾಂತ್ ಟ್ವಿಟ್ಟರ್ ಸೇರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net