

ಇದು ವೈಜ್ಞಾನಿಕ ಯುಗ. ಆಧುನಿಕ ಖಗೋಳ ವಿಜ್ಞಾನಿಗಳು ಸೂರ್ಯನ ಬಗ್ಗೆ ಹೆಚ್ಚು ಸಂಶೋಧನೆ ನಡೆಸಿ ಕೆಲವು ಅಮೂಲ್ಯವಾದ ಸಂಗತಿಗಳನ್ನು ಹೊರಗೆಡಹಿದ್ದಾರೆ. ಖಗೋಳ ಭೌತಶಾಸ್ತ್ರ (ಆಸ್ಟ್ರೋ ಫಿಸಿಕ್ಸ್) ಎಂಬ ಒಂದು ವಿಜ್ಞಾನದ ಭಾಗವೇ ಇದರ ಅಧ್ಯಯನಕ್ಕೆ ಮೀಸಲಾಗಿದೆ. ಸೂರ್ಯನ ವಿಷಯದಲ್ಲಿ ಇಷ್ಟು ಆಳವಾದ ಜ್ಞಾನ ಹಿಂದೆಂದೂ ಇರಲಿಲ್ಲ. ನಮ್ಮ ಪೂರ್ವಿಕರು ಸಾವಿರಾರು ವರ್ಷಗಳ ಮೊದಲೇ ಸೂರ್ಯನ ಕುರಿತು ಖಗೋಳಶಾಸ್ತ್ರಜ್ಞರಾಗಿ ವೈಜ್ಞಾನಿಕವಾಗಿ ಅಗಾಧ ಜ್ಞಾನರಾಶಿಯನ್ನು ಬಳುವಳಿಯಾಗಿ ನೀಡಿದ್ದಾರೆ. ಇಂದಿನ ಅತ್ಯಾಧುನಿಕ ಉಪಕರಣಗಳು ಸೂರ್ಯನ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಸಂಗ್ರಹಿಸಲು ಅನುಕೂಲವಾಗಿವೆ. ಭೂಮಿಯ ಮೇಲಣ ಜೀವನಕ್ಕೂ ಮತ್ತು ಸೂರ್ಯನಿಗೂ ಇರುವ ಅವಿನಾಭಾವ ಸಂಬಂಧವು ವ್ಯಾಪಕವಾದ ಸಂಶೋಧನೆಯ ವಿಷಯವಾಗಿದೆ.
ಸೂರ್ಯ ಯಾರು?: ಆಧುನಿಕ ವಿಜ್ಞಾನಿಗಳ ದೃಷ್ಟಿಯಲ್ಲಿ ಸೂರ್ಯ ಉರಿಯುತ್ತಿರುವ ಅನಿಲಗಳ ರಾಶಿ. ಇದು ಅತಿ ದೊಡ್ಡದೂ ಅಲ್ಲದ ಅತಿ ಚಿಕ್ಕದೂ ಅಲ್ಲದ ಸಾಧಾರಣ ಹಳದಿ ನಕ್ಷತ್ರ. ಇದು ಗ್ರಹವಲ್ಲ. ನಾವು ರಾತ್ರಿಯ ಕಾಲದಲ್ಲಿ ಆಕಾಶದಲ್ಲಿ ನೋಡುವ ಅಸಂಖ್ಯಾತ ನಕ್ಷತ್ರಗಳಲ್ಲಿ ಇದೂ ಒಂದು. ಇತರ ನಕ್ಷತ್ರಗಳಿಗೆ ಹೋಲಿಸಿದಾಗ ಭೂಮಿಗೆ ಸಮೀಪದಲ್ಲಿ ಇರುವುದರಿಂದ ಜಾಜ್ವಲ್ಯಮಾನನಾಗಿ ಕಾಣುತ್ತಾನೆ.
ಗಾತ್ರ: ಸೂರ್ಯನನ್ನು ಭೂಮಿಗೆ ಹೋಲಿಸಿದಾಗ ಅದೊಂದು ದೈತ್ಯ. ಹತ್ತು ಲಕ್ಷ ಭೂಮಿಗಳನ್ನು ಅದರ ಮೈಯೊಳಗೆ ಹೊರಳಾಡಿಸಬಹುದು. ವ್ಯಾಸ 8.64 ಲಕ್ಷ ಮೈಲಿಗಳು. ಇದರ ಭೂವ್ಯಾಸದ ನೂರರಷ್ಟಕ್ಕೂ ಹೆಚ್ಚು. ಭೂಮಿಯ ವ್ಯಾಸ 7.9 ಸಾವಿರ ಮೈಲಿಗಳು. ಭೂಮಿ ಮತ್ತು ಚಂದ್ರರು ಸೇರಿ 1.14ರಷ್ಟು ಪ್ರಮಾಣ ದೊಡ್ಡದಿದ್ದರೆ ಉಳಿದದ್ದು ಸೌರ್ಯರಾಶಿ 98.86ರಷ್ಟಿದೆ.
