ಶರಣರ ಸ್ಮರಣೋತ್ಸವ, ಪ್ರಶಸ್ತಿ ಪ್ರದಾನ ಅ. 26ರಂದು

je721538035802367-abc
Published on

ರಾಣೆಬೆನ್ನೂರ: ಇಲ್ಲಿಯ ಅನುಭವ ಮಂಟಪದ ಶರಣ ಬಳಗ, ಬಸವ ಕೇಂದ್ರ ಹಾಗೂ ಬಸವಜ್ಯೋತಿ ಮಹಿಳಾ ಮಂಡಳ ಸಹಯೋಗದೊಂದಿಗೆ ಶರಣರ ಸ್ಮರಣೋತ್ಸವ ಕಾರ್ಯಕ್ರಮ ಹಾಗೂ ಬಸವಜ್ಯೋತಿ ಸೇವಾ ಟ್ರಸ್ಟ್ ಪ್ರಶಸ್ತಿ ಪ್ರದಾನ ಸಮಾರಂಭ ಅ. 26ರಂದು ಬೆಳಗ್ಗೆ 10.30ಕ್ಕೆ ಇಲ್ಲಿಯ ಹೊಸನಗರದ ರೋಟರಿ ಶಾಲೆಯ ಹತ್ತಿರದ ಭಕ್ತಿ ಭವನದಲ್ಲಿ ಜರುಗಲಿದೆ.
ಇಳಕಲ್ಲ ಚಿತ್ತರಗಿಬಿಜಯ ಮಹಾಂತೇಶ್ವರ ಮಠದ ಗುರುಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ವಕೀಲ ಎ.ಎಂ. ನಾಯಕ ಉದ್ಘಾಟಿಸುವರು. ಬಾಬಣ್ಣ ಐರಣಿ ಶೆಟ್ಟರ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net