ನಿಮ್ಮ ಮಗನಿಗೆ ಶಿಕ್ಷಣ ನೀಡಿ, ನಿಮ್ಮ ಮಗಳನ್ನು ರಕ್ಷಿಸಿ : ಸೂರ್ಯ ಕುಮಾರ್ ಯಾದವ್

Suryakumar Yadav Posts Educate Your Son Instagram Story Amid Protests Over Kolkata Doctor Case
Published on

ನವದೆಹಲಿ: ಕೋಲ್ಕತ್ತಾದಲ್ಲಿ ಇತ್ತೀಚಿಗೆ ನಡೆದ ವೈದ್ಯೆಯ ಅತ್ಯಾಚಾರ-ಕೊಲೆ ಘಟನೆಯ ಕುರಿತು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಯುತ್ತಿವೆ. ನಟ, ನಟಿಯರು, ಗಣ್ಯರು ಈ ಕುರಿತಾಗಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ​ಸೂರ್ಯಕುಮಾರ್ ಯಾದವ್ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಒಂಸು ಖಡ್ ಸಂದೇಶವನ್ನು ಹಂಚಿಕೊಂಡಿದ್ದಾರೆ.

ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಹಿಳಾ ವೈದ್ಯರ ವಿರುದ್ಧ ನಡೆದ ಅಮಾನುಷ ಘಟನೆಯ ನಂತರ, ಇಡೀ ದೇಶವೇ ಬೆಚ್ಚಿಬಿದ್ದಿದೆ. ಕೋಲ್ಕತ್ತಾದ ಜೊತೆಗೆ ದೇಶದ ಹಲವೆಡೆ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ. ಮತ್ತೊಂದೆಡೆ, ಅನೇಕ ಕ್ರಿಕೆಟಿಗರು ಸಹ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

SuryakumarYadav post

ಸೂರ್ಯಕುಮಾರ್ ಯಾದವ್ ಇನ್​ಸ್ಟಾಗ್ರಾಮ್​​ ಸ್ಟೋರಿಯಲ್ಲಿ "ನಿಮ್ಮ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಿ. ನಿಮ್ಮ ಸಹೋದರರು, ನಿಮ್ಮ ತಂದೆ, ನಿಮ್ಮ ಪತಿ ಮತ್ತು ನಿಮ್ಮ ಸ್ನೇಹಿತರಿಗೆ ಶಿಕ್ಷಣ ನೀಡಿ" ಎಂಬ ಪೋಸ್ಟ್ ಅನ್ನು ಸೂರ್ಯ ಹಂಚಿಕೊಂಡಿದ್ದಾರೆ. ಸೂರ್ಯ ಹಾಕಿರುವ ಈ ಪೋಸ್ಟ್ ಗೆ ನೆಟಿಜನ್ ಗಳು ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಇದುವರೆಗೆ ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾ ಪರ ಒಂದು ಟೆಸ್ಟ್ ಪಂದ್ಯವನ್ನಾಡಿದ್ದಾರೆ. ಅವರು 37 ODI ಪಂದ್ಯಗಳನ್ನು ಆಡಿದ್ದಾರೆ ಮತ್ತು 773 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ ಅವರು 4 ಅರ್ಧಶತಕಗಳನ್ನು ಗಳಿಸಿದರು. ಇದುವರೆಗೆ ಅವರು ಟೀಂ ಇಂಡಿಯಾ ಪರ 71 ಟಿ20 ಪಂದ್ಯಗಳನ್ನು ಆಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net