ದೂರ: ಸೂರ್ಯ ಅತ್ಯಂತ ಹತ್ತಿರದ ನಕ್ಷತ್ರವಾದರೂ ಭೂಮಿಯಿಂದ ಸರಾಸರಿ 93 ಮಿಲಿಯನ್ ಮೈಲಿ ದೂರದಲ್ಲಿ ದ್ದಾನೆ. ಸೆಕೆಂಡಿಗೆ 186 ಸಾವಿರ ಮೈಲಿ ವೇಗವಾಗಿ ಚಲಿಸುವ ಬೆಳಕು ಸೂರ್ಯನಿಂದ ಭೂಮಿಗೆ ಬರಲು ಎಂಟು ನಿಮಿಷ ಬೇಕು.
ಆಕರ್ಷಣ ಶಕ್ತಿ: ಗಾತ್ರಕ್ಕೆ ಅನುಸಾರವಾಗಿ ಇದರ ಆಕರ್ಷಣೆ ಶಕ್ತಿಯೂ ಸಹ ಅಪಾರ. ಭೂಗ್ರಹದ ಆಕರ್ಷಣ ಶಕ್ತಿಯ ಮೂವತ್ತರಷ್ಟಿದೆ. ಹಾಗಾಗಿ ಸೂರ್ಯ ತನ್ನ ಪರಿವಾರವನ್ನು ಸೆಳೆದು ಹಿಡಿದುಕೊಂಡಿದೆ. ಭೂಮಿಯಂತೆ ಸೂರ್ಯನೂ ಸಹ ತನ್ನ ಅಕ್ಷದ ಸುತ್ತ ಸುತ್ತುತ್ತದೆ.
ಖರತ್ವ: ಸೂರ್ಯನ ಮೇಲ್ಮೆ ೖ ಉಷ್ಣತೆ ಆರು ಸಾವಿರ ಡಿಗ್ರಿ ಸೆಲ್ಸಿಯಸ್. ಸೂರ್ಯನ ನಾಭಿಮಧ್ಯದ ಅಗಾಧ ಉಷ್ಣತೆಯಲ್ಲಿ ಜಲಜನಕದ ಪರಮಾಣುಗಳು ಹೀಲಿಯಂ ಪರಮಾಣುಗಳಾಗಿ ಪರಿವರ್ತನೆಯಾಗುತ್ತಿರುತ್ತವೆ. ಈ ಪರಿವರ್ತನ ಕಾಲದಲ್ಲಿ ಅಗಾಧ ಶಕ್ತಿಯೂ ಬಿಡುಗಡೆ ಆಗುತ್ತದೆ.
ಪಾದ ಹಸ್ತಾಸನ: ಸೂರ್ಯನಮಸ್ಕಾರದ ಊರ್ಧ್ವನಮನಾಸನ ದಿಂದ ಎರಡೂ ಹಸ್ತಗಳನ್ನು ಪಾದಗಳ ಕಡೆಗೆ ತರುವುದು. ಶ್ವಾಸ ಬಿಡುತ್ತ (ರೇಚಕ) ನಿಧಾನವಾಗಿ ಮುಂದೆ ಬಗ್ಗುತ್ತ ಪಾದದ ಎರಡೂ ಕಡೆ ಹಸ್ತಗಳನ್ನು ತರುತ್ತೇವೆ. ಇಲ್ಲಿ ಮಂಡಿಯನ್ನು ಮಡಚಬಾರದು. ಸ್ಪ್ರಿಂಗ್ ಆಕ್ಷನ್ ಬೇಡ. ಸಾಧ್ಯವಾದಷ್ಟು ನೇರವಾಗಿ ಮುಂದೆ ಬಗ್ಗುತ್ತೇವೆ. ಯಾವುದೇ ಕಾರಣಕ್ಕೂ ಬಲಾತ್ಕಾರದ ಚಲನೆ ಬೇಡ. ಮಂಡಿಯನ್ನು ಬಗ್ಗಿಸದೆಯೇ ಹಣೆಯನ್ನು ಮಂಡಿಗೆ ತಾಕಿಸುತ್ತೇವೆ.
ಪರಿಣಾಮ: ಬೊಜ್ಜು ಕರಗಲು ಸಹಾಯಕ. ಬೆನ್ನು ಹಾಗೂ ಸೊಂಟಕ್ಕೆ ಬಲವನ್ನು ನೀಡುತ್ತದೆ. ಅತಿಯಾದ ಬಿ.ಪಿ., ಸ್ಪಾಂಡಿಲೈಟಿಸ್ ಹಾಗೂ ಕುತ್ತಿಗೆ ನೋವು ಇರುವವರು ಖಂಡಿತ ಈ ಆಸನದ ಅಭ್ಯಾಸ ಮಾಡಬಾರದು.