

ಸುಶಾಂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಾ ಚಕ್ರವರ್ತಿ ವಿರುದ್ಧ ಹಲವು ಕಾಯ್ದೆ ಅಡಿಯಲ್ಲಿ ದೂರು ದಾಖಲು ಮಾಡಿ ವಿಚಾರಣೆ ನಡೆಸಲಾಗುತ್ತಿದೆ. ಸುಶಾಂತ್ ಬ್ಯಾಂಕ್ ಖಾತೆಯಲ್ಲಿನ ಮೊತ್ತವನ್ನು ರಿಯಾ ಬಳಸಿಕೊಂಡಿದ್ದಾಳೆಂದು ತಂದೆ ಕೆಕೆ ಸಿಂಗ್ ದೂರು ನೀಡಿದ್ದು, ಈಗಾಗಲೇ ಜಾರಿ ನಿರ್ದೇಶನಾಲಯಕ್ಕೆ ಹೇಳಿಕೆಯನ್ನೂ ನೀಡಿದ್ದಾರೆ ರಿಯಾ. ಇದೀಗ ಸುಶಾಂತ್ ಕುಟುಂಬದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.
ಇದನ್ನೂ ಓದಿ: ಆರೋಪಗಳಿಗೆ ರಿಯಲ್ ಗುಂಜನ್ ಸಕ್ಸೇನಾ ಉತ್ತರ
ಸುಶಾಂತ್ ಖಾತೆಯಿಂದ ಹಣವನ್ನು ನಾನು ಪಡೆದುಕೊಂಡಿಲ್ಲ. ಬಳಸಿಕೊಂಡಿಲ್ಲ. ಬೇರಾವ ಖಾತೆಗೂ ವರ್ಗಾವಣೆ ಮಾಡಿಲ್ಲ. ಇದೊಂದು ನಾನ್ಸೆನ್ಸ್. ಸುಶಾಂತ್ ತಂದೆ ಕೆಕೆ ಸಿಂಗ್ ಮಾಡುತ್ತಿರುವ ಆರೋಪಗಳೆಲ್ಲ ಸುಳ್ಳು. ಸತ್ಯಕ್ಕೆ ದೂರವಾಗಿವೆ ಮತ್ತು ಇವೆಲ್ಲವೂ ಕೇವಲ ಕಲ್ಪಿತ ಎಂದು ಹೇಳಿಕೆ ನೀಡಿದ್ದಾರೆ ರಿಯಾ.
ಇದನ್ನೂ ಓದಿ: ಅರ್ಧಂಬರ್ಧ ತಿಳಿದುಕೊಂಡ ನಟಿ … ಕಂಗನಾಗೆ ಷಾ ಟಾಂಗ್
ಇದೊಂದು ಶಡ್ಯಂತ್ರ. ಬೇಕಂತಲೇ ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಹಣ ದುರುಪಯೋಗ ಮಾಡಿಕೊಂಡ ಬಗ್ಗೆ ಒಂದೇ ಒಂದು ಆಧಾರ ತೋರಿಸಲಿ. ಆದಾಯ ತೆರಿಗೆ ಇಲಾಖೆ ದಾಖಲೆಗಳನ್ನೂ ನಾನು ಈಗಾಗಲೇ ಸಂಬಂಧಪಟ್ಟ ಇಡಿ ಅಧಿಕಾರಿಗಳಿಗೆ ನೀಡಿದ್ದೇನೆ. ಅವರೂ ಸಹ ದಾಖಲೆ ಪರಿಶೀಲಿಸಿದ್ದಾರೆ. ಎಲ್ಲಿಯೂ ಒಂದೇ ಒಂದು ನಗದು ವರ್ಗಾವಣೆ ಆಗಿರುವುದು ಕಂಡುಬಂದಿಲ್ಲ. ಜತೆಗೆ ಸುಶಾಂತ್ ಸಹೋದರಿ ಪ್ರಿಯಾಂಕಾ ಈ ಹಿಂದೆ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದರು’ ಎಂದು ಲೀಗಲ್ ಟೀಮ್ ಮೂಲಕ ಹೇಳಿಕೆ ಬಹಿರಂಗ ಪಡಿಸಿದ್ದಾರೆ ರಿಯಾ. (ಏಜೆನ್ಸೀಸ್)