

ಕುಂಭಕೋಣಂನ ಈ ದೇವಸ್ಥಾನದಲ್ಲಿ ಸೂರ್ಯನೇ ಪ್ರಮುಖ ಆರಾಧ್ಯದೇವರು. ಜತೆಗೆ ಕಾಶಿ ವಿಶ್ವನಾಥ, ವಿಶಾಲಾಕ್ಷಿ, ಚಂದ್ರ, ಅಂಗಾರಕ, ಬುಧ, ಬೃಹಸ್ಪತಿ, ಶುಕ್ರ, ಶನೈಶ್ಚರ, ರಾಹು ಮತ್ತು ಕೇತುವಿನ ಮೂರ್ತಿಗಳೂ ಇವೆ. ದ್ರಾವಿಡ ಶೈಲಿಯಲ್ಲಿರುವ ಈ ದೇವಸ್ಥಾನ 800 ವರ್ಷಗಳಷ್ಟು ಹಳೆಯದು. ಚೋಳ ಸಾಮ್ರಾಜ್ಯದ ದೊರೆಗಳು ಇದರ ಭಕ್ತರಾಗಿದ್ದರು. ಇತ್ತೀಚಿನ ವರ್ಷಗಳಲ್ಲಿ ಸೂರ್ಯನಾರ್ ಕೋಯಿಲ್ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಕಂಜನೂರು ಮತ್ತು ತಿರುಮಂಗಳಕ್ಕುಡಿಯ 1200 ವರ್ಷಗಳಷ್ಟು ಹಳೆಯ ಶಿವ ದೇವಸ್ಥಾನಗಳಿಗೆ ಸಮೀಪದಲ್ಲೇ ಈ ಸೂರ್ಯ ದೇವಸ್ಥಾನ ಇದೆ.