ಸರ್ಕಾರಿ ಶಾಲೆ ಒತ್ತುವರಿಯಾಗಿದ್ದಲ್ಲಿ ಸರ್ವೇ

14ss1samanya sabhe
ನಿಡ್ತ ಗ್ರಾಪಂ ಆಡಳಿತ ಮಂಡಳಿ ಸಾಮಾನ್ಯ ಸಭೆ ಅಧ್ಯಕ್ಷ ಅಶೋಕ್ ಅಧ್ಯಕ್ಷತೆಯಲ್ಲಿ ನಡೆಯಿತು. ಉಪಾಧ್ಯಕ್ಷೆ ಸುಮಿತ್ರಾ, ಪಿಡಿಒ ಮಾನಸಾ ಇದ್ದರು.
Published on

ಶನಿವಾರಸಂತೆ: ಸಮಿಪದ ನಿಡ್ತ ಗ್ರಾಪಂ ಆಡಳಿತ ಮಂಡಳಿಯ ಸಾಮಾನ್ಯ ಸಭೆ ಅಧ್ಯಕ್ಷ ಟಿ.ಕೆ.ಅಶೋಕ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.

ಸಭೆಯಲ್ಲಿ ಸದಸ್ಯರು ಗ್ರಾಪಂ ವ್ಯಾಪ್ತಿಯಲ್ಲಿ ನಡೆಯಬೇಕಾಗಿರುವ ವಿವಿಧ ಕಾಮಗಾರಿಗಳ ಬಗ್ಗೆ ಚರ್ಚಿಸಿದರು. ಸದರಿ ಗ್ರಾಪಂಗೆ ಒಳಪಟ್ಟ ಜಾನುವಾರುಗಳ ದೊಡ್ಡಿ ಹರಾಜು ಪ್ರಕ್ರಿಯೆ ಮುಗಿದ ನಂತರ ಗ್ರಾಪಂ ವ್ಯಾಪ್ತಿಯಲ್ಲಿ ಮೀನು ಸಾಕಾಣಿಕೆಗಾಗಿ ಕೆರೆಗಳ ಹರಾಜು ಪ್ರಕ್ರಿಯೆಯನ್ನು ನಡೆಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ನಿಡ್ತ ಗ್ರಾ.ಪಂ. ವ್ಯಾಪ್ತಿಗೆ ಸೇರಿದ ಸರ್ಕಾರಿ ಶಾಲೆಗಳ ಒತ್ತುವರಿಯಾಗಿರುವ ಜಾಗಗಳ ಬಗ್ಗೆ ಸಧ್ಯದಲ್ಲಿ ಸರ್ವೇ ಕಾರ್ಯವನ್ನು ನಡೆಸುವಂತೆ ಸಭೆಯಲ್ಲಿ ಒಮ್ಮತ್ತದಿಂದ ತೀರ್ಮಾನಿಸಲಾಯಿತು.

ಇಕ್ಕಟ್ಟಾಗಿರುವ ಗ್ರಾಪಂ ಕಚೇರಿಯನ್ನು ಇನ್ನಷ್ಟು ಮಾರ್ಪಾಡು ಮಾಡಿ ಸಾರ್ವಜನಿಕ ಸೇವೆಗಳಿಗೆ ಪೂರವಾಗುವ ರೀತಿಯಲ್ಲಿ ಅಭಿವೃದ್ಧಿ ಪಡಿಸುವಂತೆ ಸಭೆಯಲ್ಲಿ ಸದಸ್ಯರು ಚರ್ಚಿಸಿದರು. ಸದರಿ ಗ್ರಾ.ಪಂ.ಗೆ ಸೇರಿದ ಗೋಪಾಲಪುರ ಜಂಕ್ಸನ್ ಬಳಿಯ ಬಸ್ ತಂಗುದಾಣದ ಪಕ್ಕದಲ್ಲಿ ಹೈ ಮಾಸ್ಟ್ ದೀಪ ಅಳವಡಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ವಡೆಯನಪುರ ಗ್ರಾಮದ ರುದ್ರಭೂಮಿ ಜಾಗಗಳಿಗೆ ಪಹಣಿ ಪತ್ರ ಇದ್ದು ಸರಿಯಾದ ರೀತಿಯಲ್ಲಿ ಹಂಚಿಕೆ ಮಾಡಿ ನಕ್ಷೆ ತಯಾರಿಸಿ ಮತ್ತು ಜಾಗವನ್ನು ಹಂಚಿಕೆ ಮಾಡುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ನಿಡ್ತ ಸರ್ಕಾರಿ ಪ್ರೌಢಶಾಲೆ ಪಕ್ಕದಲ್ಲಿ ಹಳೇ ಕಟ್ಟಡಗಳು ಶಿಥಿಲ ಸ್ಥಿತಿಯಲ್ಲಿರುವ ಕಟ್ಟಡಗಳನ್ನು ಕೆಡವಿ ತರೆವುಗೊಳಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಸುಮಿತ್ರಾ ಮಹೇಶ್, ಗ್ರಾಪಂ ಸರ್ವ ಸದಸ್ಯರು, ಪಿಡಿಒ ಮಾನಸಾ, ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net